ಈ ದಿನ ಸಂಪಾದಕೀಯ | ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ; ಅನುಷ್ಠಾನಕ್ಕೂ ಇರಲಿ ಆದ್ಯತೆ

Date:

Advertisements
ಗ್ಯಾರಂಟಿ ಯೋಜನೆ, ಬರ ಪರಿಹಾರದ ಹೊರೆಯ ನಡುವೆ ಸಿದ್ದರಾಮಯ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿಲ್ಲ. ಒಟ್ಟು ಬಜೆಟ್‌ನಲ್ಲಿ 12%ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರದ ಪುನರುಜ್ಜೀವನಕ್ಕೆ ಮೀಸಲಿಟ್ಟಿರುವುದು ನಿಜಕ್ಕೂ ಶ್ಲಾಘನೀಯ

 

ಸಮಾಜದ ಸರ್ವತೋಮುಖ ಬೆಳವಣಿಗೆಯನ್ನು ಬಯಸುವ ಮತ್ತು ಸಮಾಜದ ಅಭಿವೃದ್ಧಿಯ ಗುರಿ ಇರುವ ಯಾವುದೇ ಸರ್ಕಾರ ತನ್ನ ಆದ್ಯತೆ ನೀತಿ ನಿರೂಪಣೆಯಲ್ಲಿ ಶೋಷಿತ ಜನರ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡುತ್ತದೆ. ಹಾಗೆಯೇ ಆ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲಕ್ಕೆತ್ತಲು ಉಚಿತ ಯೋಜನೆಗಳಂತಹ ತಾತ್ಕಾಲಿಕ ಸಹಾಯ ಮಾತ್ರ ಮಾಡಿದರೆ ಸಾಲದು. ದೀರ್ಘಕಾಲಿಕ ದೃಷ್ಟಿಕೋನದಿಂದ ಯೋಜನೆಗಳನ್ನು ರೂಪಿಸಬೇಕು. ಶಿಕ್ಷಣ ಒಂದೇ ಎಲ್ಲ ಸಮುದಾಯಗಳನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಸಾಧ್ಯ.

ಬಾಬಾ ಸಾಹೇಬರ ಸಂದೇಶವೂ ಅದೇ ಆಗಿತ್ತು. ಈ ನಿಟ್ಟಿನಲ್ಲಿ ನೋಡಿದರೆ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿಯಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಯೋಜನೆಗಳನ್ನು ಕೊಟ್ಟಿದ್ದರು. ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳ ಹಸಿವು, ಅಪೌಷ್ಟಿಕತೆ ನೀಗಿಸುವ ಕ್ಷೀರ ಭಾಗ್ಯ, ಮೊಟ್ಟೆ ಭಾಗ್ಯದಂತಹ ಯೋಜನೆಗಳನ್ನು ನೀಡಿದ್ದರು. ಇಂದು ಮಂಡಿಸಿದ 2024-25ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುದಾನ, ಘೋಷಿಸಿದ ಹೊಸ ಯೋಜನೆಗಳು ನಿಜಕ್ಕೂ ಶಿಕ್ಷಣ ಕ್ಷೇತ್ರ, ಬಡವರ ಮಕ್ಕಳ ಬಗ್ಗೆ ಸರ್ಕಾರಕ್ಕಿರುವ ಕಾಳಜಿಯನ್ನು ತೋರಿಸುತ್ತಿದೆ. ಬಜೆಟ್‌ ಗಾತ್ರ ರೂ. 3,71,383 ಕೋಟಿ. ಅದರಲ್ಲಿ ಶೇ.12 (44,422 ಕೋಟಿ) ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದೆ. ಕರ್ನಾಟಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ಹೂಡಿದ ದಕ್ಷಿಣ ಭಾರತದ ಆರನೇ ರಾಜ್ಯವಾಗಿದೆ. ಮೊದಲ ಐದು ರಾಜ್ಯಗಳೆಂದರೆ ಮಹಾರಾಷ್ಟ್ರ, ಗೋವಾ,ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ.

ಹಾಗೆ ನೋಡಿದರೆ ಗ್ಯಾರಂಟಿ ಯೋಜನೆ, ಬರ ಪರಿಹಾರದ ಹೊರೆಯ ನಡುವೆ ಸಿದ್ದರಾಮಯ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿಲ್ಲ. ಶಾಲೆಗಳ ಪುನರುಜ್ಜೀವನಕ್ಕೆ ಇಷ್ಟೊಂದು ಘೋಷಣೆ ಮಾಡಿರುವುದು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುವ ಸಂಗತಿ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಚಾರಿ ಕುರಿಗಾಹಿ ಮಕ್ಕಳಿಗೆ ವಸತಿ ಶಾಲೆ ಪ್ರವೇಶಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿವೇತನ ನೀಡುವ ಯೋಜನೆ ಘೋಷಿಸಿದೆ. ಇದು ಸಿದ್ದರಾಮಯ್ಯ ಅವರ ತಳಮಟ್ಟದ ಜನರ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ. ಆದರೆ, ಘೋಷಿಸಿದ್ದನ್ನು ಶೇ 100ರಷ್ಟು ಜಾರಿಗೆ ತರುವ ಬದ್ಧತೆಯನ್ನೂ ತೋರಿಸಬೇಕಿದೆ.

Advertisements

ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜುಗಳ ಮೂಲಭೂತ ಸೌಕರ್ಯಕ್ಕೆ ನೂರಾರು ಕೋಟಿಯ ಯೋಜನೆ ಘೋಷಿಸಿದೆ. ಶಾಲೆಗಳ ಉನ್ನತೀಕರಣ, ವಿಜ್ಞಾನ ಪ್ರಯೋಗಾಲಯ, ಕಟ್ಟಡ ದುರಸ್ತಿ, ಹೊಸ ಕಟ್ಟಡ, ಹೊಸ ಹಾಸ್ಟೆಲ್‌, ಇನ್ನಷ್ಟು ವಸತಿ ಶಾಲೆಗಳು ಶಿಕ್ಷಕರ ನೇಮಕವೂ ಸೇರಿದೆ. ಆದರೆ, ಚಂದದ ಕಟ್ಟಡ, ಮೂಲಭೂತ ಸೌಕರ್ಯ ಕೊಟ್ಟರಷ್ಟೇ ಸಾಲದು. ಅಲ್ಲಿ ಉತ್ತಮ ಶಿಕ್ಷಕರು, ಯೋಜನಾಬದ್ಧ ಕಾರ್ಯಕ್ರಮಗಳೂ ಬೇಕು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳು ಬಡವರ ಮಕ್ಕಳು. ಬಹುತೇಕ ಪೋಷಕರು ಬಡ ಕೂಲಿಕಾರ್ಮಿಕರು, ಅನಕ್ಷರಸ್ಥರೂ. ಹಾಗಾಗಿ ಅವರಿಗೆ ಮನೆಯಲ್ಲಿ ಹೆಚ್ಚುವರಿ ಓದಿಗೆ ಪೂರಕ ವಾತಾವರಣ, ಸೌಲಭ್ಯ ಇರುವುದಿಲ್ಲ. ಹೊರಗೆ ಟ್ಯೂಷನ್‌ಗೆ ಕಳುಹಿಸಲು ಆರ್ಥಿಕ ಸ್ಥಿತಿ ಅಡ್ಡಿಯಾಗಿರುತ್ತದೆ. ಹಾಗಾಗಿ ಅವರಿಗೆ ಶಾಲೆ ಕಾಲೇಜುಗಳಲ್ಲಿ ಸಿಗುವ ಸಾಮಾನ್ಯ ಶಿಕ್ಷಣಕ್ಕಿಂತ ಹೆಚ್ಚುವರಿಯಾದ ತರಬೇತಿಯನ್ನು ಸರ್ಕಾರವೇ ಯೋಜಿಸಿ ನೀಡುವ ಅಗತ್ಯವಿದೆ. ಉದಾಹರಣೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕೆಲವು ಗಣಿತ, ವಿಜ್ಞಾನ ವಿಷಯ, ಇಂಗ್ಲಿಷ್‌ ಭಾಷೆಯ ಕಲಿಕೆಯಲ್ಲಿ ಹಿಂದೆ ಇರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ಸಿದ್ಧಗೊಳಿಸುವುದು ಕೂಡಾ ಸವಾಲಾಗಿದೆ. ಅಂತಹ ಮಕ್ಕಳಿಗೆ ನೆರವಿನ ಅಗತ್ಯವಿದೆ.

ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್‌ನಲ್ಲಿ ಇಂತಹ ಹಲವು ಸೂಕ್ಷ್ಮ ಸವಾಲುಗಳಿಗೂ ಪರಿಹಾರ ಕಂಡುಕೊಳ್ಳುವ ಪಯತ್ನ ಕಾಣುತ್ತದೆ. ಉದಾಹರಣೆಗೆ 3ರಿಂದ 5ನೇ ತರಗತಿಯ ಮಕ್ಕಳಿಗೆ ಗಣಿತದ ಆಸಕ್ತಿ ಮೂಡಿಸಲು J-PAL ಸಂಸ್ಥೆಯ ಸಹಯೋಗದಲ್ಲಿ ʼಗಣಿತ-ಗಣಕʼ ಕಾರ್ಯಕ್ರಮ, 6-7 ತರಗತಿಯ ಮಕ್ಕಳಿಗೆ ʼಮರುಚಿಂತನʼ, ಎಲ್ಲ ಶಾಲೆ ಕಾಲೇಜುಗಳಲ್ಲಿʼನಾವು ಮನುಜರುʼ ಎಂಬ ವಾರಕ್ಕೆ ಎರಡು ಗಂಟೆಗಳ ವಿಚಾರ ವಿಮರ್ಶೆ ಕಾರ್ಯಕ್ರಮ, 20 ಸಾವಿರ ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ, ಸಿಇಟಿ ತರಬೇತಿ, 2000 ಸರಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ(ಕನ್ನಡ-ಇಂಗ್ಲಿಷ್‌) ವಾಗಿ ಪರಿವರ್ತಿಸುವುದು ಇವೆಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಯಲ್ಲಿರುವ ತೊಡರುಗಳನ್ನು ನಿವಾರಿಸುವ ಕಾರ್ಯಕ್ರಮಗಳು. ಸರಿಯಾಗಿ ಅನುಷ್ಠಾನಗೊಂಡರೆ ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳ ನಡುವಿನ ದೊಡ್ಡ ಅಸಮಾನತೆಯ ಕಂದಕ ನಿವಾರಣೆಯ ಪ್ರಥಮ ಹೆಜ್ಜೆಯಾಗುವುರಲ್ಲಿ ಸಂದೇಹವಿಲ್ಲ.

ಇದರ ಜೊತೆಗೆ ಹೊಸ ವಸತಿಶಾಲೆಗಳನ್ನು ಘೋಷಿಸುವ ಬದಲು ಇರುವ ವಸತಿ ಶಾಲೆಗಳ ಕುಂದುಕೊರತೆಗಳನ್ನು ನೀಗಿಸುವುದು, ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು, ಶಿಕ್ಷಕರ ಕೊರತೆ ನೀಗಿಸುವುದು, ಗುಣಮಟ್ಟದ ಶಿಕ್ಷಣ, ಮಕ್ಕಳ ಸುರಕ್ಷತೆಯ ಗ್ಯಾರಂಟಿ ಮೊದಲ ಆದ್ಯತೆಯಾಗಬೇಕಿದೆ.

ಅಲ್ಪಸಂಖ್ಯಾತರ ಇಲಾಖೆಯಡಿ ಹೊಸದಾಗಿ ನೂರು ಮೌಲಾನ ಆಝಾದ್‌ ಶಾಲೆಗಳನ್ನು ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಇರುವ ಆಝಾದ್‌ ಶಾಲೆಗಳಿಗೆ ಮಕ್ಕಳ ಕೊರತೆ ಇದೆ ಎಂಬ ದೂರು ಬಹಳ ವರ್ಷಗಳ ಹಿಂದೆಯೇ ಬಂದಿತ್ತು. ಅದರ ಅಗತ್ಯ ಇದೆಯಾ ಎಂದು ಮರು ಪರಿಶೀಲನೆ ಮಾಡುವ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ವರ್ಗದ, ಎಲ್ಲ ಸಮುದಾಯಗಳ ಮಕ್ಕಳು ಮುಕ್ತವಾಗಿ ಬೆರೆತು ಕಲಿಯುವ ವಾತಾವರಣ ಇದೆ, ಇರಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇರುವಾಗ ಇನ್ನಷ್ಟು ಶಾಲೆಗಳ ಸ್ಥಾಪನೆ ಎಷ್ಟು ಸಮಂಜಸ ಎಂದು ಸರ್ಕಾರ ಯೋಚಿಸುವ ಅಗತ್ಯವಿದೆ. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡಿರುವುದು ಪ್ರಶಂಸಾರ್ಹ. ಇದು ಘೋಷಣೆ ಅಷ್ಟೇ ಆಗಿರದೇ ಸಮರ್ಪಕ ಜಾರಿಗೆ ಸರ್ಕಾರ ಬದ್ಧವಾಗಿರಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X