ಈ ದಿನ ಸಂಪಾದಕೀಯ | ‘Failed Product’ ಹಣೆಪಟ್ಟಿ- ರಾಹುಲ್ ವಿರುದ್ಧ ಪುನಃ ಪ್ರಾಪಗ್ಯಾಂಡ ಸಮರ!

Date:

[the_ad id="531600"]

ಆರಂಭದಲ್ಲಿ ‘ಪಪ್ಪು’ ಎಂದು ರಾಹುಲ್ ಅವರನ್ನು ಹೀಯಾಳಿಸಲಾಯಿತು. ಈಗ ‘Failed Product’ ಎಂದು ವ್ಯಂಗ್ಯವಾಡಲಾಗುತ್ತಿದೆ. ಅಪಹಾಸ್ಯದ ಪದಗಳು ಬದಲಾಗಿವೆ. ಆದರೆ ರಾಜಕೀಯ ಉದ್ದೇಶ ಬದಲಾಗಿಲ್ಲ. ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಬೇಕಾದ ನಾಯಕನಲ್ಲ ಎಂಬ ಪ್ರಾಪಗ್ಯಾಂಡವನ್ನು ಕಟ್ಟಿ ನಿಲ್ಲಿಸಿ, ಅದೇ ದಿಕ್ಕಿನಲ್ಲಿ ಜನಾಭಿಪ್ರಾಯ  ಮೂಡಿಸುವುದೇ ಈ ಪ್ರಚಾರದ ಗುರಿ.

- Advertisement -[the_ad id='746851']

‘ಪಪ್ಪು’ ಎಂಬ ಅದೇ ಹಳೆಯ ಅಪಹಾಸ್ಯವನ್ನು ಈಗ ‘Failed Product’ ಎಂದು ಹೊಸದಾಗಿ ಪ್ಯಾಕೇಜ್ ಮಾಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಭಾರತ್ ಜೋಡೋ ಯಾತ್ರೆಯು ಪ್ರತಿಪಕ್ಷ ನಾಯಕ ರಾಹುಲ್ ಗಾಂಧೀ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿದೆ. ಮೋದಿಯವರಿಗೆ ಸರಳಬಹುಮತದ ಜನಾದೇಶ ಕೂಡ ದಕ್ಕದಿರುವ 2024ರ ಲೋಕಸಭಾ ಚುನಾವಣೆ ಹೊಸ ರಾಜಕೀಯ ಸಂದೇಶ ನೀಡಿತ್ತು. ರಾಹುಲ್ ರಾಜಕೀಯ ವರ್ಚಸ್ಸು ಇತ್ತೀಚಿನ ವರ್ಷಗಳಲ್ಲಿ ಹಿಗ್ಗಿದೆಯೇ ವಿನಾ ಕುಗ್ಗಿಲ್ಲ.

[the_ad id="698742"]

ಈ ವಿದ್ಯಮಾನ ಮೋದಿ ಮತ್ತು ಸಂಘಪರಿವಾರವನ್ನು ಹೆಚ್ಚು ಹೆಚ್ಚು ಅಭದ್ರ ಭಾವನೆಗೆ ನೂಕಿರುವುದು ನಿಚ್ಚಳ. ಹೀಗಾಗಿಯೇ ರಾಹುಲ್ ವಿರುದ್ಧ ಹಳೆಯ ದಾಳಿಗೆ ಮರುಜೀವ ನೀಡಲು ಮುಂದಾಗಿದ್ದಾರೆ. ರಾಹುಲ್ ಅವರನ್ನು ಅಸಮರ್ಥ ನಾಯಕನಂತೆ ಬಿಂಬಿಸುವ ಪ್ರಯತ್ನಕ್ಕೆ ಹನ್ನೆರಡು ವರ್ಷಗಳೇ ಉರುಳಿವೆ.

ಹನ್ನೆರಡು ವರ್ಷಗಳ ಕಾಲ ನಿರಂತರ ಅಪಪ್ರಚಾರದ ಅಲೆಗಳ ಅಬ್ಬರದ ಮುಂದೆ ಆಳಕ್ಕೆ ಕಾಲು ಊರಿ ನಿಂತ ಕಾಂಗ್ರೆಸ್ ನಾಯಕ ರಾಹುಲ್. ಮತ್ತೊಬ್ಬರಾಗಿದ್ದರೆ ಈ ಹೊಡೆತ ತಾಳಲಾರದೆ ಬೆನ್ನು ತಿರುಗಿಸುವ ಸಾಧ್ಯತೆ ಇತ್ತು.   

ಎದುರಾಳಿಯನ್ನು ಸೋಲಿಸಲು ವ್ಯಕ್ತಿಯ ಚಾರಿತ್ರ್ಯಹರಣ ಅಥವಾ ವ್ಯಕ್ತಿತ್ವ ಹನನವು ಬಿಜೆಪಿ ಬಳಸುತ್ತ ಬಂದಿರುವ ಅತಿ ದೊಡ್ಡ ಅಸ್ತ್ರ. ಎದುರಾಳಿಯ ವಿಚಾರಗಳನ್ನು ಚರ್ಚಿಸುವ ಬದಲು ಆತನ ವ್ಯಕ್ತಿತ್ವವನ್ನು ಅಪಹಾಸ್ಯಕ್ಕೆ ಈಡು ಮಾಡಿ ಚಾರಿತ್ರ್ಯಕ್ಕೆ ಮಸಿ ಬಳಿಯಲಾಗುತ್ತಿದೆ.

ಆರಂಭದಲ್ಲಿ ‘ಪಪ್ಪು’ ಎಂದು ರಾಹುಲ್ ಅವರನ್ನು ಹೀಯಾಳಿಸಲಾಯಿತು. ಈಗ ‘Failed Product’ ಎಂದು ವ್ಯಂಗ್ಯವಾಡಲಾಗುತ್ತಿದೆ. ಅಪಹಾಸ್ಯದ ಪದಗಳು ಬದಲಾಗಿವೆ. ಆದರೆ ರಾಜಕೀಯ ಉದ್ದೇಶ ಬದಲಾಗಿಲ್ಲ. ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಬೇಕಾದ ನಾಯಕನಲ್ಲ ಎಂಬ ಪ್ರಾಪಗ್ಯಾಂಡವನ್ನು ಕಟ್ಟಿ ನಿಲ್ಲಿಸಿ, ಅದೇ ದಿಕ್ಕಿನಲ್ಲಿ ಜನಾಭಿಪ್ರಾಯ  ಮೂಡಿಸುವುದೇ ಈ ಪ್ರಚಾರದ ಗುರಿ.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ರಾಹುಲ್ ಗಾಂಧಿ ವಿರುದ್ಧದ ಅಪಹಾಸ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ತೀವ್ರಗೊಳಿಸಲಾಗಿತ್ತು. ಅವರ ಭಾಷಣಗಳ ಕತ್ತರಿಸಿ ತಿರುಚಿ ಎಡವಟ್ಟುಗಳನ್ನು ಸೃಷ್ಟಿಸಿ ಅವುಗಳನ್ನು ಹರಿಬಿಡಲಾಯಿತು. ಸಂದರ್ಶನಗಳ ಸಣ್ಣ ತುಣುಕುಗಳನ್ನು ವೈರಲ್ ಮಾಡಲಾಯಿತು. ಅವರನ್ನು ಅಸಮರ್ಥ ನಾಯಕನಂತೆ   ಚಿತ್ರಿಸಲಾಯಿತು.

ಈ ಪ್ರಚಾರದ ಬೆಂಕಿಗೆ ಬಿಜೆಪಿ ಮತ್ತು ಸಂಘ ಪರಿವಾರ ಎಣ್ಣೆ ಎರೆದವು. ಕೇಸರಿ ಸಾಮಾಜಿಕ ಜಾಲತಾಣ ಖಾತೆಗಳೂ ಸಕ್ರಿಯವಾಗಿದ್ದವು. ಆಳುವವರ ಮಡಿಲಲ್ಲಿ ಆಡುವ ‘ಗೋದಿ ಮೀಡಿಯಾ’ ಎಂದು ಕುಖ್ಯಾತವಾಗಿರುವ ‘ಮುಖ್ಯವಾಹಿನಿ’ಯ ಮಾಧ್ಯಮಗಳ ಒಂದು ದೊಡ್ಡ ವರ್ಗವೂ ಈ ವಿಕೃತ ಚಿತ್ರಣಕ್ಕೆ ಶಕ್ತಿ ತುಂಬಿತು.

ರಾಹುಲ್ ಅವರ ವ್ಯಕ್ತಿತ್ವ ಹನನದ ಈ ‘ಪ್ರಚಾರ ಸಮರ’ಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯಲಾಗಿದೆ. ಈ ಮೊತ್ತವನ್ನು ದೇಶದ ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳು ಭರಿಸಿವೆ ಎಂಬ ಆರೋಪಗಳಿವೆ.

ಒಬ್ಬ ನಾಯಕನ ಮಾತನ್ನು ಜನತೆ ಆಲಿಸುವ ಮೊದಲೇ ಆತನ ಬಗ್ಗೆ ಪಕ್ಷಪಾತದ ವಿಕೃತ ತೀರ್ಪು ನೀಡುವ ವಾತಾವರಣವನ್ನು ನಿರ್ಮಿಸಲಾಯಿತು. ರಾಹುಲ್ ಗಾಂಧಿ ಏನು ಹೇಳುತ್ತಾರೆ ಎಂಬುದಕ್ಕಿಂತ ಅವರು ಹೇಗೆ ಮಾತನಾಡುತ್ತಾರೆ ಎಂಬ ಸುಳ್ಳುಗಳ ಕಥಾನಕಗಳನ್ನು ಹೆಣೆದು ಪ್ರಚಾರ ಮಾಡಲಾಯಿತು.

ರಾಹುಲ್ ಎತ್ತಿದ ರಾಜಕೀಯ ಪ್ರಶ್ನೆಗಳು ಹಿನ್ನೆಲೆಗೆ ಸರಿದವು. ವೈಯಕ್ತಿಕ ಅಪಹಾಸ್ಯವನ್ನು ಮುನ್ನೆಲೆಗೆ ತಂದು ನಿಲ್ಲಿಸಲಾಯಿತು..

2022ರಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆ ಈ ಅಪಪ್ರಚಾರಕ್ಕೆ ಸವಾಲೆಸೆಯಿತು.

ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದರು. ಸಾವಿರಾರು ಜನರನ್ನು ಭೇಟಿಯಾದರು. ರೈತರ ಸಂಕಷ್ಟ ಆಲಿಸಿದರು. ಕಾರ್ಮಿಕರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಳಿದರು. ಮಹಿಳೆಯರು ಮತ್ತು ಯುವಜನರೊಂದಿಗೆ ಸಂವಾದ ನಡೆಸಿದರು.

ಇದುವರೆಗೆ ಮಾಧ್ಯಮಗಳಲ್ಲಿ ಕಾಣುತ್ತಿದ್ದ ರಾಹುಲ್ ಗಾಂಧಿಗೂ ಜನರ ನಡುವೆ ಕಾಣಿಸಿಕೊಂಡ ರಾಹುಲ್ ಗಾಂಧಿಗೂ ಅಪಾರ ವ್ಯತ್ಯಾಸವಿತ್ತು. ಅವರ ರಾಜಕೀಯ ವ್ಯಕ್ತಿತ್ವದ ಬಗ್ಗೆ ಹೊಸ ಚರ್ಚೆ ಆರಂಭವಾಯಿತು. ಅವರ ತಾಳ್ಮೆ, ಸಂವಾದ ಶೈಲಿ ಮತ್ತು ಜನಸಂಪರ್ಕದ ಸಾಮರ್ಥ್ಯ ಗಮನ ಸೆಳೆದವು.

ಅವರನ್ನು ಅರೆಕಾಲಿಕ ರಾಜಕಾರಣಿ ಎಂದು ಟೀಕಿಸುತ್ತಿದ್ದವರಿಗೆ ಭಾರತ್ ಜೋಡೋ ಯಾತ್ರೆ ಹೊಸ ಸವಾಲಾಯಿತು. ‘ಪಪ್ಪು’ ಎಂಬ ಹಣೆಪಟ್ಟಿ ಕರಗಿ ಕಳಚಿಕೊಳ್ಳುವ ಪ್ರಕ್ರಿಯೆ ಶುರುವಾಯಿತು.

2024ರ ಲೋಕಸಭಾ ಚುನಾವಣೆ ಈ ಬದಲಾವಣೆಗೆ ಮತ್ತಷ್ಟು ಇಂಬು ನೀಡಿತು. 2019ರಲ್ಲಿ 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2024ರಲ್ಲಿ 240 ಸ್ಥಾನಗಳಿಗೆ ಕುಸಿಯಿತು. ಸ್ವಂತ ಶಕ್ತಿಯ ಮೇರೆಗೆ ಸರಳ ಬಹುಮತ ಪಡೆಯಲೂ ವಿಫಲವಾಯಿತು. ಮತ್ತೊಂದೆಡೆ ಕಾಂಗ್ರೆಸ್ 52 ಸ್ಥಾನಗಳಿಂದ 99 ಸ್ಥಾನಗಳಿಗೆ ಏರಿತು. ರಾಹುಲ್ ಗಾಂಧಿ ರಾಜಕೀಯವಾಗಿ ಮುಗಿದುಹೋದ ನಾಯಕ ಎಂಬ ಪ್ರಚಾರಕ್ಕೆ ಚುನಾವಣಾ ಫಲಿತಾಂಶ ಸವಾಲೆಸೆದಿತ್ತು.

ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾದರು. ಸರ್ಕಾರವನ್ನು ಪ್ರಶ್ನಿಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಅವರು ಸ್ವಯಂಪ್ರೇರಿತರಾಗಿ ಎತ್ತಿಕೊಂಡರು.

‘ಪಪ್ಪು’ ಎಂಬ ಹಳೆಯ ಹಣೆಪಟ್ಟಿಗೆ ಬದಲಾಗಿ ‘Failed Product’ ಎಂಬ ವ್ಯಂಗ್ಯ ಮುನ್ನೆಲೆಗೆ ಬಂದಿದೆ. ಇದರ ರಾಜಕೀಯ ಉದ್ದೇಶವೇನು? ರಾಹುಲ್ ಗಾಂಧಿಯವರ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಪ್ರಶ್ನಿಸುವುದೇ? ಅವರ ಬದಲಾಗುತ್ತಿರುವ ಸಾರ್ವಜನಿಕ ಚಿತ್ರಣವನ್ನು ದುರ್ಬಲಗೊಳಿಸುವುದೇ?

ದೇಶದ ಸಾಮಾಜಿಕ- ರಾಜಕೀಯ- ಆರ್ಥಿಕ ಸ್ಥಿತಿಗತಿಗಳ ಕುರಿತ  ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸತೊಡಗಿದ್ದಾರೆ. ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದಾರೆ. ಆರ್ಥಿಕ ಅಸಮಾನತೆಯನ್ನು ಪ್ರಶ್ನಿಸುತ್ತಿದ್ದಾರೆ. ಜಾತಿಗಣತಿಗೆ ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯನ್ನು ಪ್ರಮುಖ ರಾಜಕೀಯ ವಿಷಯಗಳನ್ನಾಗಿ ಮಾಡಿದ್ದಾರೆ. ಇವು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳೇ ವಿನಾ ವ್ಯಕ್ತಿಗತ ಅಲ್ಲ.

ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರ ನೀಡುವುದು ಆಡಳಿತ ಪಕ್ಷದ ಗುರುತರ ಜವಾಬ್ದಾರಿ. ಮೋದಿಯವರ ಬಳಿ ಉತ್ತರಗಳಿಲ್ಲ. ವ್ಯಕ್ತಿತ್ವವನ್ನು ಅಪಹಾಸ್ಯ ಮಾಡುವುದು ಸುಲಭ. ಹೀಗಾಗಿ ಸುಲಭದ ದಾರಿ ಹಿಡಿಯಲಾಗಿದೆ.

ರಾಹುಲ್ ಗಾಂಧಿಯವರ ರಾಜಕೀಯ ಚಟುವಟಿಕೆ ಹೆಚ್ಚಾಗಿದೆ. ಸಾರ್ವಜನಿಕ ಚರ್ಚೆಗಳಲ್ಲಿ ಅವರ ಪ್ರಸ್ತುತಿಯೂ ಬದಲಾಗಿದೆ. ವಿರೋಧ ಪಕ್ಷದ ನಾಯಕರಾಗಿ ಅವರು ಸರ್ಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಇದು ಬಿಜೆಪಿಗೆ ರಾಜಕೀಯ ಸವಾಲು ಎಂಬುದರಲ್ಲಿ ಅನುಮಾನವಿಲ್ಲ.

ರಾಹುಲ್ ಗಾಂಧಿಯವರ ವಿಚಾರಗಳನ್ನು ಎದುರಿಸುವ ಬದಲು ಅವರ ವ್ಯಕ್ತಿತ್ವವನ್ನೇ ಗುರಿಯಾಗಿಸುವ ಪ್ರಯತ್ನ ಏಕೆ ಮುಂದುವರಿದಿದೆ ಎಂಬ ಪ್ರಶ್ನೆಗೆ ಬಿಜೆಪಿ ಉತ್ತರ ನೀಡಬೇಕಿದೆ.

ರಾಹುಲ್ ಗಾಂಧಿಯವರ ಸಾರ್ವಜನಿಕ ಚಿತ್ರಣ ಬದಲಾಗಿದೆ. ಆದರೆ ರಾಜಕೀಯ ಯಶಸ್ಸಿನ ಖಾತರಿ ಇನ್ನೂ ಇಲ್ಲ.

ಕಾಂಗ್ರೆಸ್ ಈಗಲೂ ಹಲವು ರಾಜ್ಯಗಳಲ್ಲಿ ದುರ್ಬಲವಾಗಿದೆ. ಪಕ್ಷದ ಸಂಘಟನೆ ಬಲಗೊಳ್ಳಬೇಕಿದೆ. ಚುನಾವಣಾ ತಂತ್ರಗಾರಿಕೆ  ದಷ್ಟಪುಷ್ಟ ಆಗಬೇಕಿದೆ. ಜನರ ವಿಶ್ವಾಸವನ್ನು ಮತಗಳಾಗಿ ಪರಿವರ್ತಿಸುವುದು ರಾಹುಲ್ ಕಾಂಗ್ರೆಸ್ಸಿನ ಮುಂದಿರುವ ಸವಾಲು. ಜನಪ್ರಿಯತೆಯೊಂದೇ ಸಾಲದು. ಪರ್ಯಾಯ ಆಡಳಿತದ ಸ್ಪಷ್ಟ ಕಾರ್ಯಕ್ರಮ ನೀತಿ ನಿರೂಪಣೆಗಳೂ ಬೇಕು.

ರಾಜಕೀಯ ಟೀಕೆ ಟಿಪ್ಪಣಿಗಳು ಜನತಂತ್ರದ ಜೀವಾಳ. ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸಬೇಕು. ವೈಫಲ್ಯಗಳನ್ನು ಚರ್ಚಿಸಬೇಕು. ಕೊಚ್ಚಿಕೊಳ್ಳುವ ಸಾಧನೆಗಳನ್ನು ವಿಮರ್ಶೆಯ ಒರೆಗೆ ಹಚ್ಚಬೇಕು. ವೈಯಕ್ತಿಕ ಅಪಹಾಸ್ಯ ರಾಜಕೀಯ ವಿಮರ್ಶೆಗೆ ಪರ್ಯಾಯ ಆಗಬಾರದು.

‘ಪಪ್ಪು’ ಅಥವಾ ‘Failed Product’ ಎಂಬ ಹಣೆಪಟ್ಟಿಗಳು ಗಂಭೀರ ಚರ್ಚೆಗೆ ನೆರವಾಗುವುದಿಲ್ಲ. ಅವು ರಾಜಕೀಯ ಸಂವಾದವನ್ನು ವ್ಯಕ್ತಿಕೇಂದ್ರಿತ ಸಂಘರ್ಷಕ್ಕೆ ಸೀಮಿತಗೊಳಿಸುತ್ತವೆ.

ಹನ್ನೆರಡು ವರ್ಷಗಳ ಅಪಹಾಸ್ಯದ ನಡುವೆಯೂ ರಾಹುಲ್ ಗಾಂಧಿ ದೇಶದ ವಿರೋಧ ಪಕ್ಷಗಳ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ವಿದ್ಯಮಾನವು ಮೋದಿ ಅಪಪ್ರಚಾರದ ಮಿತಿಯನ್ನೂ ಬಯಲು ಮಾಡಿದೆ.

ರಾಜಕೀಯ ಎದುರಾಳಿಯನ್ನು ಅಪಹಾಸ್ಯದಿಂದ ಸೋಲಿಸಬಹುದು ಎಂಬ ತಂತ್ರಗಾರಿಕೆ ಎಲ್ಲ ಕಾಲಕ್ಕೂ ಯಶಸ್ಸು ನೀಡುವುದಿಲ್ಲ. ಜನರ ಅನುದಿನದ ಬದುಕಿನ ಪ್ರಶ್ನೆಗಳಿಗೆ ಉತ್ತರ ನೀಡದೆ, ಪ್ರಶ್ನೆಗಳನ್ನು ಕೇಳುವವರಿಗೆ ಹಣೆಪಟ್ಟಿಗಳನ್ನು ಹಚ್ಚುವ ಮೂಲಕ ರಾಜಕೀಯ ಗೆಲುವು ಸಾಧನೆ ತಾತ್ಕಾಲಿಕ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

[the_ad id="775325"]

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

[the_ad id="775073"]
[the_ad id="776863"]
[the_ad id="775211"]
[the_ad id="762284"]
[the_ad id="760509"]
[the_ad id="749695"]
[the_ad id="774953"]
[the_ad id='722693']
[the_ad id="720643"]
[the_ad id="720610"]
[the_ad id="699895"]
[the_ad id="714274"]
[the_ad id="737226"]

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಸಾರ್ವತ್ರಿಕ ಚುನಾವಣೆ | ನೆತನ್ಯಾಹು ಸರ್ಕಾರದ ವಿರುದ್ಧ ಬೀದಿಗಿಳಿದ ಸಾವಿರಾರು ಇಸ್ರೇಲಿಗಳು

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಇರುವಾಗ, ಪ್ರಧಾನಿ ಬೆಂಜಮಿನ್...

ಬ್ರೆಜಿಲ್ ಚುನಾವಣೆ: ಅಮೆರಿಕದ ಬೆಂಬಲವಿದ್ದೂ ಸೋತ ಬೋಲ್ಸೊನಾರೊ; ಎಡಪಂಥೀಯ ನಾಯಕ ಲುಲಾಗೆ ಗೆಲುವು

ಬ್ರೆಜಿಲ್‌ನಲ್ಲಿ ಭಾನುವಾರ ನಡೆದ ತೀವ್ರ ಕುತೂಹಲಕಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ,...

ಶಿವಮೊಗ್ಗ | ಗ್ರಾ.ಪಂ ಕೆರೆಗಳ ಒತ್ತುವರಿ ತೆರವಿಗೆ ಈಶ್ವರ ಖಂಡ್ರೆ ಖಡಕ್ ಸೂಚನೆ

ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಗಳ ಸ್ವಾಧೀನದಲ್ಲಿರುವ ಒಟ್ಟು 4351 ಕೆರೆಗಳ ಪೈಕಿ...

ಸೆರ್ಬಿಯಾದಲ್ಲಿ 12 ವರ್ಷಗಳ ವುಚಿಚ್ ಆಡಳಿತ ಅಂತ್ಯ; ವಿದ್ಯಾರ್ಥಿ ಹೋರಾಟಕ್ಕೆ ಚುನಾವಣಾ ಜಯ

ಯುರೋಪಿನ ಸೆರ್ಬಿಯಾದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ನೇತೃತ್ವದ ಭ್ರಷ್ಟಾಚಾರ...