ಎಸ್ಸೆಸ್ಸೆಲ್ಸಿ (ಐಸಿಎಸ್‌ಸಿ) ಮತ್ತು ದ್ವಿತೀಯ ಪಿಯುಸಿ (ಐಎಸ್‌ಸಿ) ಫಲಿತಾಂಶ ಮೇ 14 ರಂದು ಪ್ರಕಟಣೆಯಾಗಲಿದೆ ಎಂದುಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌ನ (ಸಿಐಎಸ್‌ಸಿಐ) ಹೇಳಿದೆ.
ಈಗಾಗಲೇ ಸಿಬಿಎಸ್‌ಸಿ ಫಲಿತಾಂಶವಾಗಿದೆ. ಈಗ ಐಸಿಎಸ್‌ಸಿ, ಐಎಸ್‌ಸಿ ಭಾನುವಾರ ಸಂಜೆ 3 ಗಂಟೆಗೆ ಪ್ರಕಟಣೆಯಾಗಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಥನ್ ಶನಿವಾರ ಹೇಳಿದ್ದಾರೆ.
10 ಮತ್ತು 12ನೇ ತರಗತಿಯ ಐಸಿಎಸ್‌ಸಿ, ಐಎಸ್‌ಸಿ ಪರೀಕ್ಷೆಗಳು ಫೆಬ್ರುವರಿ ಮತ್ತು ಮಾರ್ಚ್ ಮಾಹೆಯಲ್ಲಿ ನಡೆಸಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು Results.cisce.org, Cisice.org, Cisceresults.in ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಬಿಎಸ್‌ಇ ಫಲಿತಾಂಶ: ಎರಡನೇ ಸ್ಥಾನ ಪಡೆದ ಸಿಲಿಕಾನ್ ಸಿಟಿ