ಕಲ್ಯಾಣ ಕರ್ನಾಟಕ ಭಾಗದ ಮೂರು ಜಿಲ್ಲೆಗಳು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಯತಾಸ್ಥಿತಿ ಕಾಯ್ದುಕೊಂಡಿವೆ. ಯಾದಗಿರಿ, ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳು ಫಲಿತಾಂಶದಲ್ಲಿ ಹೆಚ್ಚಿನ ರ‍್ಯಾಂಕ್ ಪಡೆಯದಿದ್ದರೂ ಉತ್ತೀರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.
ವಿಜಯನಗರ ಜಿಲ್ಲೆ ಕಳೆದ ಬಾರಿಯಂತೆ ಈ ಬಾರಿಯೂ ಫಲಿತಾಂಶದಲ್ಲಿ 10ನೇ ರ‍್ಯಾಂಕ್ ಪಡೆದಿದೆ. ಆದರೆ ಶೇಕಡವಾರು ಫಲಿತಾಂಶದಲ್ಲಿ ವಿನೂತನ ಸಾಧನೆ ಮಾಡಿದೆ. 2025ರಲ್ಲಿ ಶೇ.86.75ರಷ್ಟಿದ್ದ ಶೇಕಡಾವಾರು ಫಲಿತಾಂಶ 2026ನೇ ಸಾಲಿನಲ್ಲಿ ಶೇ.10ರಷ್ಟು ಹೆಚ್ಚಾಗಿದೆ. ಈ ಬಾರಿ ಶೇ.96.39ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಬಳ್ಳಾರಿ ಜಿಲ್ಲೆಯೂ ಕೂಡ ಈ ಬಾರಿ 24ನೇ ರ‍್ಯಾಂಕ್‌ನಲ್ಲಿಯೇ ಉಳಿದುಕೊಂಡಿದೆ. ಆದರೆ ಎಸ್‌ಎಸ್‌ಎಲ್‌ಸಿ ಶೇಕಡಾವಾರು ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆಯ ಸಾಧನೆ ಗಮನಾರ್ಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2025ರಲ್ಲಿ ಶೇ.79.30ಯಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2026ರಲ್ಲಿ ಉತ್ತೀರ್ಣರಾದವರ ಸಂಖ್ಯೆ ಶೇ.14ರಷ್ಟು ಏರಿಕೆಯಾಗಿದ್ದು, ಒಟ್ಟು 93.36ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯೂ 2025ರಲ್ಲಿ ಗಳಿಸಿದ್ದ 25ನೇ ರ‍್ಯಾಂಕ್‌ನಲ್ಲೇ ಉಳಿದುಕೊಂಡಿದೆ. ಆದರೆ ತೇರ್ಗಡೆ ಪ್ರಮಾಣದಲ್ಲಿ ವಿಫುಲ ಸಾಧನೆ ದಾಖಲಾಗಿದ್ದು, 2025ರಲ್ಲಿ ಶೇಕಡಾ 78.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2026ರಲ್ಲಿ ಶೇಕಡವಾರು ತೇರ್ಗಡೆಯ ಪ್ರಮಾಣ 15ರಷ್ಟು ಹೆಚ್ಚಾಗಿದ್ದು, 93.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಯಾದಗಿರಿಯ ಅಚ್ಚರಿಯ ಸಾಧನೆಗೈದಿದ್ದು, ಕಳೆದ ಬಾರಿ ಶೇ.62ರಷ್ಟಿದ್ದ ತೇರ್ಗಡೆಯ ಪ್ರಮಾಣ ಈ ಬಾರಿ ಶೇ.91.89ಕ್ಕೆ ಏರಿಕೆಯಾಗಿದೆ. ಈ ಮೂಲಕ ಯಾದಗಿರಿ ಶೇ.29ರಷ್ಟು ಹೆಚ್ಚಳಕಂಡಿದ್ದು. ಪ್ರತಿಬಾರಿ ಶೇಕಡವಾರು ಉತ್ತೀರ್ಣ ಪ್ರಮಾಣದಲ್ಲಿ ಹಿಂದುಳಿಯುತ್ತಿದ್ದ ಜಿಲ್ಲೆಯ ಈ ಬಾರಿಯ ಸಾಧನೆ ಗಮನಾರ್ಹವಾಗಿದೆ. ಇದು ಯಾದಗಿರಿಯ ಒಟ್ಟಾರೆ ಶೈಕ್ಷಣಿಕ ಸುಧಾರಣೆಗೆ ಸಾಕ್ಷಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಸೇರ್ಪಡೆ: ಶಾಸಕ ಉದಯ್ ವಿರುದ್ಧ ರವಿಕೃಷ್ಣಾರೆಡ್ಡಿ ಆಕ್ರೋಶ
ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಜಯನಗರ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ರಾಯಚೂರು, ವಿಜಯಪುರ ಜಿಲ್ಲೆಗಳು ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.





