ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 22ರಿಂದ ಜೂನ್ 2ರವರೆಗೆ ಪರೀಕ್ಷೆಗಳು ನಡೆಯಲಿವೆೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 21 ರಂದು ಪ್ರಕಟವಾಗಿತ್ತು. ಫಲಿತಾಂಶದಲ್ಲಿ ಅಗತ್ಯವಿರುವ ಕನಿಷ್ಠ ಅಂಕಗಳನ್ನು ಪಡೆಯಲು ವಿಫಲರಾದ ಅಭ್ಯರ್ಥಿಗಳು ಮತ್ತು ಗಳಿಸಿದ ಅಂಕಗಳಲ್ಲಿ ತೃಪ್ತಿಯಿಲ್ಲದ ವಿದ್ಯಾರ್ಥಿಗಳು ಮತ್ತೊಮ್ಮೆ ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಬಹುದಾಗಿತ್ತು.
ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ ಏಪ್ರಿಲ್ 21ರಿಂದ ಏಪ್ರಿಲ್ 26ರ ವರೆಗೆ ಅವಕಾಶ ನೀಡಲಾಗಿತ್ತು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.9 ರಿಂದ 29 ರವರೆಗೆ ನಡೆದಿದ್ದವು. ಈ ವರ್ಷ, ವಿಜ್ಞಾನ ವಿಭಾಗದಲ್ಲಿ 2,44,129 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,269 ವಿದ್ಯಾರ್ಥಿಗಳ ನೋಂದಣಿಗಳು ನೋಂದಣಿ ಮಾಡಿಕೊಂಡಿದ್ದರು. ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು 2023ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಪ್ರಸಕ್ತ ವರ್ಷದ ಪಿಯುಸಿ ಫಲಿತಾಂಶ ದಾಖಲೆ ಮಟ್ಟದ್ದಾಗಿತ್ತು.
ಪೂರಕ ಪರೀಕ್ಷೆ ವೇಳಾಪಟ್ಟಿಯ ಬಗ್ಗೆ ತಿಳಿಯಲು ಅಧಿಕೃತ ವೆಬ್ಸೈಟ್ಗೆ www.Kseab.karnataka.gov.in ಭೇಟಿ ನೀಡಿ ಪರಿಶೀಲಿಸಬಹುದು.
ಈ ಸುದ್ದಿ ಓದಿದ್ದೀರಾ?: ಪಿಯುಸಿ ಮೌಲ್ಯಮಾಪನ ಯಡವಟ್ಟು; ಬರೆದದ್ದು 22 ಪುಟ, ಮೌಲ್ಯಮಾಪನ ಮಾಡಿದ್ದು 13 ಪುಟ