2023ರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಮೇ 8ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ(ಕೆಎಸ್ಇಎಬಿ) ಮಾಹಿತಿ ನೀಡಿದೆ.
ಫಲಿತಾಂಶ ಬಿಡುಗಡೆ ಕುರಿತು ಅಧಿಕಾರಿಗಳು ಸಭೆ ನಡೆಸಿದ್ದಾರೆ. ಅಂತಿಮ ನಿರ್ಧಾರದ ಬಗ್ಗೆ ಮೇ 5ರಂದು ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ ನೀಡಲಿದೆ.
ರಾಜ್ಯಾದ್ಯಂತ 236 ಕೇಂದ್ರಗಳಲ್ಲಿ ಮಾ. 31ರಿಂದ ಏ. 15ರವರೆಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಿತು. 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 73 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸಲಾಗಿತ್ತು ಎಂದು ಕೆಎಸ್ಇಎಬಿ ಹೇಳಿದೆ.
ರಾಜ್ಯದಲ್ಲಿ ವಿದಾನಸಭಾ ಚುನಾವಣೆ ಮೇ 10ಕ್ಕೆ ನಿಗದಿಯಾಗಿದೆ. ಹೀಗಾಗಿ, ಚುನಾವಣೆಗೂ ಮಂಚೆಯೇ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎನ್ನಲಾಗಿತ್ತು. ಕೆಲ ಶಾಲಾ ಶಿಕ್ಷಕರು ಚುನಾವಣಾ ಕೆಲಸದಲ್ಲಿ ತೊಡಗಿರುವುದರಿಂದ ಫಲಿತಾಂಶ ಮುಂದಿನ ವಾರದಲ್ಲಿ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಶೇ.90ರಷ್ಟು ಮೇ.8ರಂದೇ ಫಲಿತಾಂಶ ಪ್ರಕಟಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಕೆಎಸ್ಇಎಬಿ ಕಾರ್ಯದರ್ಶಿ ಎಂ ರೇವಣ ಸಿದ್ದಪ್ಪ ತಿಳಿಸಿದ್ದಾರೆ.
ಫಲಿತಾಂಶ ಪ್ರಕಟಣೆಯಾದ ನಂತರ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ‘ಹಾಲ್ ಟಿಕೆಟ್’ ಸಂಖ್ಯೆ ಬಳಸಿ, ಕೆಎಸ್ಇಎಬಿಯ ವೆಬಸೈಟ್ಗೆ https://karresults.nic.in/ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಈ ಸುದ್ದಿ ಓದಿದ್ದೀರಾ?: ದ್ವಿತೀಯ ಪಿಯುಸಿ | ಪೂರಕ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಏ. 28 ಅಂತಿಮ ದಿನ