ಎಲ್‌ಕೆಜಿ ಪ್ರವೇಶ | ನಾಲ್ಕು ವರ್ಷ ವಯಸ್ಸು ಕಡ್ಡಾಯ

Date:

Advertisements
  • ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ತುಂಬಿರಬೇಕು
  • ಶಿಕ್ಷಣ ಇಲಾಖೆಯ ನಿಯಮ ಅವೈಜ್ಞಾನಿಕ; ಪೋಷಕರ ಆಕ್ಷೇಪ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನಾಲ್ಕು ವರ್ಷ ತುಂಬಿದ ಮಕ್ಕಳು ಮಾತ್ರ ಶಿಶಿವಿಹಾರ (ಎಲ್‌ಕೆಜಿ) ಸೇರಲು ಅರ್ಹರು ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಒಂದನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ಕಡ್ಡಾಯವಾಗಿ ಆರು ವರ್ಷ ತುಂಬಿರಬೇಕು ಎಂಬ ನಿಯಮ 2025-26ನೇ ಸಾಲಿನಿಂದ ಜಾರಿಯಾಗಲಿದೆ. ಈ ಕಾರಣದಿಂದ 2023-24ನೇ ಸಾಲಿನಿಂದ ಎಲ್‌ಕೆಜಿಗೆ ಮಕ್ಕಳನ್ನು ದಾಖಲಿಸಲು ಬರುವ ಜೂನ್‌ 1ಕ್ಕೆ ಕಡ್ಡಾಯವಾಗಿ ನಾಲ್ಕು ವರ್ಷ ತುಂಬಿರಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.

2025-26ಕ್ಕೆ ಒಂದನೇ ತರಗತಿಗೆ ದಾಖಲಾಗಲಿದ್ದಾರೆ. ಹಾಗಾಗಿ, ಆ ವೇಳೆಗೆ ಮಕ್ಕಳ ದಾಖಲಾತಿಗೆ ವಯಸ್ಸಿನ ಸಮಸ್ಯೆ ಆಗದಿರಲು ಪೂರ್ವ ಪ್ರಾಥಮಿಕ ಶಿಕ್ಷಣ ಪ್ರವೇಶಕ್ಕೂ ಇಲಾಖೆ ವಯೋಮಿತಿ ನಿಗದಿಪಡಿಸಿದೆ.

Advertisements

‘ಶಿಕ್ಷಣ ಹಕ್ಕು ಕಾಯ್ದೆ-2009’ ಮತ್ತು ‘ಕಡ್ಡಾಯ ಶಿಕ್ಷಣ ನಿಯಮ’ದಂತೆ ಈಗಾಗಲೇ ಆದೇಶಿಸಿರುವಂತೆ 2025-26ನೇ ಸಾಲಿನಿಂದ ಒಂದನೇ ತರಗತಿ ದಾಖಲಾತಿಗೆ ಮಗುವಿಗೆ ಆರು ವರ್ಷ ತುಂಬಿರಬೇಕೆಂಬ ನಿಯಮದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇರುವುದಿಲ್ಲ.

ಈ ಸುದ್ದಿ ಓದಿದ್ದೀರಾ?: ಮೋದಿ ರೋಡ್ ಶೋ | ನೀಟ್‌ ಬರೆಯುವವರಿಗೆ ಪರೀಕ್ಷಾ ಕೇಂದ್ರ ತಲುಪುವುದೇ ಅಗ್ನಿ ಪರೀಕ್ಷೆ

ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿನಿಂದ ಮಕ್ಕಳನ್ನು ಶಿಶುವಿಹಾರಕ್ಕೆ ದಾಖಲಿಸುವ ಪೋಷಕರು ನಾಲ್ಕು ವರ್ಷ ವಯಸ್ಸು ಪೂರ್ಣಗೊಂಡಿರುವವರನ್ನು ಮಾತ್ರ ಎಲ್‌ಕೆಜಿಗೆ ದಾಖಲಿಸಬೇಕು. ಎಲ್‌ಕೆಜಿ, ಯುಕೆಜಿ ಮುಗಿಸಿದ್ದರೂ ವಯಸ್ಸು ಆರು ವರ್ಷ ಪೂರ್ಣಗೊಳ್ಳದೆ ಇದ್ದರೆ, ಒಂದನೇ ತರಗತಿಗೆ ಪ್ರವೇಶವಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಶಿಕ್ಷಣ ಇಲಾಖೆ ಎಲ್‌ಕೆಜಿಗೆ 4 ವರ್ಷದ ವಯೋಮಿತಿ ನಿಗದಿಪಡಿಸಿರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಈ ನಿರ್ಧಾರ ಅವೈಜ್ಞಾನಿಕ. ಜೂನ್‌ 1ಕ್ಕೆ ನಿಗದಿತ ವಯಸ್ಸು ತುಂಬಲು ಒಂದು ದಿನ ಕಡಿಮೆ ಇದ್ದರೂ ಅಂತಹ ಮಕ್ಕಳಿಗೆ ಪ್ರವೇಶ ಸಿಗುವುದಿಲ್ಲ. ಇದರಿಂದ ಮಕ್ಕಳು ಇನ್ನೂ ಒಂದು ವರ್ಷ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಈ ಹಿಂದೆ ಇದ್ದಂತೆ ಎಲ್‌ಕೆಜಿ ದಾಖಲಾತಿಗೆ 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳು, 1ನೇ ತರಗತಿಗೆ 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳವರೆಗೆ ಎಲ್‌ಕೆಜಿಗೆ ದಾಖಲಿಸಬಹುದಾದ ನಿಯಮವೇ ಇರಲಿ. ವಯೋಮಾನ ಸಡಿಲಿಕೆಯ ಅವಕಾಶ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮುಚ್ಚುವಿಕೆ ವಿರೋಧಿಸಿ ಎಐಡಿಎಸ್‍ಒ 50 ಲಕ್ಷ ಸಹಿ ಸಂಗ್ರಹ; ಮುಖ್ಯಮಂತ್ರಿಗಳಿಗೆ ಸಲ್ಲಿಕೆ

ಕರ್ನಾಟಕ ರಾಜ್ಯ ಸರ್ಕಾರವು 6,200 ಸರ್ಕಾರಿ ಶಾಲೆಗಳನ್ನು "ವಿಲೀನ"ಗೊಳಿಸುವ ಹೆಸರಿನಲ್ಲಿ ಮುಚ್ಚಲು...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ದಾವಣಗೆರೆ | ಭಾರತದ ಗ್ರಂಥಾಲಯ ಪಿತಾಮಹ ರಂಗನಾಥ್ ಜನ್ಮದಿನ; ವಿವಿಯಲ್ಲಿ ಗ್ರಂಥಾಲಯ ಕಾರ್ಯಾಗಾರ

ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮದಿನದ ಅಂಗವಾಗಿ...

ರಾಜ್ಯ ಶಿಕ್ಷಣ ನೀತಿ ಆಯೋಗದಿಂದ ವರದಿ ಸಲ್ಲಿಕೆ, ದ್ವಿಭಾಷಾ ನೀತಿ ಅನುಷ್ಠಾನ ಸೇರಿ ಹಲವು ಶಿಫಾರಸು

ರಾಜ್ಯ ಶಿಕ್ಷಣ ನೀತಿ ಆಯೋಗವು ಶುಕ್ರವಾರ ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ...

Download Eedina App Android / iOS

X