ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ‘ಆಧುನಿಕ ಮನು’ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಅಂಬೇಡ್ಕರ್‌ರನ್ನು ಮನುಗೆ ಹೋಲಿಕೆ ಮಾಡಿರುವುದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಗಳು ನಡೆದಿವೆ. ಪರೀಕ್ಷೆಯಲ್ಲಿ ನೀಡಲಾಗಿದ್ದ ಇಂಗ್ಲಿಷ್ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ‘ಆಧುನಿಕ ಮನು’ ಎಂದು ಉಲ್ಲೇಖಿಸಲಾಗಿದೆ. ‘ಡಾ. ಬಿ.ಆರ್ ಅಂಬೇಡ್ಕರ್ ವಾಸ್ ದಿ ಮಾಡೆರ್ನ್ ಮನು. ಹೌ?’ ಎಂದು ಪ್ರಶ್ನೆಯನ್ನು ಮುದ್ರಿಸಲಾಗಿದೆ.
ಈ ಪ್ರಶ್ನೆ ಪತ್ರಿಕೆಯನ್ನು ಶಿಕ್ಷಣ ಇಲಾಖೆಯೇ ಮುದ್ರಿಸಿ, ಶಾಲೆಗಳಿಗೆ ಕಳಿಸಿದೆ ಎಂದು ತಿಳಿದುಬಂದಿದೆ. ಅಂಬೇಡ್ಕರರ ಆಶಯವೇ ನಮ್ಮ ನಿಲುವು, ಸಂವಿಧಾನವೇ ನಮ್ಮ ಧ್ಯೇಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರವೇ ಅಂಬೇಡ್ಕರ್ ಅವರನ್ನು ಆಧುನಿಕ ಮನು ಎಂದು ಕರೆದಿದೆ. ವಿವಾದವನ್ನು ಸೃಷ್ಠಿಸಿದೆ. ಕಾಂಗ್ರೆಸ್ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ.

ಮನುಸ್ಮೃತಿಯನ್ನು ಬರೆದಿದ್ದ ಮನು ಒಬ್ಬ ಜಾತಿವಾದಿ. ಸಮಾಜದಲ್ಲಿ ವರ್ಣಾಶ್ರಮಗಳು ಜಾರಿಯಲ್ಲಿರಬೇಕು ಎಂದು ಪ್ರತಿಪಾದಿಸಿದ್ದವನು. ಶೂದ್ರರು-ಅಸ್ಪೃಶ್ಯರು ಮುಟ್ಟಲು ಅರ್ಹರಲ್ಲದವರು ಎಂದಿದ್ದವನು. ಮಹಿಳೆಯರು 2ನೇ ಪ್ರಜೆಗಳು, ಗಂಡಿನ ಅಧೀನದಲ್ಲಿರಬೇಕು ಎಂದು ಹೇಳಿದ್ದವನು. ಬಿಜೆಪಿ-ಆರ್‌ಎಸ್‌ಎಸ್ ಸೇರಿದಂತೆ ಹಿಂದುತ್ವವಾದಿಗಳು ಮನುವನ್ನು ತಮ್ಮ ಆರಾದ್ಯದೈವದಂತೆ ನೋಡುತ್ತಾರೆ. ಬಿಜೆಪಿ-ಆರ್‌ಎಸ್‌ಎಸ್‌ನ ಒಳ ಅಜೆಂಡಾ ಕೂಡ ಮನು ಬರೆದ ಮನುಸ್ಮೃತಿಯನ್ನೇ ಸಂವಿಧಾನ ಮಾಡಬೇಕೆಂಬುದಾಗಿದೆ.
ಶೂದ್ರರು, ತಳ ಸಮುದಾಯದವರು ಹಾಗೂ ಮಹಿಳಾ ವಿರೋಧಿಯಾಗಿದ್ದ ಮನುವಿಗೆ ಸಮಾನತಾವಾದಿ ಅಂಬೇಡ್ಕರ್‌ರನ್ನು ಹೋಲಿಕೆ ಮಾಡಿರುವುದಕ್ಕೆ ವ್ಯಾಪಕ ವಿರೋಧಗಳು ಕೇಳಿಬಂದಿವೆ.
ಅಂದಹಾಗೆ, ಮನು ರಚಿಸಿದದ ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟುಹಾಕಿದ್ದರು. ಹಿಂದು ಧರ್ಮದಲ್ಲಿ ಎಲ್ಲರಿಗೂ ಎಲ್ಲ ಅವಕಾಶ, ಹಕ್ಕುಗಳು ದೊರೆಯಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ‘ಹಿಂದು ಕೋಡ್ ಬಿಲ್’ಅನ್ನು ಮಂಡಿಸಿದ್ದರು.
ಆದರೆ, ಈಗ ಅಂಬೇಡ್ಕರ್ ಅವರು ವಿರೋಧಿಸಿದ್ದ ಮನುವಿಗೇ ಅಂಬೇಡ್ಕರರನ್ನು ಹೋಲಿಸಲಾಗುತ್ತಿದೆ. ಅಂಬೇಡ್ಕರರನ್ನು ‘ಆಧುನಿಕ ಮನು’ ಎಂದು ಕರೆಯಲಾಗುತ್ತಿದೆ. ಅಂಬೇಡ್ಕರ್ ಹಿಂದು ಧರ್ಮದ ಪರವಾಗಿದ್ದರು ಎಂದು ಬಣ್ಣಿಸಲು ಸಂಘಪರಿವಾರವು, ಹಿಂದು ಧರ್ಮದ ಸುಧಾರಣೆಗಾಗಿ ಅಂಬೇಡ್ಕರ್ ‘ಹಿಂದು ಕೋಡ್ ಬಿಲ್’ ರಚಿಸಿದ್ದರು. ಆದ್ದರಿಂದ ಅಂಬೇಡ್ಕರ್ ‘ಆಧುನಿಕ ಮನು’ ಎಂಬ ಸುಳ್ಳನ್ನು ಸಮಾಜದಲ್ಲಿ ಹರಿಬಿಟ್ಟಿದೆ. ಆ ಸುಳ್ಳನ್ನೇ ಸತ್ಯವೆಂದು ಭಾವಿಸಿ ಕೆಲವು ಅಂಬೇಡ್ಕರ್ ಅನುಯಾಯಿಗಳೂ ಅಂಬೇಡ್ಕರರನ್ನು ‘ಆಧುನಿಕ ಮನು’ ಎಂದು ಕರೆಯುವುದು ಕಂಡುಬಂದಿದೆ.
ಆದರೆ, ಅಂಬೇಡ್ಕರ್ ಹಿಂದು ಧರ್ಮದ ಸುಧಾಕರರಲ್ಲ. ಹಿಂದು ಧರ್ಮದಲ್ಲಿನ ಅನಿಷ್ಠ ಪದ್ದತಿಗಳ ವಿರುದ್ಧ ಹೋರಾಡಿದವರು. ಶೂದ್ರರು, ಅಸ್ಪೃಷ್ಯರು, ಹಿಂದುಳಿದವರು ಹಾಗೂ ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಟಿದವರು. ಮನುವಾದವನ್ನು ವಿರೋಧಿಸಿದವರು. ಅಂಬೇಡ್ಕರರನ್ನು ‘ಆಧುನಿಕ ಮನು’ ಎಂದು ಕರೆಯುವ ಪರಿಪಾಠವನ್ನು ಕೈಬಿಡಬೇಕು ಎಂದು ಅಂಬೇಡ್ಕರ್ ವಾದಿಗಳು ಒತ್ತಾಯಿಸುತ್ತಲೇ ಇದ್ದಾರೆ. ಆದಾಗ್ಯೂ, ಕಾಂಗ್ರೆಸ್ ಸರ್ಕಾರ ಅಂಬೇಡ್ಕರರನ್ನು ‘ಆಧುನಿಕ ಮನು’ ಎಂದು ಕರೆದು ಆಕ್ರೋಶಕ್ಕೆ ಗುರಿಯಾಗಿದೆ.
ಅಧಿಕಾರ ದಾಹ ತಲೆಗೆ ಹತ್ತಿದರೆ ಇದೇ ತರ ಆಗುವುದು. ಇವರಿಗೆ ಖುರ್ಚಿಯ ಅಧಿಕಾರದ ಸಿಂಹಾಸನದಲ್ಲಿ ಕುಳಿತು ಕೊಳ್ಳುವ ಚಿಂತೆ.
ಆಡಳಿತದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಯಾರು ಕೆಲಸ ಮಾಡುತ್ತಾರೆ ಯಾವ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ ಎಂಬುವುದನ್ನು ನೋಡಲು ಇವರಿಗೆ ಇಷ್ಟ ಕೂಡ ಇಲ್ಲ ಆ ಬದ್ದತೆ ಕೂಡ ಇಲ್ಲ ಆದ ಕಾರಣ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.
ಅಣ್ಣಾವರೇ
ನೀವು ಒಂದು ಸುಳ್ಳನ್ನು ಹೇಳಿದ್ದೀರಾ ಚೆಕ್ ಮಾಡಿಕೊಳ್ಳಿ
ಹಿಂದೂ ಕೋಡ್ ಬಿಲ್ ಮಂಡಿಸಿದ್ದು ಸಂಸತ್ ನಲ್ಲಿ
ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲ ಗಮನಿಸಿ
ಗುಡಿಬಂಡೆ ಗಂಗಪ್ಪ