ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನ ಹಾಗೂ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಮತ್ತು ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಗವಾನ್ ಗೌತಮ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಸ್ಮರಿಸಲಾಯಿತು. ಸಮಾನತೆ, ಸಹೋದರತ್ವ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಧಮ್ಮದ ಸಂದೇಶವನ್ನು ಸಾರಬೇಕು ಎಂದು ಪ್ರತಿಪಾದಿಸಲಾಯಿತು.
ಧಮ್ಮ ಪ್ರವರ್ತನ ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜುಕುಮಾರ್ ಜವಾದೆ, ಶಿವರಾಜ್ ಬರದಾಪುರ, ವಿಜಯಕುಮಾರ ನಾತೆ, ಬಸವರಾಜ್ ಮಸಳೆ, ದಯಾನಂದ ಚಿಟ್ಟಾ, ದೇವಿಂದ್ರ ಭಾವಿಕಟ್ಟಿ, ಬಸವರಾಜ್ ಪ್ಯಾಗೆ, ಮಿಲಿಂದ್ ಡಾವರಗಾಂವ, ಸಿದ್ಧಾರ್ಥ ಅಂಬೇಸಾಂಗವಿ, ಮಚೇಂದ್ರ ಕಾರ್ಪೆಂಟರ್, ಸತೀಶ ಸಾಗರ, ವಿನೋದ ಕ್ರಾಂತಿಮನಿ, ಸಂತೋಷ ಕಲ್ಲುರೆ, ರಾಹುಲ್ ಪ್ಯಾಗೆ, ಶಂಕರ ಮೇತ್ರೆ, ಶ್ರೀಕಾಂತ ಕಾರ್ಪೆಂಟರ್, ನಾಗೇಶ ಡಾಂಗೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ : ವಚನ ಕಲ್ಯಾಣ | ಕೂಡಲಸಂಗಮದೇವಾ, ಮರಣವೆ ಮಹಾನವಮಿ!





