ಬಸವಕಲ್ಯಾಣ | ಶರಣರ ಇತಿಹಾಸ ಉಳಿಸುವಲ್ಲಿ ಮಹಾರಾಷ್ಟ್ರದ ಕೊಡುಗೆ ಅಪಾರ: ಬಸವದೇವರು

Date:

ಶರಣ ಧರ್ಮ ಕರ್ನಾಟಕದಲ್ಲಿ ಹುಟ್ಟಿದರೂ, ಶರಣರ ಪರಂಪರೆ ಹಾಗೂ ವಚನ ಸಾಹಿತ್ಯವನ್ನು ಜೀವಂತವಾಗಿ ಉಳಿಸಿ ಬೆಳೆಸುವಲ್ಲಿ ಮಹಾರಾಷ್ಟ್ರದ ಗಡಿಭಾಗದ ಜನರ ಕೊಡುಗೆ ಅಪಾರವಾಗಿದೆ ಎಂದು ಬಸವ ಬೆಳವಿ ಚರಂತೇಶ್ವರ ಮಠದ ಪೂಜ್ಯ ಶರಣ ಬಸವದೇವರು ಹೇಳಿದರು.

- Advertisement -

ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆಯ 9ನೇ ದಿನದ ಕಾರ್ಯಕ್ರಮದಲ್ಲಿ ‘ಮಹಾರಾಷ್ಟ್ರದಲ್ಲಿ ಬಸವ ಬೆಳಕು’ ವಿಷಯದ ಗೋಷ್ಠಿಯಲ್ಲಿ ಅವರು ಅನುಭಾವ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

“ಕಲ್ಯಾಣದ ಪರಂಪರೆ ಕಟ್ಟುವಲ್ಲಿ ಹಾಗೂ ವಚನ ಸಾಹಿತ್ಯ ಉಳಿಸಿ ಬೆಳೆಸುವಲ್ಲಿ ಕರ್ನಾಟಕದವರಷ್ಟೇ ಮಹಾರಾಷ್ಟ್ರದವರ ಪಾತ್ರವೂ ಮಹತ್ವದ್ದಾಗಿದೆ. ಸೊನ್ನಲಿಗೆಯ ಸಿದ್ಧರಾಮರು, ಗುಡ್ಡಾಪುರದ ದಾನಮ್ಮ, ಉರಿಲಿಂಗದೇವರು, ಅಮ್ಮಗೆರಾಯಮ್ಮ, ಮಂಚಣ್ಣ ಸೇರಿದಂತೆ ಅನೇಕ ಶರಣರು ಬಸವತತ್ವದ ಪ್ರಸಾರಕ್ಕೆ ಶ್ರಮಿಸಿದ್ದಾರೆ. ಚಕ್ರೇಶ್ವರರು ಬಸವೇಶ್ವರರ ನಾಮಾಂಕಿತದಲ್ಲಿ ಭಜನೆಗಳನ್ನು ರಚಿಸಿದ್ದಾರೆ. ಜಯದೇವಿತಾಯಿ ಲಿಗಾಡೆ, ವಾರದ ಮಲ್ಲಪ್ಪ ಮುಂತಾದವರು ಬಸವತತ್ವವನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ” ಎಂದು ತಿಳಿಸಿದರು.

WhatsApp Image 2026 10 10 at 7.46.08 PM 17
ಜಾಹೀರಾತು

“ಮಹಾರಾಷ್ಟ್ರದ ಉಮ್ಮರಾಣಿ ಗ್ರಾಮದಲ್ಲಿ ಮೊಟ್ಟಮೊದಲು ಸಾಮೂಹಿಕ ವಿವಾಹ ಪದ್ಧತಿ ಆಚರಣೆಗೆ ಬಂದಿತು. ಮನ್ಮಥಸ್ವಾಮಿಗಳು ಗುರು, ಲಿಂಗ, ಜಂಗಮ, ಕಾಯಕ ಮತ್ತು ದಾಸೋಹ ತತ್ವಗಳನ್ನು ಅಭಂಗಗಳ ಮೂಲಕ ಜನರಿಗೆ ತಲುಪಿಸಿದರು. ಮಹಾರಾಷ್ಟ್ರದಲ್ಲಿ ಬಸವ ಜಯಂತಿಗೆ ಮೊದಲ ಬಾರಿಗೆ ರಜೆ ಘೋಷಿಸಿದ ಪರಂಪರೆಯೂ ಇದೆ. ಅಲ್ಲಿನ ಜನರು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು, ಬಸವತತ್ವವನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಜಗತ್ತೇ ಬಸವ ಸಂಸ್ಕೃತಿಯತ್ತ ಆಕರ್ಷಿತವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹುಲಸೂರಿನ ಶಿವಾನಂದ ಮಹಾಸ್ವಾಮಿ ಮಾತನಾಡಿ, “ಸತ್ಯವಿರುವಲ್ಲಿ ದೇವರಿದ್ದಾನೆ; ದೇವರಿರುವಲ್ಲಿ ಸೌಂದರ್ಯವಿದೆ. ನಮಗೆ ಬಸವಣ್ಣನೇ ದೈವ. ಸಮಾಜದ ಕೆಳಸ್ತರದಲ್ಲಿದ್ದ ಜನರನ್ನು ಮೇಲೆತ್ತಿದ ಮಹಾತ್ಮ ಬಸವಣ್ಣನವರು ಇಡೀ ವಿಶ್ವಕ್ಕೆ ಬೆಳಕು ನೀಡಿದ್ದಾರೆ. ಸಕಲ ಜೀವಾತ್ಮರ ಒಳಿತನ್ನು ಬಯಸಿದ ಅವರು ಕಾಯಕ ಮತ್ತು ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಯಾವುದೇ ಕಾರ್ಯ ಕೈಗೊಂಡರೂ ಬಸವಣ್ಣನವರ ತತ್ವಗಳು ನಮ್ಮ ಮಾರ್ಗದರ್ಶಿಯಾಗಬೇಕು” ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪೂಜ್ಯ ಗಂಗಾಂಬಿಕಾ ಅಕ್ಕ ಮಾತನಾಡಿ, “ಇತಿಹಾಸವನ್ನು ಅರಿಯದವರು ಇತಿಹಾಸ ನಿರ್ಮಿಸಲಾರರು. ಶರಣರ ಬದುಕು, ಹೋರಾಟ ಮತ್ತು ತತ್ವಗಳ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ಬಸವ ಪರಂಪರೆಯನ್ನು ಪರಿಚಯಿಸಬೇಕು” ಎಂದರು.

ಅನುಭವ ಮಂಟಪದ ಸಂಚಾಲಕ ಪೂಜ್ಯ ಶಿವಾನಂದ ದೇವರು ಹಾಗೂ ಲಾತೂರಿನ ಶಾಹು ಕಾಲೇಜಿನ ಪ್ರಾಧ್ಯಾಪಕ ಡಾ. ಭೀಮರಾವ ಪಾಟೀಲ ಮಾತನಾಡಿದರು.

ಜೇಡರ ದಾಸಿಮಯ್ಯ ದುಗ್ಗಳೆ ಮಹಾಶಕ್ತಿಕೂಟದ ವತಿಯಿಂದ ಗುರುಪೂಜೆ ನಡೆಯಿತು. ಹುಲಸೂರಿನ ದೊಡ್ಡಯ್ಯಪ್ಪ ಭಜನಾ ಮಂಡಳಿಯಿಂದ ವಚನ ಭಜನೆ ಜರುಗಿತು. ಮಹಾರಾಷ್ಟ್ರದ ಅನಿಕೇತನ ಪಾಟೀಲ ಅವರ ಪವಾಡ ಡಪ್ಪಿನ ಹಾಡು ಮೆರುಗು ನೀಡಿದವು.

WhatsApp Image 2026 10 10 at 6.59.42 PM 9
ಜಾಹೀರಾತು

ಪೂಜ್ಯ ಸುಗುಣತಾಯಿ, ಪೂಜ್ಯ ಹಾಲಮ್ಮತಾಯಿ, ಸೊನ್ನಲಾಪುರದ ವಿಜಯಕುಮಾರ ಹತ್ತೂರೆ, ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ, ನೀಲಕಂಠಪ್ಪ ಮುನ್ನುಳ್ಳಿ, ಸವಿತಾ ಬಾಲಿಕಿಲೆ, ಅಂಜಲಿ ಬಾಲಿಕಿಲೆ, ಶಿವಕುಮಾರ ಕುದರೆ, ಲಕ್ಷ್ಮೀಕಾಂತ ಜ್ಯಾಂತೆ, ಗುಲಬರಾವ ತ್ರಿಮುಖೆ ಹಾಗೂ ಕಮಲಾಪುರದ ವಿಶ್ವಗುರು ಬಸವೇಶ್ವರ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಗುರುಪಾದಪ್ಪ ಮಾಟೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪಂಡಿತ ನಾಗರಾಳೆ ಸ್ವಾಗತಿಸಿದರು. ಜಗದೇವಿ ಮಮ್ಮಾ ನಿರೂಪಿಸಿದರು.

ಇದನ್ನೂ ಓದಿ : ವಚನ ಕಲ್ಯಾಣ | ಕೂಡಲಸಂಗಮದೇವಾ, ಮರಣವೆ ಮಹಾನವಮಿ!

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...