ನ್ಯಾಯಮೂರ್ತಿಗಳೇ, ದಯವಿಟ್ಟು ನೀವೇ ಹಿಂದೆ ಸರಿಯಿರಿ; ಹೈಕೋರ್ಟ್‌ನಲ್ಲಿ ಕೇಜ್ರಿವಾಲ್‌ ಖತರ್ನಾಕ್‌ ವಾದ ಮಂಡನೆ

Date:

ವ್ಯವಸ್ಥೆಯ ಲೋಪಗಳು ಹಾಗೂ ನ್ಯಾಯಾಂಗದ ಕೆಲವು ಅನುಮಾನಾಸ್ಪದ ನಡೆಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಕೇವಲ ಬೆರಳು ಮಾಡಿ ತೋರಿಸಿದ್ದರಷ್ಟೇ. ಆದರೆ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇವಲ ದೂರದಿಂದ ಬೆರಳು ತೋರಿಸಿ ಸುಮ್ಮನಾಗಲಿಲ್ಲ; ಬದಲಿಗೆ, ಕರಾರುವಕ್ಕಾದ ಸಾಕ್ಷ್ಯಾಧಾರಗಳೊಂದಿಗೆ ಇಡೀ ದೇಹವನ್ನೇ ನುಗ್ಗಿಸುವಂತೆ ನ್ಯಾಯಾಲಯದ ಕಟಕಟೆಯಲ್ಲಿ ಅಕ್ಷರಶಃ ಮುಖಾಮುಖಿಯಾಗಿದ್ದಾರೆ! ​ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಕೋರಿ ಕೇಜ್ರಿವಾಲ್ ಹೈಕೋರ್ಟ್‌ನಲ್ಲಿ ಮಂಡಿಸಿರುವ ವಾದ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ

- Advertisement -

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಹೆಚ್ಚುವರಿ ಪ್ರಮಾಣಪತ್ರ ಕೇವಲ ರಾಜಕೀಯ ಆರೋಪವಾಗಿ ಉಳಿದಿಲ್ಲ; ಬದಲಿಗೆ, ಅದು ನ್ಯಾಯಾಂಗದ ಕಾರ್ಯವೈಖರಿಯತ್ತ ಹಿಡಿದ ಕೈಗನ್ನಡಿಯಂತಿದೆ. ಕೇವಲ ಭಾವನಾತ್ಮಕ ಮಾತುಗಳ ಮೊರೆ ಹೋಗದೆ, ಅಪ್ಪಟ ಕಾನೂನು ತರ್ಕ, ಆರ್‌ಟಿಐ ಅಂಕಿಅಂಶಗಳು ಹಾಗೂ ನ್ಯಾಯಾಲಯದ ನಡಾವಳಿಗಳನ್ನೇ ಅಸ್ತ್ರವಾಗಿಸಿ ಕೇಜ್ರಿವಾಲ್ ಪ್ರಮುಖ 10 ಅಂಶಗಳನ್ನು ಮಂಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

1. ನ್ಯಾಯದಾನದ ಅಂಗಳದಲ್ಲಿ ‘ಹಿತಾಸಕ್ತಿ’ಯ ನೆರಳು

ಇದು ಕೇಜ್ರಿವಾಲ್ ಅವರ ಪ್ರಮಾಣಪತ್ರದ ಅತ್ಯಂತ ಸ್ಫೋಟಕ ಅಂಶ. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಇಬ್ಬರು ಮಕ್ಕಳು ಕೇಂದ್ರ ಸರ್ಕಾರದ ಪ್ಯಾನೆಲ್ ವಕೀಲರಾಗಿದ್ದು, ಅವರಿಗೆ ಖುದ್ದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (ಈ ಪ್ರಕರಣದಲ್ಲಿ ಸಿಬಿಐ ಪರ ವಾದಿಸುತ್ತಿರುವವರು) ಅವರ ಕಚೇರಿಯಿಂದಲೇ ಪ್ರಕರಣಗಳು ಹಂಚಿಕೆಯಾಗುತ್ತಿವೆ. ಮಾಹಿತಿಯ ಹಕ್ಕು ಅಡಿ ಪಡೆದ ಅಧಿಕೃತ ದಾಖಲೆಗಳ ಪ್ರಕಾರ, ನ್ಯಾಯಮೂರ್ತಿಗಳ ಪುತ್ರನಿಗೆ 2023ರಲ್ಲಿ 2,487, 2024ರಲ್ಲಿ 1,784 ಹಾಗೂ 2025ರಲ್ಲಿ 1,633 ಸರ್ಕಾರಿ ಪ್ರಕರಣಗಳನ್ನು ವಹಿಸಲಾಗಿದೆ. ಇಷ್ಟು ಬೃಹತ್ ಪ್ರಮಾಣದ, ಲಾಭದಾಯಕ ಪ್ರಕರಣಗಳನ್ನು ನೀಡುತ್ತಿರುವ ಸರ್ಕಾರದ ವಿರುದ್ಧವೇ, ಅದೇ ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿ ತೀರ್ಪು ನೀಡಲು ಸಾಧ್ಯವೇ ಎಂಬುದು ‘ಹಿತಾಸಕ್ತಿ ಸಂಘರ್ಷ’ದ ಅತಿದೊಡ್ಡ ಪ್ರಶ್ನೆ.

2. ನ್ಯಾಯದೇವತೆಯ ತಕ್ಕಡಿಯಲ್ಲಿ ಆರ್‌ಎಸ್‌ಎಸ್ ನಂಟು

ನ್ಯಾಯಮೂರ್ತಿಗಳು ಆರ್‌ಎಸ್‌ಎಸ್‌ ಸೈದ್ಧಾಂತಿಕ ಅಂಗಸಂಸ್ಥೆಯಾದ ‘ಅಖಿಲ ಭಾರತೀಯ ಅಧಿವಕ್ತ ಪರಿಷತ್’ನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ಪ್ರಮಾಣಪತ್ರದಲ್ಲಿ ಬೊಟ್ಟು ಮಾಡಲಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ಮಾತೃಸಂಸ್ಥೆಯೊಂದಿಗೆ ಸೈದ್ಧಾಂತಿಕ ಸಾಮೀಪ್ಯ ಹೊಂದಿರುವಾಗ, ಆಡಳಿತ ಪಕ್ಷದ ಪ್ರಬಲ ರಾಜಕೀಯ ವಿರೋಧಿಯೊಬ್ಬರ ಪ್ರಕರಣವನ್ನು ವಿಚಾರಣೆ ನಡೆಸುವುದು ಸಹಜವಾಗಿಯೇ ‘ಪಕ್ಷಪಾತದ ಸಕಾರಣವಾದ ಆತಂಕ’ವನ್ನು (Reasonable apprehension of bias) ಹುಟ್ಟುಹಾಕುತ್ತದೆ ಎಂದು ವಾದಿಸಲಾಗಿದೆ.

3. ತನಿಖಾ ಸಂಸ್ಥೆಗಳ ವಾದಕ್ಕಷ್ಟೇ ಮನ್ನಣೆ

ಪ್ರಕರಣದ ವಿಚಾರಣೆಯುದ್ದಕ್ಕೂ ಒಂದು ಸ್ಪಷ್ಟವಾದ ಒಲವು ಗೋಚರಿಸುತ್ತಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ  ಮಂಡಿಸುವ ಪ್ರತಿಯೊಂದು ಸಣ್ಣ ವಾದವನ್ನೂ ನ್ಯಾಯಾಲಯವು ಎಳ್ಳಷ್ಟೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದೆ. ಅದೇ ವೇಳೆ, ಕೇಜ್ರಿವಾಲ್ ಪರ ವಕೀಲರು ಮಂಡಿಸುವ ಬಲವಾದ ಸಾಕ್ಷ್ಯಾಧಾರಗಳು ಮತ್ತು ಆಕ್ಷೇಪಣೆಗಳನ್ನು ಕಡೆಗಣಿಸಲಾಗುತ್ತಿದೆ. ಇದು ಪ್ರಾಸಿಕ್ಯೂಷನ್ ಮತ್ತು ನ್ಯಾಯಾಲಯದ ನಡುವಿನ ಅಸಹಜ ಹೊಂದಾಣಿಕೆಯಂತೆ ಭಾಸವಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್

4. ವಿಪಕ್ಷದ ನಾಯಕರ ಪ್ರಕರಣಗಳಲ್ಲಷ್ಟೇ ‘ಸೂಪರ್ ಫಾಸ್ಟ್’ ನ್ಯಾಯ?

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ವರ್ಷಗಟ್ಟಲೆ ಪ್ರಕರಣಗಳು ಕೊಳೆಯುವುದು ಸಾಮಾನ್ಯ. ಆದರೆ, ಕೇಜ್ರಿವಾಲ್ ಪ್ರಕರಣದಲ್ಲಿ ನ್ಯಾಯಾಲಯ ತೋರುತ್ತಿರುವ ವೇಗ ಅಸಾಮಾನ್ಯವಾದದ್ದು. ರಜಾ ದಿನಗಳಲ್ಲಾಗಲೀ, ಕಲಾಪದ ಸಮಯ ಮುಗಿದ ಮೇಲಾಗಲೀ ತುರ್ತಾಗಿ ವಿಚಾರಣೆ ನಡೆಸಿ ತನಿಖಾ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಆತುರವು, ಸಾಮಾನ್ಯ ಕಕ್ಷಿದಾರರಿಗೆ ಸಿಗದ ‘ವಿಶೇಷ ಆದ್ಯತೆ’ ವಿಪಕ್ಷದ ನಾಯಕರನ್ನು ಮಟ್ಟಹಾಕಲು ಮಾತ್ರ ಏಕೆ ಬಳಕೆಯಾಗುತ್ತಿದೆ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದೆ.

5. ಪೂರ್ವಗ್ರಹ ಪೀಡಿತ ಆದೇಶಗಳು

ಕೆಳ ನ್ಯಾಯಾಲಯವು (ರೌಸ್ ಅವೆನ್ಯೂ ಕೋರ್ಟ್) ಈ ಹಿಂದೆ ಪ್ರಕರಣದ ಮೆರಿಟ್ ಆಧಾರದ ಮೇಲೆ ಆರೋಪಿಗಳಿಗೆ ರಿಲೀಫ್ ನೀಡಿತ್ತು. ಆದರೆ, ಮಾರ್ಚ್ 9ರಂದು ಹೈಕೋರ್ಟ್ ನೀಡಿದ ಆದೇಶವು, ಕೆಳ ನ್ಯಾಯಾಲಯದ ತೀರ್ಪು ತಪ್ಪು ಎಂಬ ಮೊದಲೇ ನಿರ್ಧರಿಸಿದ ನಿಲುವಿನಿಂದ (Predisposed opinion) ಕೂಡಿತ್ತು. ಕೆಳ ನ್ಯಾಯಾಲಯದ ರ್ತೀಪನ್ನು ಸಮಗ್ರವಾಗಿ ಪರಿಶೀಲಿಸುವ ಮುನ್ನವೇ ಅದರ ವಿರುದ್ಧ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳು ನ್ಯಾಯಾಂಗದ ಶ್ರೇಣೀಕೃತ ವ್ಯವಸ್ಥೆಯ ಘನತೆಗೆ ಕುಂದು ತರುವಂತಿವೆ.

6. ವಿಚಾರಣೆಗೂ ಮುನ್ನವೇ ‘ದೋಷಿ’ ಪಟ್ಟ

ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲಭೂತ ತತ್ವವೇ ‘ಅಪರಾಧ ಸಾಬೀತಾಗುವವರೆಗೆ ಎಲ್ಲರೂ ನಿರಪರಾಧಿಗಳೇ’ ಎಂಬುದು. ಆದರೆ, ನ್ಯಾಯಮೂರ್ತಿ ಶರ್ಮಾ ಅವರ ಪೀಠವು ಈ ಹಿಂದಿನ ಜಾಮೀನು ಅರ್ಜಿಗಳ ವಜಾ ಪ್ರಕ್ರಿಯೆಯಲ್ಲಿ ಬಳಸಿದ ಭಾಷೆ ಹಾಗೂ ಮಾಡಿದ ಕಠಿಣ ಅವಲೋಕನಗಳನ್ನು ಗಮನಿಸಿದರೆ, ವಿಚಾರಣೆ ಆರಂಭವಾಗುವ ಮುನ್ನವೇ ಕೇಜ್ರಿವಾಲ್ ಅವರನ್ನು ‘ಅಪರಾಧಿ’ ಎಂದು ನ್ಯಾಯಾಲಯ ತೀರ್ಮಾನಿಸಿದಂತೆ ಸ್ಪಷ್ಟವಾಗಿ ಭಾಸವಾಗುತ್ತಿದೆ.

7. ಏಜೆನ್ಸಿಗಳ ಪರ ಮಿತಿಮೀರಿದ ಕರುಣೆ ಏಕೆ?

ಸಾಮಾನ್ಯವಾಗಿ ಕಕ್ಷಿದಾರರು ಏನು ಪರಿಹಾರ ಕೇಳುತ್ತಾರೋ ಅದನ್ನು ಮಾತ್ರ ನ್ಯಾಯಾಲಯಗಳು ಪರಿಶೀಲಿಸುತ್ತವೆ. ಆದರೆ ಈ ಪ್ರಕರಣದಲ್ಲಿ, ತನಿಖಾ ಏಜೆನ್ಸಿಗಳು ತಮ್ಮ ಅರ್ಜಿಯಲ್ಲಿ ಔಪಚಾರಿಕವಾಗಿ ಕೇಳಿದ್ದಕ್ಕಿಂತಲೂ ಹೆಚ್ಚಿನ ರಿಲೀಫ್ ಅನ್ನು ನ್ಯಾಯಾಲಯವು ಸ್ವಯಂಪ್ರೇರಿತವಾಗಿ ನೀಡಿದೆ. ಇದು ನ್ಯಾಯಾಧೀಶರು ತಟಸ್ಥವಾಗಿರುವ ಬದಲು, ತನಿಖಾ ಸಂಸ್ಥೆಗಳ ಪರವಾಗಿ ಅಖಾಡಕ್ಕಿಳಿದಂತೆ ಕಾಣುತ್ತಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

8. ಲೋಪವೆಸಗಿದ ತನಿಖಾಧಿಕಾರಿಗಳಿಗೆ ರಕ್ಷಾಕವಚ

ತನಿಖೆಯ ಹಂತದಲ್ಲಿ ಅಧಿಕಾರಿಗಳು ಎಸಗಿರುವ ಕಾನೂನುಬಾಹಿರ ಕ್ರಮಗಳು ಮತ್ತು ಪ್ರಕ್ರಿಯಾ ಲೋಪಗಳ (Procedural lapses) ಬಗ್ಗೆ ಪ್ರತಿವಾದಿಗಳು ಬಲವಾದ ಸಾಕ್ಷ್ಯಗಳನ್ನು ಮುಂದಿಟ್ಟಾಗ, ಅಂತಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು, ಅವರ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೇ ತಡೆಯಾಜ್ಞೆ ನೀಡಿ ರಕ್ಷಿಸುವ ಕೆಲಸ ನ್ಯಾಯಾಲಯದಿಂದ ನಡೆದಿದೆ. ಇದು ತನಿಖಾ ಸಂಸ್ಥೆಗಳ ಅಕ್ರಮಗಳಿಗೆ ನ್ಯಾಯಾಲಯವೇ ರಕ್ಷಾಕವಚ ಒದಗಿಸಿದಂತಿದೆ.

9. ಸ್ವಾಭಾವಿಕ ನ್ಯಾಯದ ಉಲ್ಲಂಘನೆ

ಸ್ವಾಭಾವಿಕ ನ್ಯಾಯದ (Natural Justice) ತತ್ವದ ಪ್ರಕಾರ ಎರಡು ಕಡೆಯವರಿಗೂ ಸಮಾನ ಅವಕಾಶ ಸಿಗಬೇಕು. ಆದರೆ, ಈ ಪ್ರಕರಣದಲ್ಲಿ ತನಿಖಾ ಏಜೆನ್ಸಿಗಳು ಸಲ್ಲಿಸುವ ನೂರಾರು ಪುಟಗಳ ದಾಖಲೆಗಳನ್ನು ಓದಲು, ಅರ್ಥೈಸಿಕೊಳ್ಳಲು ಮತ್ತು ಅದಕ್ಕೆ ಪ್ರತಿಯಾಗಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಕನಿಷ್ಠ ಕಾಲಾವಕಾಶವನ್ನೂ ನೀಡಲಾಗಿಲ್ಲ. ಕಲಾಪದ ಸಮಯ ಮುಗಿದ ಮೇಲೂ ವಿಚಾರಣೆ ನಡೆಸಿ ಆದೇಶ ಹೊರಡಿಸುವ ಏಕಪಕ್ಷೀಯ ಧೋರಣೆ ಅನುಸರಿಸಲಾಗಿದೆ.

10. ನ್ಯಾಯಾಧೀಶರ ಬರವಣಿಗೆಯಲ್ಲೇ ಪ್ರತಿಫಲಿಸಿದ ಅಸಮತೋಲನ

ನ್ಯಾಯಾಲಯದ ಲಿಖಿತ ಆದೇಶಗಳು ಕೇವಲ ಕಾನೂನಿನ ವ್ಯಾಖ್ಯಾನವಾಗಿರದೆ, ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು. ಆದರೆ, ಈ ಪ್ರಕರಣದ ಆದೇಶಗಳಲ್ಲಿ ಬಳಸಲಾದ ಪದಪ್ರಯೋಗಗಳು ಮತ್ತು ವಾಕ್ಯರಚನೆಗಳು ನಿಷ್ಪಕ್ಷಪಾತ ನ್ಯಾಯಾಧೀಶರೊಬ್ಬರ ಬರವಣಿಗೆಯಂತಿಲ್ಲ. ಬದಲಾಗಿ, ಅವು ಆರೋಪಿಯ ವಿರುದ್ಧದ ಆಕ್ರೋಶ ಮತ್ತು ತನಿಖಾ ಸಂಸ್ಥೆಗಳ ಮೇಲಿನ ಅತಿಯಾದ ವಿಶ್ವಾಸವನ್ನು ಬಿಂಬಿಸುವಂತಿವೆ.

ಕೇಜ್ರಿವಾಲ್ ಅವರ ಈ ಹತ್ತು ಅಂಶಗಳ ಪ್ರಮಾಣಪತ್ರವು ಕೇವಲ ಒಬ್ಬ ವ್ಯಕ್ತಿಯ ಕಾನೂನು ಹೋರಾಟವಾಗಿ ಉಳಿದಿಲ್ಲ; ಬದಲಿಗೆ, “ನ್ಯಾಯಮೂರ್ತಿಗಳು ಕೇವಲ ನಿಷ್ಪಕ್ಷಪಾತವಾಗಿರಬಾರದು, ಅವರು ನಿಷ್ಪಕ್ಷಪಾತವಾಗಿದ್ದಾರೆ ಎಂಬುದು ಕಣ್ಣಿಗೆ ಕಾಣುವಂತಿರಬೇಕು ಎಂಬ ಪ್ರಜಾಪ್ರಭುತ್ವದ ಮೂಲಭೂತ ಆಶಯವನ್ನು ಎತ್ತಿಹಿಡಿಯುವ ಪ್ರಯತ್ನವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | SIR ರದ್ದಾಗಲಿ, ಜ್ಞಾನೇಶಕುಮಾರ್‌ ರಾಜೀನಾಮೆ ನೀಡಲಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ‘ಪೀಪಲ್...

SIR | ರಾಜ್ಯದಲ್ಲಿ 43.82 ಲಕ್ಷ ನೋಟಿಸ್ ವಿಚಾರಣೆ ಪೂರ್ಣ; ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ: ಸಿಇಒ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಅಂತಿಮ...

ಬೆಂಗಳೂರು | SIR ವಿರುದ್ಧ ಮೊಳಗಿದ ಘೋಷ; ಪ್ರಜಾತಂತ್ರದ ಉಳಿವಿಗಾಗಿ ‘ಜನತಾ ಮೆರವಣಿಗೆ’

ದೇಶದ ಮತದಾರರ ಮೇಲೆ ಗ್ಯಾನೇಶ್ ಕುಮಾರ್ (ಚುನಾವಣಾ ಆಯೋಗ) ಹೇರಿರುವ ಎಸ್‌ಐಆರ್...

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...