ಎಸ್‌ ಜಾನಕಿ | ಅದ್ಭುತ ಗಾಯಕಿಯ ನಿರ್ಗಮನ ಮತ್ತು ಮಾಧ್ಯಮಗಳ ದಡ್ಡತನ…

Date:

ಎಸ್. ಜಾನಕಿಯವರು ತಮ್ಮ ಹಾಡಿನಷ್ಟೇ ಎತ್ತರದ ಬದುಕನ್ನು ಬಾಳಿ ಹೋಗಿದ್ದಾರೆ. ಕನ್ನಡಿಗರ ಹೆಮ್ಮೆಯ ಸಂಗತಿ ಯಾವುದೆಂದರೆ, ಆಕೆ ಕಡೆಗಾಲದಲ್ಲಿ ನಮ್ಮ ಮೈಸೂರಲ್ಲಿ ನೆಲೆಸಿದ್ದು. ಹಾಗೆ ನೋಡಿದರೆ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ಸಂಗೀತದ ಘಟಾನು ಘಟಿಗಳೆಲ್ಲಾ ಇದ್ದರು. ವೀಣೆ ಶೇಷಣ್ಣ, ಪೀಟಿಲು ಚೌಡಯ್ಯ, ಮೈಸೂರು ಅನಂತಸ್ವಾಮಿ, ಜಟ್ಟಿ ತಾಯಮ್ಮ, ಹೀಗೆ ಸಂಗೀತ ಪರಂಪರೆಯಲ್ಲಿ ನಮ್ಮ ಅರಮನೆಗೂ ಅವಿನಾಭಾವ ಸಂಬಂಧವಿದೆ. ಇಂತಲ್ಲಿ ಎಸ್. ಜಾನಕಿಯಂತಹ ಮಹಾಗಾಯಕಿ ಮೈಸೂರಲ್ಲಿ ನೆಲೆಯಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

- Advertisement -

ದೇಶದ ಪ್ರಖ್ಯಾತ ಹಿನ್ನೆಲೆ ಗಾಯಕಿ ತೀರಿಕೊಂಡಿದ್ದಾರೆ. ಎಸ್. ಜಾನಕಿಯವರು ನಮ್ಮ ದೇಶದ ಸುಮಾರು ಇಪ್ಪತ್ತು ಭಾಷೆಗಳಲ್ಲಿ ಹಾಡಿದ್ದಾರೆ. ಆದ್ದರಿಂದ ಇಡೀ ದೇಶ ಕಂಡ ಅಪ್ರತಿಮ ಗಾಯಕಿ! ಇಂತಹ ಮಹಾನ್ ಗಾಯಕಿ ತೀರಿಕೊಂಡಾಗ ನಮ್ಮ ಮಾಧ್ಯಮಗಳು ಪ್ರದರ್ಶಿಸಿದ ಅಜ್ಞಾನ ಮರುಕಪಡುವಂತದ್ದು, ಏಕೆಂದರೆ ಪ್ರಸ್ತುತವಾಗಿ ಯಾವುದೇ ಘಟನೆ ಸಂಭವಿಸಿದರೂ ನಾವು ಅವರ ಮಾಹಿತಿಗಾಗಿ ದೃಶ್ಯಮಾಧ್ಯಮಗಳನ್ನು ಅವಲಂಬಿಸಿದ್ದೇವೆ. ಆದರೆ ನಮ್ಮ ದೃಶ್ಯ ಮಾಧ್ಯಮಗಳು ಬಿತ್ತರಿಸುವ ಸಂಗತಿಗಳನ್ನು ನೋಡದಿದ್ದರೂ ಆಯ್ತು ಎನ್ನುವಂತಾಗಿದೆ. ಏಕೆಂದರೆ ಅವು ಸಮಯದೂಡುವ ಸಾಧನಗಳಾಗಿವೆ. ಒಂದು ವಾಕ್ಯವನ್ನು ಮೂರು ಬಾರಿ ಹೇಳುತ್ತವೆ. ಉದಾಹರಣೆ ಗಾಯಕಿ ಎಸ್. ಜಾನಕಿ ನಿಧನರಾಗಿದ್ದಾರೆ. ಅವರು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ ಎಂದ ಮೇಲೆ, ಅದೇ ಸಂಗತಿಯು ಒಂದೊಂದೆ ಪದವನ್ನು ಬಿಟ್ಟು ಹೇಳಿ, ಮತ್ತೆ ಕಡೆಯಿಂದ ಪ್ರಾರಂಭಿಸುತ್ತಾರೆ. ಈ ಕೆಲವು ಪದಗಳಲ್ಲೇ ಗಿರಕಿ ಹೊಡೆಯುವ ಇವರಿಗೆ ಪ್ರಖ್ಯಾತ ಗಾಯಕಿಯ ವಿಷಯವೇ ಗೊತ್ತಿಲ್ಲ ಅನ್ನಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ನಂತರ ಅವರ ಅಂತ್ಯಸಂಸ್ಕಾರದವರೆಗಿನ ಅವಧಿಯಲ್ಲಾದರೂ ಅವರ ಬಗೆಗಿನ ಮಾಹಿತಿ ಸಂಗ್ರಹಿಸಲು ಹೋಗಲಿಲ್ಲ. ಕೆಲವು ಚಾನೆಲ್‌ಗಳಂತೂ ರವಿಚಂದ್ರನ್ ನಟಿಸಿದ ದೃಶ್ಯ ಕೊಡುತ್ತಿದ್ದವು. ಎಸ್. ಜಾನಕಿಯವರು ಐವತ್ತರ ದಶಕದಲ್ಲಿ ಬಂದವರು ಅಂದಿನಿಂದ ಕನ್ನಡವೇ ನನ್ನ ಉಸಿರು ಎನ್ನುವಂತೆ ಹಾಡಿದರು. ನಾನು ಮೊದಲು ಅವರ ಹಾಡನ್ನು ಕೇಳಿದ್ದು ಮಹಿಷಾಸುರ ಮರ್ಧಿನಿಯ “ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ” ಹಾಡನ್ನು ನಮ್ಮೂರ ಪಕ್ಕದ ಬಿಂಡಿಗನವಿಲೆಗೆ ಆ ಚಿತ್ರ ಬಂದಿತ್ತು. ನಿರ್ದೇಶಕರಾದ ಬಿ.ಎಸ್. ರಂಗಾ ಬಿಂಡಿಗನವಿಲೆಯವರು. ನಮ್ಮೂರ ಜನ ನೋಡಲೆಂದೆ ಬಾಕ್ಸ್ ಕಳಿಸಿದ್ದರೇನೋ! ನಮ್ಮಕ್ಕ ನನ್ನನ್ನು ಎತ್ತಿಕೊಂಡು ಹೋಗಿದ್ದಳು. ಸಿನಿಮಾ ನನಗೇನು ಹೊಳೆಯದಿದ್ದರೂ ರಾಜಕುಮಾರರ ಅದ್ಭುತ ನಟನೆಯ ಹಾವಭಾವ ನೆನಪಿನಲ್ಲಿದೆ. ಜೊತೆಗೆ ರಾಜ್‌ಕುಮಾರ್ ಎಡಗೈಯಲ್ಲಿ ಹಾವಿಡಿದು ಬಲಗೈಲಿ ಕತ್ತಿ ಹಿಡಿದ ದೃಶ್ಯ ನೆನಪಲ್ಲಿದೆ. ಇದೇ ಆಕಾರವನ್ನು ಚಾಮುಂಡಿ ಬೆಟ್ಟದ ಮೇಲೆ ಕಡೆದು ನಿಲ್ಲಿಸಿದ್ದಾರೆ.

ನಾವು ಯಾವುದೇ ಸಿನಿಮಾ ನೋಡಿ ಹೊರಬಂದರೂ ಕೆಲವು ಹಾಡು ನಮ್ಮನ್ನು ಬೆನ್ನು ಹತ್ತುತ್ತವೆ. ಅಂತಹ ಗಾಯಕಿ ಎಸ್. ಜಾನಕಿ. ಆಕೆ ಹಾಡಿದ ಚಿತ್ರಗಳ ಹಾಡು ನಮ್ಮ ಬದುಕನ್ನು ಹಿಂಬಾಲಿಸಿವೆ. ಆ ಪೈಕಿ ಭಲೇ ಜೋಡಿಯ ‘ಆಲಿಸು ಓ ಇನಿಯ’, ಭಕ್ತ ಕನಕದಾಸರ ‘ಇರುಳು ಎಲ್ಲೆಲ್ಲೂ ಕಾರಿರುಳು’, ಸರಿಯಾಗಿ ಇಲ್ಲಿಗೆ ೫೦ ವರ್ಷಗಳ ಹಿಂದೆ ಭದ್ರಾವತಿಯ ಜೈಶ್ರೀ ಟಾಕೀಸಿಗೆ ಹೋಗಿ ‘ಬಯಲುದಾರಿ’ ಸಿನಿಮಾ ನೋಡಿದೆ. ಕಲ್ಪನಾ ವಯಸ್ಸಿನ ಮಗಳನ್ನು ಕಳೆದುಕೊಂಡಿದ್ದ ನಮ್ಮವ್ವ ಗೊಳೋ ಎಂದು ಅಳಬೇಕಾದರೆ ಎಸ್. ಜಾನಕಿ ಹಾಡಿದ “ಬಾನಲ್ಲೂ ನೀನೆ ಭುವಿಯಲ್ಲೂ ನೀನೆ” ಹಾಡು ಕಾರಣವಾಗಿತ್ತು. ಈ ಹಾಡು ಇವತ್ತಿಗೂ ಹಾಗೇ ಇದೆ. ಇದನ್ನು ಚಿ. ಉದಯಶಂಕರ್ ರಚಿಸಬೇಕಾದರೆ ಅಕ್ಕ ಮಹಾದೇವಿ ವಚನಗಳನ್ನು ಅಧ್ಯಯನ ಮಾಡಿದ್ದರು. ಅಕ್ಕ ಚೆನ್ನಮಲ್ಲಿಕಾರ್ಜುನನನ್ನು ನಿಸರ್ಗದಲ್ಲಿ ಅರಸುತ್ತ ಹೋಗುತ್ತಾಳೆ. ‘ಅವನ ಕುರುಹು ಕಂಡಿರಾ…’ ಎಂದು ಹಕ್ಕಿ-ಪಕ್ಷಿ, ಮರ-ಗಿಡಗಳನ್ನು ಕೇಳುತ್ತಾಳೆ. ಉದಯಶಂಕರ್ ಸ್ಫೂರ್ತಿಗೆ ಇಷ್ಟು ಸಾಕಾಗಿತ್ತು. ಕೆಲವೇ ನಿಮಿಷದಲ್ಲಿ ಹಾಡಲಾಗಿತ್ತು. ಆ ಹಾಡಿನ ಮಾಧುರ್ಯ ಮತ್ತು ದುಃಖಕ್ಕಾಗಿ ಚಿತ್ರದಲ್ಲಿ ಈ ಹಾಡು ಎರಡು ಬಾರಿ ಬರುತ್ತದೆ. ಇಂತಹ ನೂರಾರು ಹಾಡುಗಳಿವೆ. ಇದಲ್ಲದೇ ಕನ್ನಡ ಸಾಹಿತ್ಯದ ಶ್ರೇಷ್ಠ ಕಾವ್ಯ, ಸಿನಿಮಾ ಹಾಡು ಬರೆಯುವವರಿಗೆ ಸ್ಫೂರ್ತಿ ನೀಡಿವೆ.

ಕನ್ನಡದ ಕಾವ್ಯ ಪರಂಪರೆ ಓದದವರೂ ಸ್ವಪ್ರತಿಭೆಯಿಂದ ಚಿತ್ರಗೀತೆಗಳನ್ನು ರಚಿಸಿರಬಹುದು. ಆದರೆ ಅಂದು ಚಿತ್ರಗೀತೆ ಬರೆದ ಸಾಹಿತಿಗಳಾದ ಕು.ರಾ.ಸೀ., ಆರ್.ಎನ್. ಜಯಗೋಪಾಲ್, ಉದಯಶಂಕರ್, ಜಿ.ವಿ. ಅಯ್ಯರ್ ಮತ್ತು ಕಣಗಾಲ್ ಪ್ರಭಾಕರಶಾಸ್ತ್ರಿ ಇವರೆಲ್ಲಾ ಕನ್ನಡ ಕಾವ್ಯಕ್ಕೆ ಸಮನಾದ ಹಾಡುಗಳನ್ನು ಬೆಳ್ಳಿ ತೆರೆಯ ಮೇಲೆ ಕೇಳುವಂತೆ ಮಾಡಿದ್ದರು. ಅದರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ತಮ್ಮ ಹಾಡಿನ ನಡುವೆ ‘ಒಲವು’ ಎಂಬ ಪದವನ್ನು ಸೇರಿಸದೆ ಬಿಡುತ್ತಿರಲಿಲ್ಲ. ಅವರ ಹಾಡುಗಳನ್ನು ಕೇಳಿದವರಿಗೆ ಇದನ್ನು ಜ್ಞಾಪಿಸುವ ಅಗತ್ಯವಿಲ್ಲ. ಬಹುಶಃ ಕನ್ನಡ ಕಾವ್ಯ ಮತ್ತು ಸಾಹಿತ್ಯವನ್ನು ಬೆಳ್ಳಿ ತೆರೆಯ ಮೇಲೆ ತೋರಿಸುತ್ತಿದ್ದ ಕಾಲ ಮುಗಿದು ಹೋಯ್ತು ಅನ್ನಿಸುತ್ತೆ. ಅದಕ್ಕೆ ಎಸ್. ಜಾನಕಿಯವರ ಹಾಡು ಕಡಿಮೆಯಾಗಿದ್ದವು.

ಅವರು ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ಹಾಡುತ್ತ ಬಂದರು. ಅಲ್ಲಿಯೂ ಕೂಡ ಅದ್ಭುತವಾಗಿ ಹಾಡಿದ್ದಾರೆ. ಇವತ್ತಿಗೂ ಸಾಗರ ಸಂಗಮ, ಶಂಕರಾಭರಣ ಚಿತ್ರದ ಹಾಡುಗಳು ಭಾಷೆ ಮೀರಿ ತಮ್ಮ ಮನಮುಟ್ಟಲು ಕಾರಣ ಸಂಗೀತಕ್ಕೆ ಭಾಷೆಯೇ ಇಲ್ಲದ್ದು. ಅಲ್ಲಿ ಕೇವಲ ರಾಗಗಳಿವೆ. ಅವು ಯಾವುದೇ ಭಾಷೆಗೆ ಸಲ್ಲುತ್ತವೆ. ಹಾಗಾಗಿ ಎಸ್. ಜಾನಕಿ ಭಾಷಾತೀತ ಹಾಡುಗಾರ್ತಿ. ಚಿತ್ರನೋಡಿ ಬಂದ ಮೇಲೂ ಎಸ್. ಜಾನಕಿ ದನಿ ನಮ್ಮನ್ನು ಹಿಂಬಾಲಿಸುತ್ತಿದ್ದ ಹಾಡಿಗೆ ನೂರು ಉದಾಹರಣೆ ಕೊಡಬಹುದು. ಗಂಧದ ಗುಡಿ ಚಿತ್ರದಲ್ಲಿ ಸಿಂಹಕ್ಕೆ ಬಲಿಯಾದ ಮಗು ಅದಕ್ಕೂ ಮೊದಲು “ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ” ಎಂಬ ಹಾಡಿನ ಜಾನಕಿಯ ದನಿ ಆ ಮಗುವಿನ ದನಿಯಲ್ಲೇ ಮೂಡಿಬಂದಿತ್ತು. ಸಿನಿಮಾ ನೋಡಿ ಹೊರಬಂದಾಗ ಹಾಗೆ ಈ ಹಾಡು ಬೆನ್ನ ಹತ್ತಿತ್ತು. ಇನ್ನ ಹಳೆಯ ಚಿತ್ರ ಗೀತೆಗಳನ್ನು ನೀವು ಕೇಳಬೇಕು. ಆ ಪೈಕಿ ‘ಮಾವನ ಮಗಳು’ ಚಿತ್ರದ, ‘ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ ನಾ’ ಹಾಡು ಇವತ್ತಿಗೂ ನನ್ನನ್ನು ಮೈಸೂರು, ಮದಾರಾಸಿಗೆ ಕೊಂಡೊಯ್ಯುತ್ತದೆ. ಹಾಗೆಯೇ ‘ಗಾಳಿಗೋಪುರ’ದ, ‘ನಿನ್ನಾಸೆ ತೀರ ನಾಳೆ ಕಾಣುವ..’ ಹಾಡು ಕೇಳುತ್ತ ಕುಳಿತ ಅಶ್ವತ್ಥ್ ಕರಗಿ ಹೋಗುತ್ತಾರೆ. ಇವತ್ತಿಗೂ ಆ ಹಾಡು ತನ್ನ ಪರಿಣಾಮವನ್ನು ಹಾಗೇ ಉಳಿಸಿಕೊಂಡಿದೆ. ಇನ್ನು ‘ದೋಣಿಸಾಗಲಿ ಮುಂದೆ ಹೋಗಲಿ, ದೂರತೀರವ ಸೇರಲಿ’ ಎಂಬ ಹಾಡು ಬರೆದ ಕುವೆಂಪುರವರನ್ನೇ ಭಾವ ಸಮಾಧಿಗೆ ದೂಡಿರಬಹುದು. ಕುವೆಂಪುರವರ ಹಲವು ಗೀತೆಯನ್ನು ನಮ್ಮ ಸಂಗೀತ ನಿರ್ದೇಶಕರು, ತಮ್ಮ ಚಿತ್ರಗಳಿಗೆ ಬಳಸಿಕೊಂಡಿದ್ದಾರೆ. ಆ ಪೈಕಿ ಅವರ ಕಡೆಯ ಹಾಡು “ತೆರೆದಿದೆ ಮನೆ, ಓ ಬಾ ಅತಿಥಿ..” ಎಂಬ ಗೀತೆಯನ್ನು ಕುವೆಂಪು ಕೇಳಿಯೇ ಹೋದರು.

ಬೆಂಗಳೂರಲ್ಲಿ ರಾಜ್‌ರವರ ಉತ್ತುಂಗ ಸ್ಥಿತಿಯಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಕಂಠೀರವ ಸ್ಟೇಡಿಯಂ ಆ ಕಾರ್ಯಕ್ರಮ ಮುಗಿಯಿತು ಜನ ಹೊರಟರು. ಆಗ ಗಗನದಿಂದ ಎಸ್. ಜಾನಕಿಯವರ ‘ಗೆಜ್ಜೆಪೂಜೆ’ ಹಾಡಿನ ಆಲಾಪನೆ ಮೊಳಗಿತು. ‘ಗಗನವು ಎಲ್ಲೊ… ಭೂಮಿಯು ಎಲ್ಲೊ… ಒಂದೂ ಅರಿಯೇ ನಾ..” ಎಂದು ಎಸ್. ಜಾನಕಿಯವರು ಹಾಡಿದ ಕೂಡಲೇ ಲಕ್ಷಾಂತರ ಜನ ಹೊರಟಲ್ಲೇ ಸ್ತಬ್ಧವಾದರು. ಬಹುಶಃ ಜೀವಮಾನದಲ್ಲಿ ಮರೆಯಬಾರದ ದೃಶ್ಯ ಇದು. ಮನೆಯ ಕಡೆ ಹೊರಡುವ ಧಾವಂತದಲ್ಲಿದ್ದ ಜನ ಮನೆ ಮರೆತು ನಿಂತರು. ಆ ಮಹಾನ್ ಗಾಯಕಿಯ ದನಿ ಜನಸ್ತೋಮವನ್ನು ಹಿಡಿದು ನಿಲ್ಲಿಸಿತು. ಆಕೆಯ ಅದ್ಭುತ ಹಾಡಿಗೆಲ್ಲಾ ಸಂಗೀತ ನೀಡಿರುವ ವಿಜಯಭಾಸ್ಕರ್ ಅಲ್ಲೇ ಇದ್ದರು. ಕನ್ನಡ ನಾಡನ್ನು ತಮ್ಮ ಸಂಗೀತದಿಂದಲೇ ಸೂರೆಗೊಂಡ ವಿಜಯಭಾಸ್ಕರ್ ಸಂಗೀತ ನಿರ್ದೇಶಕರಾಗಿ ಮುಖ್ಯರಾಗಿದ್ದರು. ಎಸ್. ಜಾನಕಿಯವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಅವರು ನಾದಸ್ವರವನ್ನು ಮೀರಿಸಿ ಹಾಡಿದ್ದಾರೆ. ಶಹನಾಯಿಯನ್ನು ಮೀರಿಸಿ ಹಾಡಿದ್ದಾರೆ. ಇಷ್ಟು ಮಧುರವಾದ ಧ್ವನಿಯ ಜೊತೆಗೆ ತಮಿಳಿನಲ್ಲಿ ಗಂಡಸಿನ ದನಿಯಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಇದಕ್ಕಿಂತ ಮಿಗಿಲಾಗಿ ಪ್ರಶಸ್ತಿಗಳೆಂದರೆ ಹಪಹಪಿಸುವ ಈ ಕಾಲದಲ್ಲಿ ಪದ್ಮಶ್ರೀಯನ್ನೇ ತಿರಸ್ಕರಿಸಿದ್ದಾರೆ. ಇದು ಒಂದು ದಾಖಲೆ. ಅದಕ್ಕೆ ಅವರು ಕೊಟ್ಟ ಕಾರಣ ಉತ್ತರದವರು ದಕ್ಷಿಣದವರನ್ನು ತಾತ್ಸಾರವಾಗಿ ಕಾಣುತ್ತಾರೆ ಎಂಬುದು. ಅದು ಈಗ ನಿಚ್ಚಳವಾಗಿ ಗೋಚರವಾಗುತ್ತಿದೆ.

ಎಸ್. ಜಾನಕಿಯವರು ತಮ್ಮ ಹಾಡಿನಷ್ಟೇ ಎತ್ತರದ ಬದುಕನ್ನು ಬಾಳಿ ಹೋಗಿದ್ದಾರೆ. ಕನ್ನಡಿಗರ ಹೆಮ್ಮೆಯ ಸಂಗತಿ ಯಾವುದೆಂದರೆ, ಆಕೆ ಕಡೆಗಾಲದಲ್ಲಿ ನಮ್ಮ ಮೈಸೂರಲ್ಲಿ ನೆಲೆಸಿದ್ದು. ಹಾಗೆ ನೋಡಿದರೆ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ಸಂಗೀತದ ಘಟಾನು ಘಟಿಗಳೆಲ್ಲಾ ಇದ್ದರು. ವೀಣೆ ಶೇಷಣ್ಣ, ಪೀಟಿಲು ಚೌಡಯ್ಯ, ಮೈಸೂರು ಅನಂತಸ್ವಾಮಿ, ಜಟ್ಟಿ ತಾಯಮ್ಮ, ಹೀಗೆ ಸಂಗೀತ ಪರಂಪರೆಯಲ್ಲಿ ನಮ್ಮ ಅರಮನೆಗೂ ಅವಿನಾಭಾವ ಸಂಬಂಧವಿದೆ. ಇಂತಲ್ಲಿ ಎಸ್. ಜಾನಕಿಯಂತಹ ಮಹಾಗಾಯಕಿ ಮೈಸೂರಲ್ಲಿ ನೆಲೆಯಾಗಿದ್ದು, ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಇದಕ್ಕೆ ಕಾರಣರಾದವರು ಆಕೆಯ ಸಾಕು ಮಕ್ಕಳಂತಿದ್ದವರು. ತನ್ನ ಮಗನಿಗಿಂತಲೂ ಸಾಕು ಮಕ್ಕಳನ್ನು ಹಚ್ಚಿಕೊಂಡಿದ್ದ ಜಾನಕಿ ಅವರಿಗೆ ತಾಯಿಯ ಪ್ರೀತಿಯನ್ನು ಕೊಟ್ಟಿದ್ದಲ್ಲದೆ, ಅವರು ಇರುವಲ್ಲಿಗೇ ಬಂದರು. ಅವರ ತಾಯಿ ನೆಲವಾದ ಆಂಧ್ರದಲ್ಲಿದ್ದ ಬಂಗಲೆ, ಹಾಗೆಯೇ ಸಿನಿಮಾದವರೆಲ್ಲಾ ಬೀಡುಬಿಟ್ಟಿದ್ದ ತಮಿಳುನಾಡು, ಅಲ್ಲಿನ ಬಂಗಲೆಯನ್ನೆಲ್ಲಾ ಬಿಟ್ಟು ಬಂದು ಮೈಸೂರಿನ ಹೊರವಲಯದ ತೋಟದಲ್ಲಿ ನೆಲೆಸಿದ ಎಸ್. ಜಾನಕಿ ಗಾಯಕಿಯಷ್ಟೆ ಅಲ್ಲ ಮಹಾ ಸಾಧ್ವಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಅದೆಲ್ಲಕ್ಕಿಂತ ಎಲ್ಲ ಐಶ್ವರ್ಯ ಐಷಾರಾಮಿ ಜೀವನವನ್ನು ಮತ್ತು ಖ್ಯಾತಿಯನ್ನು ತೊರೆದು ಸಾಧಾರಣ ತೋಟದಲ್ಲಿ ನೆಲೆಸುತ್ತಾರೆಂದರೆ ಆಕೆ ರಾಜಕುಮಾರ್‌ನಂತಹ ಮೇರು ವ್ಯಕ್ತಿಯಾಗಿ ಕಾಣುತ್ತಾರೆ.

ಇನ್ನು ಆಕೆ ಕನ್ನಡ ನಾಡಿನ ಹೊಸ ವರ್ಷದ ಹಡಾದ ಬೇಂದ್ರೆ ಕವನ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ‘ ಹಾಡನ್ನು ಹಾಡಿದ್ದಾರೆ. ಇದನ್ನು ಪ್ರತಿವರ್ಷ ಕೇಳಲೇಬೇಕು, ಆನಂತರ ಬರುವ ಗಣೇಶನ ಹಬ್ಬದ ಹಾಡು “ಗಜಮುಖನೆ ಗಣಪತಿಯೇ ನಿನಗೆ ವಂದನೆ”. ಈ ಸಂಭ್ರಮದ ಸಮಯ ಮುಗಿದ ನಂತರ ಬರುವ ದೀಪಾವಳಿಗಾಗಿ ‘ಈ ದೀಪಾವಳಿ ಚಂದ‘ ಎಂದು ಹಾಡಿಹೋಗಿದ್ದಾರೆ. ಅಂದರೆ ನಮ್ಮ ಮೂರು ಮಹತ್ವದ ಹಬ್ಬದಲ್ಲೂ ಅವರ ದನಿ ಮೊಳಗುವಂತೆ ಮಾಡಿದ್ದಾರೆ. ಏನನ್ನೂ ಬಯಸದ ಅವರು ನನಗ್ಯಾವ ಸ್ಮಾರಕವೂ ಬೇಡ ಅಂದಿರುವುದು ಅವರ ಶ್ರೇಷ್ಠ ನಡವಳಿಕೆ. ಆದರೆ ಕನ್ನಡದ ಸಂಗೀತ ರಸಿಕರ ಆಸೆ ಏನೆಂದರೆ, ಆಕೆ ಅಂತ್ಯಗೊಂಡ ಜಾಗ ಒಂದು ಪ್ರವಾಸಿ ತಾಣವಾಗಬೇಕು. ಅಂದರೆ ಸಂಗೀತ ಪ್ರೇಮಿಗಳ ಪ್ರವಾಸಿ ತಾಣವಾಗುವಂತೆ ಮಾಡಬೇಕು. ಆಕೆ ಹಾಡಿದ ಹಾಡುಗಳು ನಮ್ಮ ಜೀವಿತಾವಧಿಯವರೆಗೂ ನಮ್ಮ ಜೊತೆಯಲ್ಲಿರುತ್ತವೆ, ಅವರ ನೆನಪೂ ಕೂಡ.

chandre gowda
ಬಿ ಚಂದ್ರೇಗೌಡ
+ posts

ಹಿರಿಯ ಲೇಖಕ, ಲಂಕೇಶ್‌ ಒಡನಾಡಿ

ಪೋಸ್ಟ್ ಹಂಚಿಕೊಳ್ಳಿ:

ಬಿ ಚಂದ್ರೇಗೌಡ
ಬಿ ಚಂದ್ರೇಗೌಡ
ಹಿರಿಯ ಲೇಖಕ, ಲಂಕೇಶ್‌ ಒಡನಾಡಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣದಲ್ಲಿ ಅ.24ರಿಂದ ʼಕಲ್ಯಾಣ ಪರ್ವʼ ರಜತ ಮಹೋತ್ಸವ

ವಿಶ್ವಗುರು ಬಸವಣ್ಣನವರ ತತ್ವ-ಸಿದ್ಧಾಂತಗಳು, ವಚನ ಸಾಹಿತ್ಯದ ಸಂದೇಶ ಹಾಗೂ ಶರಣರ ಸಮಾನತೆಯ...

‘ನೆಹರೂ–ಗಾಂಧಿ, ಯಾದವ್ ಕುಟುಂಬಗಳ ನಾಯಕತ್ವ ಬೇಡ’: ಒವೈಸಿ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ

ಮುಸ್ಲಿಂ ಯುವಕರು ನೆಹರೂ–ಗಾಂಧಿ ಮತ್ತು ಯಾದವ್ ಕುಟುಂಬಗಳ ರಾಜಕೀಯ ನಾಯಕತ್ವವನ್ನು ಅನುಸರಿಸುವುದನ್ನು...

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...