ದೇಶದ ತಾಪಮಾನವು ಸಹಜ ಸ್ಥಿತಿಗಿಂತ ಅತಿಹೆಚ್ಚು ದಾಖಲಾಗುತ್ತಿದೆ: ಹವಾಮಾನ ಇಲಾಖೆ

Date:

ಭಾರತವು ಪ್ರತಿವರ್ಷ ಬೇಸಿಗೆಯ ತೀವ್ರತೆ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತೀಯ ಹವಾಮಾನ
ಇಲಾಖೆಯ ಎಚ್ಚರಿಕೆಗಳು ಕೇವಲ ಮುನ್ಸೂಚನೆಗಳಾಗಿ ಉಳಿಯದೆ, ಗಂಭೀರ ಆರೋಗ್ಯ ಮತ್ತು ಪರಿಸರ
ಸಂಕಷ್ಟದ ಸಂಕೇತಗಳಾಗಿ ಬದಲಾಗುತ್ತಿವೆ.

- Advertisement -

ಉತ್ತರ ಭಾರತದ ರಾಜ್ಯಗಳಿಂದ ಹಿಡಿದು ದಕ್ಷಿಣದವರೆಗೆ ಬಿಸಿಗಾಳಿಯ ತೀವ್ರತೆ ಹೆಚ್ಚುತ್ತಲೇ ಇದೆ. ಬಿಸಿಗಾಳಿ ಈಗ ʼಸಾಮಾನ್ಯʼವಲ್ಲ. ಹಿಂದೆ ಬೇಸಿಗೆ ಎಂದರೆ ಬಿಸಿಲಿನ ದಿನಗಳಾಗಿದ್ದವು. ಆದರೆ ಈಗಿನ ಪರಿಸ್ಥಿತಿ ʼಅತಿ ತೀವ್ರ ಬಿಸಿಗಾಳಿʼಯ
ಹಂತಕ್ಕೆ ತಲುಪಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

“ಈ ಬಿಸಿಗಾಳಿಯು ಸುದೀರ್ಘ ಕಾಲದವರೆಗೆ ಇರುತ್ತದೆ ಮತ್ತು ತಾಪಮಾನವು ಸಹಜ ಸ್ಥಿತಿಗಿಂತ ಅತಿ ಹೆಚ್ಚು ದಾಖಲಾಗುತ್ತಿದೆ. ಇದು ಕೇವಲ ಸೆಖೆಯಲ್ಲ, ಬದಲಿಗೆ ಜೀವಕ್ಕೆ ಕಂಟಕವಾಗುವಂತಹ ಅಪಾಯಕಾರಿ ಪರಿಸ್ಥಿತಿ” ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಜಾಗತಿಕ ಹವಾಮಾನ ಬದಲಾವಣೆ, ಹಸಿರುಮನೆ ಅನಿಲಗಳ ಹೊರಸೂಸುವಿಕೆಯಿಂದಾಗಿ ಜಾಗತಿಕ ತಾಪಮಾನ ಏರುತ್ತಿದೆ. ಇದು ಭೂಮಿಯ ಉಷ್ಣತೆಯನ್ನು ಒಟ್ಟಾರೆಯಾಗಿ ಹೆಚ್ಚಿಸುತ್ತಿದ್ದು, ಬೇಸಿಗೆಯ ದಿನಗಳನ್ನು ಇನ್ನಷ್ಟು ದಾರುಣಗೊಳಿಸುತ್ತಿದೆ. ತೀವ್ರ ತಾಪಮಾನ ಏರಿಕೆಗೆ ಕಾರಣವಾಗಿದೆ.

ನಗರೀಕರಣ ಮತ್ತು ‘ಹೀಟ್ ಐಲ್ಯಾಂಡ್’ ಪರಿಣಾಮದಿಂದ ಗಿಡಮರಗಳು ಕಡಿಮೆಯಾಗಿ ಕಾಂಕ್ರೀಟ್ ಕಟ್ಟಡಗಳು ಮತ್ತು ರಸ್ತೆಗಳು ಹೆಚ್ಚುತ್ತಿವೆ. ಇವು ಹಗಲಿನಲ್ಲಿ ಶಾಖವನ್ನು ಹೀರಿಕೊಂಡು ರಾತ್ರಿಯಲ್ಲೂ ಹೊರಹಾಕುತ್ತವೆ. ಇದರಿಂದ ನಗರಗಳು ʼಶಾಖದ ದ್ವೀಪಗಳಾಗಿʼ ಮಾರ್ಪಟ್ಟಿವೆ.

ಪರಿಸರ ನಾಶದಿಂದ ಕಾಡುಗಳ ನಾಶ ಮತ್ತು ಹಸಿರು ಹೊದಿಕೆ ಕಡಿಮೆಯಾಗುತ್ತಿರುವುದು ಪ್ರಕೃತಿಯ ಸಹಜ ತಂಪು ನೀಡುವ
ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಎಲ್ ನಿನೊ ಪ್ರಭಾವದಿಂದ ಪೆಸಿಫಿಕ್ ಸಾಗರದಲ್ಲಿ ಉಂಟಾಗುವ ತಾಪಮಾನ ಏರಿಕೆಯು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಇದು ಭಾರತದಲ್ಲಿ ಮಳೆಯ ಕೊರತೆ ಮತ್ತು ಉಷ್ಣತೆಯ ಏರಿಕೆಗೆ ಕಾರಣವಾಗುತ್ತದೆ.

ಹೆಚ್ಚುತ್ತಿರುವ ಎಲ್‌ ನಿನೊ ಎಚ್ಚರಿಕೆಗಳು ಮತ್ತು ಅದರ ಪರಿಣಾಮದಿಂದ, ಐಎಂಡಿ ಸೂಚಿಸುವ ‘ರೆಡ್’ ಮತ್ತು ‘ಆರೆಂಜ್’ ಅಲರ್ಟ್‌ಗಳು ಈಗ ಸಾಮಾನ್ಯ ಎಂಬಂತಾಗಿವೆ. ಈ ತೀವ್ರ ಉಷ್ಣತೆಯು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂತಹ ಸಮಸ್ಯೆಗಳಿಂದ, ಅನಾರೋಗ್ಯ, ಹೀಟ್‌ಸ್ಟ್ರೋಕ್(ಬಿಸಿಲಿನ ಹೊಡೆತ), ನಿರ್ಜಲೀಕರಣ ಮತ್ತು ಸುಸ್ತು, ಕೃಷಿ ತೇವಾಂಶದ ಕೊರತೆಯಿಂದ ಬೆಳೆ ಹಾನಿ ಮತ್ತು ಆಹಾರದ ಬೆಲೆ ಏರಿಕೆ, ಸಂಪನ್ಮೂಲ ವಿದ್ಯುತ್ ಬಳಕೆ ಏರಿಕೆ ಮತ್ತು ಕುಡಿಯುವ ನೀರಿನ ತೀವ್ರ ಅಭಾವ, ಮಧ್ಯಾಹ್ನದ ಸಮಯದಲ್ಲಿ ಕೆಲಸ ಮಾಡುವುದು ಅಸಾಧ್ಯ, ಉತ್ಪಾದಕತೆ ಕುಂಠಿತವಾಗುತ್ತದೆ.

ಇದನ್ನೂ ಓದಿದ್ದೀರಾ? ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ನಡುವೆ ಏ.26ರವರೆಗೂ ಮಳೆ: ಹವಾಮಾನ ಇಲಾಖೆ

“ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಬೇಸಿಗೆ ಇನ್ನೂ ಭೀಕರವಾಗಲಿದೆ. ಇದಕ್ಕೆ ಪರಿಹಾರವಾಗಿ, ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು, ನಗರಗಳಲ್ಲಿ ಕೆರೆ-ಕಟ್ಟೆಗಳ ಪುನಶ್ಚೇತನ, ಹಸಿರು ಇಂಧನ ಮತ್ತು ಸುಸ್ಥಿರ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಹೆಚ್ಚುತ್ತಿರುವ ಬಿಸಿಗಾಳಿಯು ಕೇವಲ ಋತುಮಾನದ ಬದಲಾವಣೆಯಲ್ಲ, ಇದು ನಿಸರ್ಗ ನೀಡುತ್ತಿರುವ ಎಚ್ಚರಿಕೆಯ ಕರೆ. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಭಾರತದಲ್ಲಿ ಮುಂಬರುವ ಬೇಸಿಗೆಗಳು ಬದುಕಲು ಅಸಾಧ್ಯವಾದ ಪರಿಸ್ಥಿತಿಯನ್ನು ನಿರ್ಮಿಸಬಲ್ಲವು” ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಶೇ.86.97ರಷ್ಟು ದಾಖಲೆ ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಶುಕ್ರವಾರ ಶಾಂತಿಯುತವಾಗಿ...

ಬೀದರ್ | ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ಶೇ. 86.47ರಷ್ಟು ಮತ ಚಲಾವಣೆ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಬೀದರ್ ಜಿಲ್ಲೆಯಾದ್ಯಂತ...

ನಾಡ ದೇವತೆಯ ಬಳಿ ನನ್ನ ಅಳಲು; ವಿವೇಕಾನಂದ ಎಚ್. ಕೆ

ನಾಡ ದೇವಿ ತಾಯಿ ಚಾಮುಂಡೇಶ್ವರಿ, ನಿನಗೆ ತುಂಬು ಹೃದಯದ ಧನ್ಯವಾದಗಳು. ನಿನ್ನ...

ಬಸವಕಲ್ಯಾಣ | SIR ರದ್ದಾಗಲಿ, ಜ್ಞಾನೇಶಕುಮಾರ್‌ ರಾಜೀನಾಮೆ ನೀಡಲಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ‘ಪೀಪಲ್...