ಸಮ್ಮೇಳನದ ಅಧ್ಯಕ್ಷಗಿರಿಯನ್ನು ಮಠಾಧೀಶರಿಗೆ ನೀಡಿದರೆ ಬಲಿಷ್ಠ ಜಾತಿಯವರಿಗೆ ಮಾತ್ರ ಅವಕಾಶ ಸಿಗುತ್ತದೆ. ಸಾಹಿತಿಗಳನ್ನು ಹೊರತುಪಡಿಸಿ ಇಂಥವರಿಗೆ ಅವಕಾಶ ಮಾಡಲೇಬಾರದು. ಮಠದ ಹೆಸರಲ್ಲಿ ತಿಂಗಳು, ತಿಂಗಳು ಪತ್ರಿಕೆ ಬರುತ್ತೆ ಅಂತ ಇವರೆಲ್ಲ ಸಾಹಿತಿಗಳಾಗುತ್ತಾರಾ?
ಸಾಹಿತ್ಯೇತರರು ಸಮ್ಮೇಳನದ ಅಧ್ಯಕ್ಷರಾಗುವುದು ಬಲಿಷ್ಠ ಜಾತಿಗಷ್ಟೇ ಅವಕಾಶ ಆಗುತ್ತದೆ. ಮಂಡ್ಯದಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟರೆ ಕೆಟ್ಟ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ. ಇದಾಗಬಾರದು ಸಾಹಿತಿಗಳೇ ಅಧ್ಯಕ್ಷರಾಗಬೇಕು. ಸಾಹಿತ್ಯದ ಸುತ್ತಲೇ ಸಾಹಿತ್ಯ ಸಮ್ಮೇಳನದ ಚರ್ಚೆ ನಡೆಯಬೇಕು. ಪ್ರತಿ ಸಲ ಕೋಟ್ಯಂತರ ಹಣ ಖರ್ಚು ಮಾಡಿ ಯಾವುದಕ್ಕೂ ಉಪಯೋಗ ಆಗದಿದ್ದರೆ ಏನು ಬಂತು. ಬರೀ ಭರವಸೆಗಳನ್ನು ವೇದಿಕೆಗಳಲ್ಲಿ ಹೇಳುತ್ತಾರೆ. ಅವುಗಳಾವುವು ಜಾರಿಗೆ ಬರುತ್ತಿಲ್ಲ ಇದಾಗಬಾರದು. ಸ್ವಾಮೀಜಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಸಮಾಜವನ್ನು ಹಿಂದಕ್ಕೆಳೆದಂತೆ ಆಗುತ್ತದೆ.
ಸಮ್ಮೇಳನದ ಅಧ್ಯಕ್ಷಗಿರಿಯನ್ನು ಮಠಾಧೀಶರಿಗೆ ನೀಡಿದರೆ ಬಲಿಷ್ಠ ಮೂರು ಜಾತಿಯವರಿಗೆ ಮಾತ್ರ ಅವಕಾಶ ಸಿಗುತ್ತದೆ. ಸಾಹಿತಿಗಳನ್ನು ಹೊರತುಪಡಿಸಿ ಇಂಥವರಿಗೆ ಅವಕಾಶ ಮಾಡಲೇಬಾರದು. ಯಾರೋ ದುಡ್ಡು ಪಡೆದು ಬರೆದು ಸ್ವಾಮೀಜಿಗಳ ಹೆಸರನ್ನು ಹಾಕುತ್ತಾರೆ, ಇವರೆಲ್ಲ ಸಾಹಿತಿಗಳು ಆಗುತ್ತಾರೆ. ಮಠದ ಹೆಸರಲ್ಲಿ ತಿಂಗಳು, ತಿಂಗಳು ಪತ್ರಿಕೆ ಬರುತ್ತೆ ಅಂತ ಇವರೆಲ್ಲ ಸಾಹಿತಿಗಳು ಆಗುತ್ತಾರಾ? ಕನ್ನಡಿಗರಿಗೆ ಮುಟ್ಟಿದ ಇವರ ಮೌಲಿಕ ಕೃತಿಗಳು ಯಾವುದು ಅಂತ ಬಹಿರಂಗಪಡಿಸಲಿ.
ಸಂಸ್ಕೃತ ಪಾಠಶಾಲೆ ನಡೆಸುವ ಮಠಾಧೀಶರನ್ನು ಕರೆದುಕೊಂಡು ಬಂದರೆ ಕನ್ನಡಕ್ಕೆ ಏನು ಪ್ರಯೋಜನ. ಅವರುಗಳು ನಡೆಸುವ ಶಾಲೆಗಳಲ್ಲಿ ಸಂಸ್ಕೃತ ಮೊದಲ ನುಡಿಯಾಗಿ ಕಲಿಸುತ್ತಾರೆ. ಕನ್ನಡವನ್ನು ಬೇಕಾಬಿಟ್ಟಿಯಾಗಿ ಮೂರನೇ ನುಡಿಯಾಗಿ ಇಟ್ಟಿದ್ದಾರೆ. ಬೇಕಾದರೆ ತೆಗೆದುಕೊಳ್ಳಬಹುದು ಇಲ್ಲದಿದ್ದರೆ ಇಲ್ಲ. ಫ್ರೆಂಚ್, ಜರ್ಮನ್ ಈ ರೀತಿಯಲ್ಲಿ ಯಾವುದಾದರು ನುಡಿ ತೆಗೆದುಕೊಳ್ಳಬಹುದು. ಇವರುಗಳು ಕನ್ನಡದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಏನು ಅರ್ಹತೆ ಇದೆ. ಇವರು ಬೇಕಾದರೆ ಸಂಸ್ಕೃತ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಖಂಡಿತವಾಗಿ ಬೇಡ.
ಮಲ್ಲಿಕಾರ್ಜುನ್ ಮಾತನಾಡಿ, ಕನ್ನಡಿಗರಿಂದ ಸ್ವಾಮೀಜಿಯಾಗಿ ಬೆಳೆದ ಇವರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಕೊಡುಗೆ ಏನು? ಕನ್ನಡಿಗರು ದುಡ್ಡು ಕೊಟ್ಟು ಮಠವನ್ನು ಬೆಳೆಸಿರುವುದಕ್ಕೆ ಮಠದಿಂದ ಕನ್ನಡಕ್ಕೆ ಕೊಡುತ್ತಿರುವ ಕೊಡುಗೆ ಏನು? ಇಂಥವರನ್ನು ನಾವು ಹೊತ್ತು ಮೆರೆಸಬೇಕಾ? ಇವರು ಮಠದಲ್ಲಿ ಸಂಸ್ಕೃತ ಪಾಠ ಶಾಲೆ ನಡೆಸುತ್ತಾರೆ. ಇಂಥ ಮಠಗಳಲ್ಲಿ ಮಕ್ಕಳಿಗೆ ನಮ್ಮ ಮಂಡ್ಯದ ಜನರ ಆಹಾರವಾದ ಬಾಡೂಟವನ್ನು ತರಲು ಬಿಡುವುದಿಲ್ಲ. ಮಕ್ಕಳಿಗೆ ಬಾಡೂಟ ತಿಂದರೆ ವಿದ್ಯೆ ತಲೆಗೆ ಹತ್ತುವುದಿಲ್ಲ ಎಂದು ಇಲ್ಲದ್ದನ್ನು ಮಕ್ಕಳ ತಲೆ ತುಂಬುತ್ತಾರೆ. ಮಠದ ಶಾಲೆಗೆ ಬಾಡೂಟ ತಂದವರನ್ನು ಡಿಸ್ಕ್ರಿಮಿನೆಟ್ ಮಾಡುತ್ತಾರೆ. ಇಂಥವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಹಿತ್ಯಾಸಕ್ತರಿಗೆ ಕೊಡುವ ಆಹಾರದ ಪಟ್ಟಿಯಲ್ಲಿ ಮಂಡ್ಯತನದ ಬಾಡೂಟವನ್ನು ಹೇಗೆ ಸೇರಿಸುತ್ತಾರೆ ಎಂದು ಅನಿಸಿಕೆ ತಿಳಿಸಿದರು.
ಮುಂದುವರಿದು, ಸರಕಾರ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಲು ಹೊರಟರೆ. ಇಂಥ ಮಠಾಧೀಶರು ಹಾಗೂ ರಾಜಕಾರಣಿಗಳೇ ಕೋರ್ಟಿನಲ್ಲಿ ತಡೆ ತರಲು ಕೇಸು ಹಾಕಿಸುತ್ತಾರೆ. ಕನ್ನಡಕ್ಕೆ ಇಂತಹ ರಾಜಕಾರಣಿಗಳು ಮತ್ತು ಮಠಾಧೀಶರಗಳು ಏನು ಕೊಡುಗೆ ಕೊಟ್ಟಿದ್ದಾರೆ ಅಂತ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ವಿರೋಧಿಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, ಮನಸ್ಸಿಗೆ ಬಂದಂತೆ ಸಾಹಿತಿಗಳಲ್ಲದ ಯಾರ್ಯಾರನ್ನೊ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೂರಿಸುವುದಾದರೆ, ಸಾಹಿತ್ಯ ಸಮ್ಮೇಳನವೆಂಬ ಹೆಸರು ಯಾಕೆ ಬೇಕು. ದೇವರು ಮತ್ತು ಧರ್ಮದ ಹೆಸರಲ್ಲಿ ಭಯ ಹುಟ್ಟಿಸಿ ಕನ್ನಡದ ಹೆಣ್ಣುಮಕ್ಕಳಿಗೆ ಧರ್ಮದ ಬಡ್ಡಿ ಅಂತ ತಿಂಗಳಿಗೆ ಬಡ್ಡಿ ಲೆಕ್ಕ ಹಾಕಿ ವಾರಕ್ಕೊಮ್ಮೆ ವಸೂಲಿ ಮಾಡುತ್ತಿದ್ದಾರೆ. ಸೇವೆಯ ಹೆಸರಲ್ಲಿ ನಡೆಯುತ್ತಿರುವ ಈ ದಬ್ಬಾಳಿಕೆಯಿಂದ, ಹೆಣ್ಣು ಮಕ್ಕಳು ಇವರ ಬಡ್ಡಿ ಭಯೋತ್ಪಾದನೆ ತಡೆಯಲಾರದೆ ಸಂಸಾರ ಸಮೇತ ಊರು ಬಿಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತ ಧರ್ಮಾಧಿಕಾರಿಗಳಂತವರು ಮಂಡ್ಯದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಏನು ಸಂದೇಶ ಕೊಟ್ಟಂತಾಗುತ್ತದೆ. ಧರ್ಮದ ಅಧಿಕಾರಿ ಎನಿಸಿಕೊಂಡವರು ತಮ್ಮದೆ ನೆಲದಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ಧ್ವನಿ ಎತ್ತಲು ಸಾಧ್ಯವಾಗದೆ ಇರುವ ವ್ಯಕ್ತಿ ಇಲ್ಲಿ ಬಂದು ಕೊಡುವ ಸಂದೇಶವಾದರೂ ಏನು? ಇಂತಹ ಹುಚ್ಚಾಟಗಳಿಗೆ ಜನರ ತೆರಿಗೆ ಹಣವನ್ನು ವ್ಯಯ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಗೆಪುರ ಚೇತನ್ ಮಾತನಾಡಿ, ಸಾಹಿತ್ಯಕ್ಕೂ ಸ್ವಾಮೀಜಿಗಳಿಗೂ ಏನ್ ಸಂಬಂಧ. ಸ್ವಾಮೀಜಿಗಳು ಮಠಮಾನ್ಯ ಮಾಡಿ ಕೊಂಡು ಸಮಾಜವನ್ನು ಮುಂದಕ್ಕೆ ಹೋಗಲು ಬಿಡದೆ ಹಿಂದಕ್ಕೆ ಎಳೆಯೋರು. ಒಂದೊಂದು ಧರ್ಮ ಹಾಗೂ ಜಾತಿ ಹೆಸರಲ್ಲಿ ಮಠ ಕಟ್ಟಿಕೊಂಡು ಸಮಾಜವನ್ನು ಮುಂದಕ್ಕೆ ಹೋಗಲು ಬಿಡದವರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೊಟ್ಟರೆ ಏನು ಉಪಯೋಗ. ಜಗತ್ತಿನಾದ್ಯಂತ ಸಮಾಜ ಬೇರೆಯ ಸ್ತರಕ್ಕೆ ಹೋಗಿರುವಾಗ ಭಾರತದಲ್ಲಿ ಮಾತ್ರ ಮಠ-ಧರ್ಮ ಅಂತ ಮಾಡಿಕೊಂಡು ಹಿಂದೆಯೇ ಉಳಿಯುತ್ತಿದೆ. ಸಾಹಿತ್ಯ ಸಮಾಜ, ಧರ್ಮದ ಅಂಕುಡೊಂಕುಗಳನ್ನು ವಿಮರ್ಶೆ ಮಾಡಿ ಮುಂದಕ್ಕೆ ತೆಗೆದುಕೊಂಡು ಹೋಗುವಂತದ್ದು. ಸ್ವಾಮೀಜಿಗಳು ಇದರ ವಿರುದ್ಧ ಇದ್ದಾರೆ. ಇವರು ಖಂಡಿತ ಬೇಡ ಎಂದರು.
