- ಆಟೋದಲ್ಲಿ ಒಂದು ಕೋಟಿ ರೂಪಾಯಿ ಸಾಗಾಟ
- ದಾಖಲೆ ಇಲ್ಲದೆ ಹಣ ಸಾಗಿತ್ತಿದ್ದವರು ಪೊಲೀಸ್ ವಶಕ್ಕೆ
ಬೆಂಗಳೂರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಈ ಪ್ರಕರಣ ಹಿನ್ನೆಲೆಯಲ್ಲಿ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋರಿಕ್ಷಾದಲ್ಲಿ ಸಾಗುತ್ತಿದ್ದ ಪ್ರವೀಣ್ ಹಾಗೂ ಸುರೇಶ್ ಎನ್ನುವವರು ತಮ್ಮ ಬಳಿ ಎರಡು ಬ್ಯಾಗುಗಳನ್ನು ಹೊಂದಿಕೊಂಡಿದ್ದರು. ಹೀಗೆ ಹೋಗುತ್ತಿದ್ದ ಆಟೋ ಏಕಾಏಕಿ ಪೊಲೀಸ್ ಸ್ಟೇಷನ್ ಎದುರೇ ಕೆಟ್ಟು ನಿಂತಿತ್ತು.
ಸಾಮಾನ್ಯ ತಪಾಣೆಯಲ್ಲಿದ್ದ ಪೊಲೀಸರು. ಕೆಟ್ಟು ನಿಂತ ಆಟೋ ಬಳಿ ಬಂದು ವಿಚಾರಣೆ ನಡೆಸುವಾಗ ಅಲ್ಲಿದ್ದ ಬ್ಯಾಗ್ ಅವರ ಗಮನ ಸೆಳೆಯಿತು. ಬಳಿಕ ಅದನ್ನು ತೆಗೆಯುವಂತೆ ಸುರೇಶ್ ಹಾಗೂ ಪ್ರವೀಣ್ ಆವರಿಗೆ ಸೂಚಿಸಲಾಯಿತು.
ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ನಡೆದುಕೊಂಡ ಕಾರಣ ಪೊಲೀಸರೇ ಬ್ಯಾಗ್ ಪರಿಶೀಲನೆ ನಡೆಸಿದರು. ಈ ವೇಳೆ ಅಪಾರ ಪ್ರಮಾಣದ ನಗದು ಗೋಚರವಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆದ ಆರಕ್ಷಕರು, ಅವರನ್ನು ಠಾಣೆಗೆ ಕರೆದೊಯ್ದರು.
ಈ ಸುದ್ದಿ ಓದಿದ್ದೀರಾ? :ಚುನಾವಣೆ 2023 | ಕೈ ತಪ್ಪಿದ ಬಿಜೆಪಿ ಟಿಕೆಟ್; ಜೆಡಿಎಸ್‌ನತ್ತ ಸೂರ್ಯಕಾಂತ ನಾಗಮಾರಪಳ್ಳಿ?
ಅಲ್ಲಿನ ಪರಿಶೀಲನೆ ವೇಳೆ ಒಂದು ಕೋಟಿ ನಗದು ಪತ್ತೆಯಾಗಿದೆ. ವಿಚಾರಣೆ ವೇಳೆ ನಗದು ಸಂಬಂಧಿ ಯಾವುದೇ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ.