ಬೆಂಗಳೂರಿನಲ್ಲಿ ಮನೆಯಿಂದ ಮತದಾನ ಮಾಡುತ್ತೇವೆಂದು ನೋಂದಾಯಿಸಿಕೊಂಡಿದ್ದವರಲ್ಲಿ ಮತದಾನಕ್ಕೂ ಮುನ್ನವೇ 33 ಮಂದಿ ಮೃತಪಟ್ಟಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ 80 ವರ್ಷಕ್ಕಿಂತ ಹೆಚ್ಚು ವಯೋಮಾನದ 9,152 ಮಂದಿ ಮನೆಯಿಂದಲೇ ಮತದಾನ ಮಾಡುತ್ತೇವೆಂದು ನೋಂದಾಯಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಏಪ್ರಿಲ್ 30ರವರೆಗೆ 2,264 ಮಂದಿ ಮತಚಲಾಯಿಸಿದ್ದಾರೆ. ಈ ಅವಧಿಯಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯಾದ್ಯಂತ 80 ವರ್ಷಕ್ಕಿಂತ ಮೇಲ್ಪಟ್ಟ 80,250 ಮಂದಿ ಮತ್ತು 19,279 ವಿಶೇಷ ಚೇತನರು ಮನೆಯಿಂದ ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಇದೂವರೆಗೂ 53,085 ಮಂದಿ ಮತದಾನ ಮಾಡಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.