ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳ ಆಹಾರ ಮತ್ತು ಸಾಮಗ್ರಿಗಳ ಸರಬರಾಜು ಟೆಂಡರಿನಲ್ಲಿ 13.81 ಲಕ್ಷ ರೂ. ಭ್ರಷ್ಟಾಚಾರ ನಡೆದ ಕುರಿತು ತನಿಖಾ ವರದಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಝರೆಪ್ಪಾ ಬೆಲ್ಲಾಳೆ ದೂರಿದರು.
ಬೀದರ್ ನಗರದಲ್ಲಿ ಅ. 25 ರಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಬಿಸಿಎಂ ಇಲಾಖೆ ವಸತಿ ನಿಲಯಗಳ ಆಹಾರ ಧಾನ್ಯ ಮತ್ತು ಇತರೆ ಸಾಮಗ್ರಿಗಳ ಸರಬರಾಜು ಟೆಂಡರಿನಲ್ಲಿ ಟೆಂಡರ್ ದರಗಳಿಂತ ಹೆಚ್ಚಿನ ದರ ನಮೂದಿಸಿ 13.81 ಲಕ್ಷ ಭ್ರಷ್ಟಾಚಾರ ಎಸಗಲಾಗಿದೆ. ಈ ಬಗ್ಗೆ ಕಳೆದ ಫೆಬ್ರವರಿ 27ರಂದು ಬಿಸಿಎಂ ಅಧಿಕಾರಿ ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಕಳೆದ ಆಗಸ್ಟ್ 28 ರಂದು ಬೀದರ್ ನಲ್ಲಿ ನಡೆದ ʼಜನಸ್ಪಂದನʼ ಕಾರ್ಯಕ್ರಮದಲ್ಲಿ ಸರಕಾರದ ಲೂಟಿಯಾದ ಹಣವನ್ನು ಗುತ್ತಿಗೆದಾರನಿಂದ ವಸೂಲಿ ಮಾಡಿ, ಟೆಂಡರದಾರನಿಗೆ ಕಪ್ಪು ಪಟ್ಟಿಗೆ ಸೇರಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಸಲ್ಲಿಸಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜನತಾ ದರ್ಶನ ಕಾರ್ಯಕ್ರಮದಿಂದ ಸಾರ್ವಜನಿಕರ ಸಮಸ್ಯೆಗಳು ನಿವಾರಿಸಲು ಸಾಧ್ಯ: ಸಚಿವ ಈಶ್ವರ ಖಂಡ್ರೆ
“ಜಿಲ್ಲಾಡಳಿತಕ್ಕೆ ತನಿಖೆ ವರದಿ ಸಲ್ಲಿಕೆಯಾದರೂ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಳ್ಳದೇ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ, ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ನೀಡದೇ ಮೂಕಪ್ರೇಕ್ಷನಾಗಿ ಕುಳಿತಿದೆ. ಆದರಿಂದ ಮತ್ತೆ ಈ ಜನತಾ ದರ್ಶನದ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇನೆ. ಈಗಲಾದರೂ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು” ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು.