ಭಾರತ ದೇಶವನ್ನು ಬ್ರಿಟಿಷ್ ಬಂಧನದಿಂದ ಮುಕ್ತಿಗೊಳಿಸಲು ಅತಿ ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಹುತಾತ್ಮ ಭಗತ್ ಸಿಂಗ್ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.
ಔರಾದ ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹುತಾತ್ಮ ಭಗತ್ ಸಿಂಗ್ ರವರ ಜನ್ಮ ದಿನಾಚರಣೆಯಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅವರು ಮಾತನಾಡಿದ ಅವರು, “ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಲಾಲಾ ಲಜಪತ್ ರಾಯ್ ರವರ ಜೊತೆಗಿನ ಘಟನೆಯನ್ನು ತನ್ನ ಹೋರಾಟದ ಸ್ಪೂರ್ತಿಯಾಗಿಸಿಕೊಂಡು ಭಗತ್ ಸಿಂಗ್ ಯುವಕರಲ್ಲಿ ಹೊಸ ಜಾಗೃತಿಯ ಸಂಕೇತವಾಗಿ ಹೊರಹೊಮ್ಮಿದರು. ಇಂಥ ಮಹಾನ್ ಚೇತನರ ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿವೆ” ಎಂದರು.
ಉಪನ್ಯಾಸಕ ಶಿವಪುತ್ರ ಧರಣಿ ಮಾತನಾಡಿ, “ಇಂದಿನ ಯುವಕರು, ವಿದ್ಯಾರ್ಥಿಗಳು ಪಠ್ಯ ಓದಿನ ಜೊತೆಗೆ ಭಗತ್ ಸಿಂಗ್ ಅವರಂಥ ಮಹಾತ್ಮರ ಹೋರಾಟದ ಬದುಕಿನ ಕುರಿತು ಅಧ್ಯಯನ ಮಾಡುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಂಜಲಿ ರಾಜಕುಮಾರ, ಜಗದೇವಿ ಶೆಶಿನಾಥ ಮತ್ತು ಶೃತಿ ಸಂಜೀವಕುಮಾರ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳಿ- ಎಸ್‌ಪಿ ಚನ್ನಬಸವಣ್ಣ
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ,ವನದೇವಿ ಎಕ್ಕಳೆ,ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.