- ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಂದ ಆಕ್ಷೇಪ
- ಬೆಳಗ್ಗೆ 10 ಗಂಟೆಯಿಂದ ನಡೆದಿದ್ದ ವಿಚಾರಣೆ
ತೀವ್ರ ಕೂತಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ಕೊನೆಗೂ ಅಂಗೀಕಾರವಾಗಿದೆ. ರಾಜ್ಯ ಬಿಜೆಪಿ ಮತ್ತು ಅಭ್ಯರ್ಥಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬಿಜೆಪಿ ನಾಯಕ ದಿವಂಗತ ಮಾಮನಿ ಅವರ ಪತ್ನಿ ರತ್ನಾ ಮಾಮನಿ ಅವರು ಸವದತ್ತಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಸವದತ್ತಿ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕರಿಸುವಂತೆ ಒತ್ತಾಯ: ಸ್ಥಳದಲ್ಲಿ ಉದ್ವಿಘ್ನ ವಾತವರಣ
ಇದೇ ವಿಷಯವಾಗಿ ಬೆಳಗ್ಗೆ 10 ಗಂಟೆಯಿಂದ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಚುನಾವಣಾ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ಪರವಾಗಿ ವಾದ ಮಂಡಿಸಲು ವಕೀಲರೊಂದಿಗೆ ಆಗಮಿಸಿದ್ದರು.
ಮೂರು ಕಡೆಯವರಿಂದ ವಾದ – ಪ್ರತಿವಾದ ಆಲಿಸಿದ ಚುನಾವಣಾಧಿಕಾರಿಗಳು ರತ್ನಾ ಮಾಮನಿ ಅವರ ನಾಮಪತ್ರ ಕ್ರಮಬದ್ಧವೆಂದು ಘೋಷಿಸಿದ್ದಾರೆ.