ಸಿದ್ಧಾಂತ ಬದ್ಧತೆ ಕಳೆದುಕೊಂಡಿರುವ ಬಿಜೆಪಿ ಈಗ ವಿನಾಶದತ್ತ ಸಾಗುತ್ತಿದೆ; ಜಗದೀಶ್ ಶೆಟ್ಟರ್

Date:

Advertisements
  • ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
  • ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೆಂದು ಶೆಟ್ಟರ್ ಭವಿಷ್ಯ

ಸಿದ್ದಾಂತ ಬದ್ದತೆ ಕಳೆದುಕೊಂಡಿರುವ ಬಿಜೆಪಿ ಈಗ ವಿನಾಶದತ್ತ ಸಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹಾನಗಲ್ ನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ರ್‍ಯಾಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಜೊತೆ ವೇದಿಕೆ ಹಂಚಿಕೊಂಡ ಅವರು ಮಾತೃ ಪಕ್ಷದ ವಿರುದ್ದ ವಾಕ್ಪ್ರಹಾರ ನಡೆಸಿದರು.

ಕುಟುಂಬ ರಾಜಕಾರಣದಿಂದ ದೇಶ ಹಾಳಾಗುತ್ತಿದೆ. ಹಾಗಾಗಿ ಇದಕ್ಕೆ ನಮ್ಮ ಪಕ್ಷ ಆಸ್ಪದ ಕೊಡುವುದಿಲ್ಲ ಎಂದು ಹೇಳಿಕೊಂಡೇ ತಮ್ಮ ಪಕ್ಷದ ಬಹುಪಾಲು ರಾಜಕಾರಣಿಗಳ ಕುಟುಂಬಸ್ಥರಿಗೆ ಟಿಕೆಟ್ ನೀಡಿವೆ. ಇದು ಆ ಪಕ್ಷದ ಬದ್ಧತೆ ಎಂದು ಲೇವಡಿ ಮಾಡಿದರು.

Advertisements

ಬಿಜೆಪಿ ಹೇಳುವುದೊಂದು ಮಾಡುವುದೊಂದು ಅದಕ್ಕೆ ಸಿದ್ಧಾಂತ ಬದ್ಧತೆ ಇಲ್ಲ.ಬೇಕಾದಾಗ ಅವಶ್ಯಕತೆಗೆ ಬದಲಾಗುವುದಾದರೆ ನಿಮಗೆ ಸಿದ್ಧಾಂತ ಏಕೆ ಬೇಕು ಎಂದು ಶೆಟ್ಟರ್ ಕಮಲ ಪಕ್ಷವನ್ನು ಪ್ರಶ್ನಿಸಿದರು.

ಎಪ್ಪತೈದು ವರ್ಷ ಮೀರಿದವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಇವರು 67 ವರ್ಷ ನನಗೇ ಟಿಕೆಟ್ ನಿರಾಕರಿಸಿದರು,ಆದರೆ ಎಪ್ಪತೈದು ಮೀರಿದ ಅವರ ಆಪ್ತರುಗಳಿಗೆ ಟಿಕೆಟ್ ನೀಡಿದರು.

ನನಗೆ ಟಿಕೆಟ್‌ ನಿರಾಕರಣೆ ಮಾಡಿದ್ದಕ್ಕೆ ಇವರ ಬಳಿ ಯಾವುದೇ ಉತ್ತರವಿಲ್ಲ. ನನ್ನ ಬದಲಿಗೆ ನನ್ನ ಸೊಸೆಗೆ ಟಿಕೆಟ್‌ ನೀಡುವುದಾಗಿ ಹೇಳಿದರು. ಇದು ಶಿಸ್ತಿನ ಪಕ್ಷದ ಕುಟುಂಬ ರಾಜಕಾರಣ ವಿರೋಧಿಸುವ ಪರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಈಗ ಮೊದಲಿನ ಪಕ್ಷವಾಗಿಲ್ಲ ಯಾರೋ ನಾಲ್ಕು ಜನರ ಕೈಯಲ್ಲಿ ಪಕ್ಷ ನಿಂತಿದೆ. ಅವರು ಆ ಪಕ್ಷವನ್ನು ಮುಗಿಸುತ್ತಾರೆ, ನಾವು ಕಟ್ಟಿದ ಪಕ್ಷವನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಆಗುವುದಿಲ್ಲ ಹಾಗಾಗಿ ನಾನು ಪಕ್ಷ ಬದಲಾಯಿಸುವ ನಿರ್ಧಾರ ಮಾಡಿದೆ ಎಂದರು.

ಈ ಸುದ್ದಿ ಓದಿದ್ದೀರಾ?:ಬಿಜೆಪಿಯಲ್ಲಿ 40% ಭ್ರಷ್ಟಾಚಾರ ಇಲ್ಲವೆಂದವರು ಯಾರು : ಲಕ್ಷ್ಮಣ ಸವದಿ ಪ್ರಶ್ನೆ

ಮೂವತ್ತು ವರ್ಷ ಪಕ್ಷಕ್ಕೆ ದುಡಿದ ನನ್ನನ್ನೂ ಕನಿಷ್ಟ ಗೌರವದಿಂದ ಅವರು ನಡೆಸಿಕೊಳ್ಳಲಿಲ್ಲ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣಕ್ಕೆ ನನಗೆ ಗೌರವ ಕೊಡುವ ಕಾಂಗ್ರೆಸ್ ಸೇರಿದೆ.

ಹೀಗಾಗಿ ಈ ಬಾರಿ ಬಿಜೆಪಿ ಬದಲು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವೆ. ನಿಮ್ಮ ಅಭಿಮಾನ, ಆಶೀರ್ವಾದ ಕಾಂಗ್ರೆಸ್ ಜೊತೆಗೆ ನನ್ನ ಮೇಲೂ ಇರಲಿ. ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾವೆಲ್ಲ ಶ್ರಮಿಸೋಣ ಎಂದು ಶೆಟ್ಟರ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X