- ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಮುಂದಾದ ಬಿಜೆಪಿ
- ಅಮಿತ್ ಶಾ ಬಳಿಕ ಪ್ರಧಾನಿ ಮೋದಿಯಿಂದಲೂ ಭರದ ಪ್ರಚಾರ
ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಪ್ರಚಾರದ ಭರಾಟೆ ಆರಂಭವಾಗಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲಪಡಿಸುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ನಾಯಕರ ಮೊರೆ ಹೋಗಿದೆ.
ಇದರ ಭಾಗವಾಗಿ ಪಕ್ಷ ಸ್ಟಾರ್ ಪ್ರಚಾರಕ ಅಮಿತ್ ಶಾ ಈ ಭಾಗವನ್ನೂ ಒಳಗೊಂಡಂತೆ ರಾಜ್ಯಾದ್ಯಂತ ಪ್ರಚಾರ ಪ್ರವಾಸ ನಡೆಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಚಾಮರಾಜನಗರ | ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಅಭ್ಯರ್ಥಿ ಕಾರಿಗೆ ಬೆಂಕಿ
ಈ ಹಿನ್ನೆಲೆಯಲ್ಲಿ (ಏ 24) ಇಂದು ಮೈಸೂರಿಗೆ ಭೇಟಿ ನೀಡಿದ ಅಮಿತ್ ಶಾ ನಾಡ ಅಧಿದೇವತೆ ಚಾಮುಂಡೇಶ್ಚರಿಗೆ ಪೂಜೆ ಸಲ್ಲಿಸಿ ತಮ್ಮ ಕಾರ್ಯಕ್ರಮ ಆರಂಭಿಸಿದರು.
ಈ ವೇಳೆ ಅಮಿತ್ ಶಾಗೆ ಶಾಸಕ ಎಸ್.ಎ ರಾಮದಾಸ್ ಸೇರಿ ಹಲವು ಮುಖಂಡರು ಸಾಥ್ ನೀಡಿದರು. ಇಂದು ಅಮಿತ್ ಶಾ ಅವರು ಚಾಮರಾಜನಗರ, ಹಾಸನ ಹಾಗೂ ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ, ಪ್ರಚಾರ ನಡೆಸಲಿದ್ದಾರೆ.
ಏಪ್ರಿಲ್ 22ರಂದು ರಾಜ್ಯಕ್ಕೆ ಬಂದಿಳಿದಿರುವ ಅಮಿತ್ ಶಾ, ಚುನಾವಣೆ ಮುಕ್ತಾಯದವರೆಗೂ ಹಲವು ಹಂತಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಇವರಿಗೆ ಪ್ರಧಾನಿ ಮೋಧಿ ಹಾಗೂ ಹಲವು ರಾಷ್ಟ್ರೀಯ ನಾಯಕರು ಜೊತೆಯಾಗಲಿದ್ದಾರೆ.