- ‘ಬಜರಂಗದಳದ ಜೊತೆಗೆ ಇತರೆ ಸಂಘಟನೆಗಳ ನಿಷೇಧ
- ಹುಲಿಗಳಿಗೆ ಮೋದಿ ಅದಾನಿಯ ಭೀತಿ ಎಂದ ಹರಿಪ್ರಸಾದ್
ರಾಜ್ಯ ಮತ್ತು ಕೇಂದ್ರದಲ್ಲಿರುವುದು ಡಬಲ್ ಎಂಜಿನ್ ಸರ್ಕಾರವಲ್ಲ ಡಬಲ್ ದೋಖಾ ಸರ್ಕಾರ ಎಂದು ವಿಧಾನಪರಿಷತ್ತಿನ ಪ್ರತಿ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳವಾರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿಯ ಪ್ರಣಾಳಿಕೆ ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
“ಪ್ರಧಾನಿ ಮೋದಿ ಮೊನ್ನೆಯಷ್ಟೇ ಉಚಿತ ಕೊಡುಗೆ ಕುರಿತು ಪ್ರಧಾನಿ ಟೀಕಿಸಿದ್ದರು. ಈಗ ಅವರು ಉಚಿತ ಕೊಡುಗೆಗಳನ್ನು ಘೋಷಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಮುಚ್ಚಿ ಅಟಲ್ ಕ್ಯಾಂಟೀನ್ ತಂದಿದ್ದಾರೆ. ಇದು ಇವರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ” ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವ ಎಲ್ಲ ಸಂಘಟನೆಗಳನ್ನು ನಿಷೇಧಿಸಲಾಗುವುದು” ಎಂದಿದ್ದಾರೆ
ಪ್ರಧಾನಿ ಮೋದಿ ಅವರ ರಾಜ್ಯ ಭೇಟಿ ಉದ್ದೇಶಿಸಿ, “ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ ಅನೇಕರು ಮೃತಪಟ್ಟಿದ್ದರು. ಪ್ರಧಾನಿ ಮೋದಿ ಈಗ ಹುಲಿ ನೋಡಲು ಬಂದಿದ್ದಾರೆ. ಈಗಲೂ ಅವರು ಮೃತಪಟ್ಟವರ ಕುಟುಂಬಗಳತ್ತ ಸುಳಿಯಲಿಲ್ಲ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ, ಪ್ರಣಾಳಿಕೆ ಭರವಸೆ ಈಡೇರಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ
“ಮೋದಿ ಕಣ್ಣಿಗೆ ಬಿದ್ದರೆ ಎಲ್ಲಿ ಅದಾನಿಗೆ ಮಾರಾಟ ಮಾಡುತ್ತಾರೋ ಎನ್ನುವ ಭಯದಿಂದ ಹುಲಿಗಳೂ ಅಡಗಿ ಕೂತಿದ್ದವು. ಹುಲಿಗಳೂ ಇವರ ಕಣ್ಣಿಗೆ ಬೀಳಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.