ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು?: ನೀವಿದ್ದಲ್ಲಿಯೇ ಪರಿಶೀಲಿಸಲು ಇಲ್ಲಿ ನೋಡಿ

Date:

Advertisements

ರಾಜ್ಯ ವಿಧಾನಸಭಾ ಚುನಾವಣೆ ಬುಧವಾರ (ಮೇ 10) ನಡೆಯಲಿದೆ. ಎಲ್ಲ ಪಕ್ಷಗಳು ಬಹಿರಂಗ ಪ್ರಚಾರ ಮುಗಿಸಿವೆ. ಚುನಾವಣಾಧಿಕಾರಿಗಳು ಮತದಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ವಲಸೆ ಹೋಗಿರುವ ಮತದಾರರು ತಮ್ಮ ಕ್ಷೇತ್ರದತ್ತ ಮುಖಮಾಡಿದ್ದಾರೆ. ಹಲವು ಯುವಜನರು ಮೊದಲ ಬಾರಿಗೆ ಮತದಾನ ಮಾಡಲು ಕಾತುರದಲ್ಲಿದ್ದಾರೆ.

ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹೊಸದಾಗಿ ಅರ್ಜಿ ಹಾಕಿದ್ದವರು. ಎರಡೆರಡು ಕಡೆ ಹೆಸರು ಹೊಂದಿದ್ದವರು. ತಮ್ಮ ಹೆಸರು ಮತದಾರ ಪಟ್ಟಿಯಲ್ಲಿದೆಯೇ ಅಥವಾ ಡಿಲೀಟ್‌ ಆಗಿದೆಯೇ ಎಂಬ ಗೊಂದಲದಿದ್ದಾರೆ.

ಅಂತಹವರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದು. ಪರಿಶೀಲಿಸಲು ಈ ಲಿಂಕ್‌ ಮೇಲೆ ಕ್ಲಿಕ್ ಮಾಡಿ https://electoralsearch.in/. ಬಳಿಕ ಚುನಾವಣಾ ವೆಬ್‌ಸೈಟ್ ತೆರೆದುಕೊಳ್ಳುತ್ತದೆ.

Advertisements

ಅಲ್ಲಿ ಎರಡು ರೀತಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಮೊದಲನೆಯ ವಿಧಾನದಲ್ಲಿ, ನಿಮ್ಮ ವೈಯಕ್ತಿಕ ವಿವರಗಳನ್ನು ಅಂದರೆ – ನಿಮ್ಮ ಹೆಸರು, ನಿಮ್ಮ ತಂದೆ ಅಥವಾ ಗಂಡನ ಹೆಸರು, ವಯಸ್ಸು, ಲಿಂಗ (ಜೆಂಡರ್), ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ತುಂಬಬೇಕು. ಬಳಿಕ ಪಕ್ಕದಲ್ಲಿರುವ ಕಾಪ್ಟವನ್ನು ನಮೂದಿಸಿ, ಸೆರ್ಚ್‌ ಮೇಲೆ ಕ್ಲಿಕ್ ಮಾಡಬೇಕು. ಆಗ, ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ತೆರೆದುಕೊಳ್ಳುತ್ತದೆ.

Capture

ಮತ್ತೊಂದು ವಿಧಾನದಲ್ಲಿ ಎಪಿಕ್ ಸಂಖ್ಯೆ ಮೂಲಕ ಪರಿಶೀಲಿಸಬಹುದು. ಚುನಾವಣಾ ಪೇಜ್‌ನಲ್ಲಿ ‘ಸೆರ್ಚ್‌ ಬೈ ಎಪಿಕ್ ನಂಬರ್’ ಎಂಬುದರ ಮೇಲೆ ಕ್ಲಿಕ್ ಮಾಡಿ, ಬಳಿಕ ನಿಮ್ಮ ಮತದಾರ ಗುರುತಿನ ಚೀಟಿಯಲ್ಲಿರುವ ಎಪಿಕ್ ಸಂಖ್ಯೆಯನ್ನು ನಮೂದಿಸಿ, ನಂತರ ರಾಜ್ಯ ಯಾವುದು ಎಂದು ಆಯ್ಕೆ ಮಾಡಿ… ಆ ನಂತರ, ಅಲ್ಲಿ ನೀಡಲಾಗುವ ಕಾಪ್ಟವನ್ನು ನಮೂದಿಸಿ ಸೆರ್ಚ್‌ ಮೇಲೆ ಕ್ಲಿಕ್ ಮಾಡಿ... ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ…

Capture1

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X