ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಪರವಾನಗಿ ನೀಡುವಾಗ ಸಾಕಷ್ಟು ಅಕ್ರಮಗಳನ್ನು ನಡೆಸಿ, ಪರವಾನಗಿ ಮಂಜೂರು ಮಾಡಿರುವ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ವ್ಯವಸ್ಥಾಪಕಿಯನ್ನು ಅವ್ಯವಹಾರದ ಆರೋಪದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ.

ಚಿತ್ರದುರ್ಗದ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖಾ ವ್ಯವಸ್ಥಾಪಕಿ ಶಬೀನಾ ಪರ್ವಿನ್ ಅಮಾನತುಗೊಂಡಿರುವ ಅಧಿಕಾರಿಯಾಗಿದ್ದು, ಬೆಂಗಳೂರು ವಿಭಾಗದ ಇಲಾಖೆ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957 ರ ನಿಯಮ 10(1) ಜೊತೆಗೆ 10(8) ರನ್ವಯ ನಿಯಮಗಳ ಅಡಿಯಲ್ಲಿ ಆಮ್ಲಾನ್ ಆದಿತ್ ಬಿಸ್ವಾಸ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಸಿದವರು ಕಾಂತರಾಜ್ ವರದಿ ಜಾರಿಗಾಗಿ ಕಾಯುತ್ತಿದ್ದಾರೆ, ಹೊಟ್ಟೆ ತುಂಬಿದವರು ವಿರೋಧಿಸುತ್ತಾರೆ ; ಈಶ್ವರಾನಂದಪುರಿ ಶ್ರೀ
ಈ ಮಹಿಳೆಯ ಮೇಲೆ ಹಲವು ವರ್ಷಗಳಿಂದಲೂ ಅಕ್ರಮದ ಆರೋಪ ಕೇಳಿಬಂದಿತ್ತು. ಇಲಾಖೆಯ ನೌಕರರ ವಲಯದಲ್ಲೂ, ನ್ಯಾಯಬೆಲೆ ಅಂಗಡಿ ಮಾಲೀಕರ ವಲಯದಲ್ಲೂ ಈ ಮಹಿಳೆ ನ್ಯಾಯಬೆಲೆ ಅಂಗಡಿ ಮಂಜೂರು ವೇಳೆ ಸಾಕಷ್ಟು ಅಕ್ರಮ ನೆಡೆಸುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಕೆಲವು ಅಂಗಡಿಗಳನ್ನು ತಮ್ಮ ತಮ್ಮ ಸಂಬಂಧಿಕರಿಗೆ ಪರವಾನಗಿ ಮಂಜೂರು ಮಾಡಿರುವ ಆರೋಪ ಕೂಡ ಕೇಳಿ ಬಂದಿತ್ತು. ಅಲ್ಲದೆ ಮಹಿಳೆಯೊಬ್ಬರಿಗೆ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಹಣ ಪಡೆದು ಮಂಜೂರು ಮಾಡದೇ ವಂಚಿಸುತ್ತಿದ್ದಾರೆ ಎನ್ನುವ ಆರೋಪವನ್ನು ಕೂಡ ಹಣ ಕಳೆದುಕೊಂಡ ಮಹಿಳೆ ಆರೋಪಿಸಿದ್ದರು