ಕಟಾವಿಗೆ ಬಂದಿದ್ದ 450ಅಡಿಕೆ ಮರಗಳಿಗೆ ಒಣಗುವ ಔಷಧಿ ಇಟ್ಟಿರುವ ಘಟನೆ ತ್ಯಾವಣಿಗೆ ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಮುಸ್ಲಿಂ ಸಮಾಜದ ನೂರಾಣಿ ಮಸೀದಿಗೆ ಸೇರಿದ ತೋಟದ ಸುಮಾರು 450 ಅಡಿಕೆ ಮರಗಳಿಗೆ ದುಷ್ಕರ್ಮಿಗಳು ವಣಗುವ ಔಷಧಿ ಇಟ್ಟಿದ್ದಾರೆ.
ಮುಸ್ಲಿಂ ಕಮಿಟಿಗೆ ಸೇರಿದ ಜಾಗದಲ್ಲಿ ಸಾಂಗಾಹಳ್ಳಿ ಬಷೀರ್ ಸಾಬ್ ಎಂಬುವವರು, ಎರಡು ಎಕರೆ ಭೂಮಿಯಲ್ಲಿ ಒಂದು ಸಾವಿರ ಅಡಿಕೆ ಸಸಿ ನೆಟ್ಟು ಪೋಷಣೆ ಮಾಡಿ ಬೆಳೆಸಿದ್ದರು. ಈಗ ಈ ಮರಗಳಲ್ಲಿ ಫಸಲು ಕಟಾವು ಹಂತದಲ್ಲಿತ್ತು. ಅಡಿಕೆ ಮರಗಳ ಬುಡಕ್ಕೆ ಮಚ್ಚಿನಿಂದ ಕಚ್ಚಿ ಹಾಕಿ ರೌಂಡ್ ಅಪ್ ಔಷಧಿ ಸಿಂಪಡಿಸಿದ್ದಾರೆ. ಇದರಿಂದಾಗಿ ಅಡಿಕೆ ಮರಗಳು ಒಣಗಿವೆ. ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಸಮಾಜದವರು ಬಸವಪಟ್ಟಣ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.