- ಜಿಲ್ಲಾ ಬಿಜೆಪಿ ವತಿಯಿಂದ ಚುನಾವಣಾಧಿಕಾರಿಗೆ ಮನವಿ ಸಲ್ಲಿಕೆ
- ಮಾದಿಗರ ವೋಟು ನಮಗೆ ಬರಲ್ಲ ಎಂದಿರುವ ಆಡಿಯೋ ವೈರಲ್
ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಮಾದಿಗ ಜಾತಿ ಕುರಿತು ಅವಾಚ್ಯ ಶಬ್ದ ಬಳಸಿ ಬೈದಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸುವ ಬಿಜೆಪಿ ವತಿಯಿಂದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು.
ಜೆಡಿಎಸ್ ಗುರುಮಠಕಲ್ ಅಭ್ಯರ್ಥಿ ಶರಣಗೌಡ ಕಂದಕೂರು ಅವರು ಮಾದಿಗ ಜಾತಿ ಎತ್ತಿ ಬೈದು ‘ಮಾದಿಗ ಸೂಳೆಮಕ್ಕಳು ವೋಟು ನಮಗೆ ಬರುವುದಿಲ್ಲ’ ಎಂದು ಬೈದ ಆಡಿಯೋ ವೈರಲ್ ಆಗಿದ್ದು, ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಂಡು ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಮಾದಿಗ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದು, ಸಂದರ್ಭಿಕವಾಗಿ ಮಾದಿಗ ಸಮುದಾಯವನ್ನು ತೆಗಳುವ ವೇಳೆ ಜಾತಿ ನಿಂದನೆ ಮಾಡಿ ಸಮುದಾಯದ ವಿರುದ್ಧ ತಮ್ಮ ಮನಸ್ಥಿತಿಯನ್ನು ತೋರ್ಪಡಿಸುತ್ತಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆ ಸ್ಥಾಪನೆ
ಕೂಡಲೇ ಕ್ರಮ ಕೈಗೊಂಡು ಜಾತಿ ನಿಂದನೆ ಮಾಡಿದ ಶರಣಗೌಡ ಕಂದಕೂರು ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಬಿಜೆಪಿ ಯಾದಗಿರಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಭೀಮಾಶಂಕರ ಭಿಲ್ಲವ ಹಾಗೂ ಇತರರಿದ್ದರು.