ಡಾ ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ನಮ್ಮ ದುಡ್ಡನ್ನೇ ಠೇವಣಿ ಇಡಬೇಕೆಂದು ಒತ್ತಾಯಿಸಿ, ಕಾಂಗ್ರೆಸ್ ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ಒಂದಿಲ್ಲೊಂದು ಕುತೂಹಲಕಾರಿ ವಿದ್ಯಮಾನಗಳು ಜರುಗುತ್ತಿವೆ. ಇದೀಗ ಕಾರ್ಯಕರ್ತರೇ ದೇಣಿಗೆ ನೀಡಿರುವ ಘಟನೆ ನಡೆದಿದೆ.
ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಪಕ್ಷದ ಕಾರ್ಯಕರ್ತರು ಹಣ ನೀಡಿ ಹಾರೈಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಸಚಿವರ ಸಂಪತ್ತು ಹಲವು ಪಟ್ಟು ಹೆಚ್ಚಳ
ಕೊರಟಗೆರೆಯ ಗ್ರಾಮವೊಂದರಲ್ಲಿ ಸಭೆ ನಡೆದ ಬಳಿಕ 100ಕ್ಕೂ ಹೆಚ್ಚು ಕಾರ್ಯಕರ್ತರು ಠೇವಣಿ ಹಣವನ್ನು ತಾವು ನೀಡಿದ ದೇಣಿಗೆಯಿಂದಲೇ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾರ್ಯಕರ್ತರ ಸಭೆ ಬಳಿಕ ನೂರಾರು ಕಾರ್ಯಕರ್ತರು ದೇಣಿಗೆ ಹಣ ನೀಡಿದ್ದಾರೆ. ಈ ಮೂಲಕ ಪರಮೇಶ್ವರ್ ಅವರಿಗೆ ಶಕ್ತಿ ತುಂಬಲು ಮುಂದಾಗಿದ್ದಾರೆ.
ಕಾರ್ಯಕರ್ತರು ದೇಣಿಗೆ ನೀಡಿ, ಅದೇ ಹಣದಿಂದ ಠೇವಣಿ ಇರಿಸುವಂತೆ ಹೇಳಿದ್ದು, ಜನರ ಪ್ರೀತಿಗೆ ಜಿ ಪರಮೇಶ್ವರ್ ಭಾವುಕರಾಗಿದ್ದಾರೆ.
ಈ ಮೊದಲು ವೈ ಎಸ್ ವಿ ದತ್ತ ದೇಣಿಗೆ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ವಿಧಾನಪರಿಷತ್ ಸದಸ್ಯ ವೈಎಸ್ ವಿ ದತ್ತ ಅವರಿಗೆ ಕಡೂರಿನ ‘ಕೈ’ ಟಿಕೆಟ್ ತಪ್ಪಿತ್ತು. ಬಳಿಕ ಬೇಸರಗೊಂಡಿದ್ದ ಅವರು ಕಾರ್ಯಕರ್ತರ ಸಭೆ ಕರೆದಿದ್ದರು. ಕಾರ್ಯಕರ್ತರ ಸಭೆ ಬಳಿಕ ವೈ ಎಸ್ ವಿ ದತ್ತ ಅವರು ದೇಣಿಗೆ ಸಂಗ್ರಹಿಸಿ ಗಮನ ಸೆಳೆದಿದ್ದರು. ಬಳಿಕ ಕಾಂಗ್ರೆಸ್ ತೊರೆದು ಮರಳಿ ಜೆಡಿಎಸ್‌ಗೆ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡರು.