ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-1: ಈ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ

Date:

Advertisements
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾವ ಕಡೆ ಇದೆ ಎಂಬುದನ್ನು ಅರಿಯುವ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಿದ ತಕ್ಷಣ ಈ ಕ್ಷೇತ್ರದ ಅತ್ಯಂತ ಹಿರಿಯ ತಜ್ಞರ ಜೊತೆ ಚರ್ಚಿಸಿದೆವು. ಇಂತಹ ಸಮೀಕ್ಷೆ ನಡೆಸುವ ವಿಧಾನವೇ ಒಂದು ವಿಜ್ಞಾನವಾಗಿ ಬೆಳೆದಿದ್ದು, ಅದೂ ಸಹಾ ನಮ್ಮ ಓದುಗರಿಗೆ ತಲುಪಲಿ ಎಂದು ನಾವು ಭಾವಿಸುತ್ತೇವೆ. ಮುಂದಿನ ಆರು ದಿನಗಳಲ್ಲಿ ಸಮೀಕ್ಷೆಯ ಪೂರ್ಣ ವಿವರಗಳನ್ನು ಹಂತಹಂತವಾಗಿ ನಿಮ್ಮ ಮುಂದಿಡಲಾಗುತ್ತದೆ. ಕಡೆಯದಾಗಿ, ಕರ್ನಾಟಕದ ಮತದಾರರ ಒಲವು ಯಾವ ಪ್ರಮಾಣದಲ್ಲಿ ಯಾವ ಪಕ್ಷಗಳ ಕಡೆಗಿದೆ ಎಂಬುದನ್ನು ತಿಳಿಸಲಾಗುತ್ತದೆ.

ಚುನಾವಣೆ 2023’ರ ಸಮೀಕ್ಷೆಯ ವ್ಯಾಪ್ತಿ, ವಿಧಾನ ಮತ್ತು ಸ್ಯಾಂಪಲ್‌ ಆಯ್ಕೆ

ಸಮೀಕ್ಷೆಯ ವ್ಯಾಪ್ತಿ

  • ಇಲ್ಲಿಯವರೆಗೆ ಸಮೀಕ್ಷೆ ನಡೆಸಲಾದ ಕ್ಷೇತ್ರಗಳ ಸಂಖ್ಯೆ: 183 (ಬೆಂಗಳೂರಿನ 28 ಕ್ಷೇತ್ರಗಳು ಸೇರಿದಂತೆ ಕೆಲವೆಡೆ ಕ್ಷೇತ್ರ ಕಾರ್ಯ ಇನ್ನೂ ನಡೆಯುತ್ತಿದೆ)
  • ಇಲ್ಲಿಯವರೆಗೆ ಸಮೀಕ್ಷೆ ನಡೆಸಲಾದ ಮತಗಟ್ಟೆಗಳ ಸಂಖ್ಯೆ: 1,483
  • ಇಲ್ಲಿಯವರೆಗೆ ನಡೆಸಲಾದ ಸಂದರ್ಶನಗಳ ಸಂಖ್ಯೆ: 39,181
  • ಕ್ಷೇತ್ರ ಕಾರ್ಯದ ಅವಧಿ: ಮಾರ್ಚ್‌ 3ರಿಂದ ಇಂದಿನ ದಿನದವರೆಗೆ

ಸಮೀಕ್ಷೆಯ ವಿಧಾನ:

ಸಮೀಕ್ಷೆಯನ್ನು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಾಡಲಾಗುತ್ತಿದೆ (ಇಲ್ಲಿಯವರೆಗೆ ಎಷ್ಟು ಆಗಿದೆ ಎಂಬುದರ ವಿವರ ಮೇಲೆ ಕೊಡಲಾಗಿದೆ). ಎಂಟೆಂಟು ಜೋಡಿ ಮತಗಟ್ಟೆಗಳನ್ನು, ವೈಜ್ಞಾನಿಕವಾಗಿ ಯಾವುದೇ ಒಲವು/ಪೂರ್ವಗ್ರಹಕ್ಕೆ ಅವಕಾಶವಿಲ್ಲದಂತೆ ಮತದಾರರ ಪಟ್ಟಿಯಿಂದ ಆಯ್ದುಕೊಂಡು (random sampling) ಗುರುತಿಸಿಕೊಳ್ಳಲಾಯಿತು. ನಂತರ ಆಯಾ ಮತಗಟ್ಟೆಗಳಲ್ಲಿ ಮತದಾರರನ್ನೂ ವೈಜ್ಞಾನಿಕವಾಗಿ ಯಾವುದೇ ಒಲವು/ಪೂರ್ವಗ್ರಹವಿಲ್ಲದೇ ಮತದಾರರ ಪಟ್ಟಿಯಿಂದ ಆಯ್ದುಕೊಂಡು (random sampling) ಮಾತನಾಡಿಸಲಾಯಿತು. ಇದು ಮತದಾರರನ್ನು ಅವರುಗಳ ಮನೆಗಳಲ್ಲಿ ಮುಖಾಮುಖಿ ಭೇಟಿ ಮಾಡಿ ನಡೆಸಲಾದ ಸಮೀಕ್ಷೆಯಾಗಿದೆ, ಫೋನಿನಲ್ಲಿ ಮಾತನಾಡಿಸಿ ಮಾಡಿದ್ದಲ್ಲ. ಈ ಸಂದರ್ಶನಗಳನ್ನು ಮಾಡಿರುವವರಲ್ಲಿ ಬಹುತೇಕರು, ‘ಈ ದಿನ’ ಮಾಧ್ಯಮ ನೆಟ್ವರ್ಕ್‌ ಜೊತೆಗಿರುವ ವಾಲಂಟಿಯರುಗಳಾಗಿದ್ದಾರೆ. ಕನ್ನಡದಲ್ಲಿ ತಯಾರಿಸಲಾದ ಪ್ರಶ್ನಾವಳಿಯನ್ನು ಇಟ್ಟುಕೊಂಡು, ಈ ದಿನ ಸರ್ವರ್‌ಗೆ ನೇರವಾಗಿ ತಲುಪುತ್ತಿದ್ದ ಆನ್‌ ಲೈನ್‌ ಸಾಫ್ಟ್‌ ವೇರ್‌ ಅನ್ನು ಈ ವಾಲಂಟಿಯರುಗಳು ಬಳಸಿದ್ದಾರೆ.

Advertisements

ಈ ವರದಿ ಓದಿದ್ದೀರಾ: ಕರ್ನಾಟಕ ವಿಧಾನಸಭಾ ಚುನಾವಣೆ 2023 ಪ್ರತಿ ಕ್ಷೇತ್ರದ ಸಮಗ್ರ ಮಾಹಿತಿ

ಪ್ರತಿಕ್ರಿಯಿಸಿದ ಮತದಾರ ಸಮೂಹದ ಸ್ವರೂಪ

ಸಮಾಜದ ಎಲ್ಲ ಸಮುದಾಯಗಳ ಪ್ರಾತಿನಿಧ್ಯ ಖಾತರಿಯಾಗುವಂತೆ ನಾವು ಸಮೀಕ್ಷೆ ನಡೆಸಬೇಕು. ಅಂದರೆ, ರಾಜ್ಯದಲ್ಲಿ ಶೇ.18ರಷ್ಟು ಪರಿಶಿಷ್ಟ ಜಾತಿಗೆ ಸೇರಿದ ಮತದಾರರಿದ್ದರೆ, ನಾವು ಇಡೀ ರಾಜ್ಯದಲ್ಲಿ ಆಯ್ಕೆ ಮಾಡಿಕೊಂಡ ಒಟ್ಟೂ ಮತದಾರರಲ್ಲಿ ಆ ಸಮುದಾಯಕ್ಕೆ ಸೇರಿದವರು ಹೆಚ್ಚು ಕಡಿಮೆ ಶೇ.18 ಇರಬೇಕು. ಇದು ಎಲ್ಲಾ ಸಮುದಾಯಗಳಿಗೆ ಅನ್ವಯಿಸುತ್ತದೆ. ಇದು ಕೇವಲ ಜಾತಿ ಸಮುದಾಯಗಳ ಪ್ರಶ್ನೆ ಅಲ್ಲ, ಗಂಡು-ಹೆಣ್ಣು, ವಿವಿಧ ವಯೋಮಾನದವರು, ಎಲ್ಲಾ ಪ್ರದೇಶದವರು – ಹೀಗೆ ಎಲ್ಲರೂ ರಾಜ್ಯದಲ್ಲಿ ಅವರ ಜನಸಂಖ್ಯೆಯಲ್ಲಿ ಯಾವ ಪ್ರಮಾಣದಲ್ಲಿ ಇದ್ದಾರೋ ಅದೇ ಪ್ರಮಾಣದಲ್ಲಿ ನಮ್ಮ ಸಮೀಕ್ಷೆಯಲ್ಲೂ ಸಿಗಬೇಕು. ಆ ರೀತಿ ನಮ್ಮ ಒಟ್ಟು ಪ್ರತಿಕ್ರಿಯಿಸಬೇಕಾದ ಮತದಾರರನ್ನು ಆಯ್ದುಕೊಳ್ಳುವ ವಿಧಾನವನ್ನು ಇಲ್ಲಿ ಅಳವಡಿಸಲಾಗಿದೆ. ಆದರೆ, ನಮ್ಮ ವಾಲಂಟಿಯರ್‌ ಹೋದಾಗ ಸಂಬಂಧಪಟ್ಟವರು ಲಭ್ಯವಿಲ್ಲದೇ ಹೋಗುವುದು ಅಥವಾ ಉತ್ತರಿಸಲು ನಿರಾಕರಿಸುವುದು ಸಮಾಜದಲ್ಲಿನ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಲು ಕಾರಣವಾಗಿರಬಹುದು. ಅದನ್ನು ಹೊರತುಪಡಿಸಿದರೆ ಆಯಾ ಸಮುದಾಯಗಳ ಪ್ರಮಾಣವು ಕರ್ನಾಟಕದಲ್ಲಿ ಅವರವರ ಪ್ರಾತಿನಿಧ್ಯಕ್ಕೆ ತೀರಾ ಹತ್ತಿರವಿದೆ.

  • ನಗರ ಮತ್ತು ಗ್ರಾಮೀಣ ಭಾಗದಿಂದ ಪ್ರತಿಕ್ರಿಯಿಸಿದವರ ಪ್ರಮಾಣ ರಾಜ್ಯದ ಜನಸಂಖ್ಯೆಯಲ್ಲಿ ಅವರ ಪ್ರಮಾಣಕ್ಕೆ ಅನುಗುಣವಾಗಿಯೇ ಇದೆ.
  • ಪ್ರತಿಕ್ರಿಯಿಸಿದವರಲ್ಲಿ ಶೇ.55ರಷ್ಟು ಪುರುಷರು ಮತ್ತು ಶೇ.45ರಷ್ಟು ಮಹಿಳೆಯರು ಇದ್ದಾರೆ.
  • ಕರ್ನಾಟಕದ ಜಾತಿ ಸಮುದಾಯಗಳ ಪ್ರಮಾಣವು ಬಹುತೇಕ ಕರ್ನಾಟಕದ ಅವರವರ ಜನಸಂಖ್ಯೆಗೆ ಸಮೀಪದಲ್ಲೇ ಇದೆ. ಸಮೀಕ್ಷೆಯಲ್ಲಿ ಶೇ. 17ರಷ್ಟು ಪರಿಶಿಷ್ಟ ಜಾತಿ (ಬಲಗೈ, ಎಡಗೈ ಮತ್ತು ಇತರೆಯನ್ನು ಒಳಗೊಂಡು), ಶೇ. 8ರಷ್ಟು ಪರಿಶಿಷ್ಟ ಪಂಗಡ, ಶೇ.11ರಷ್ಟು ಮುಸ್ಲಿಮರು, ಶೇ.17ರಷ್ಟು ಲಿಂಗಾಯಿತರು, ಶೇ.11ರಷ್ಟು ಒಕ್ಕಲಿಗರು, ಶೇ.10ರಷ್ಟು ಕುರುಬ ಸಮುದಾಯಕ್ಕೆ ಸೇರಿದವರಿಂದ ಅಭಿಪ್ರಾಯ ಪಡೆಯಲಾಗಿದೆ.
  • ಸಮೀಕ್ಷೆಯು ಮುಗಿದ ನಂತರ ನಿರ್ದಿಷ್ಟ ಸಂಖ್ಯೆಗಳನ್ನೂ ನೀಡಲಾಗುವುದು.

ಸಮೀಕ್ಷೆಯಲ್ಲಿ ನಾವು ಮಾತನಾಡಿಸಿದ ಮತದಾರರ ಜಾತಿವಾರು ವಿವರ ಹೀಗಿದೆ:

(ಇದರಲ್ಲಿ ಬೆಂಗಳೂರಿನ ಮತದಾರರ ಸಮೀಕ್ಷೆಯು ಸೇರಿಲ್ಲ. ಸಮೀಕ್ಷೆ ಮತ್ತು ಅದರ ವಿಶ್ಲೇಷಣೆ ಇನ್ನೂ ಮುಂದುವರೆಯುತ್ತಿರುವುದರಿಂದ ಅದನ್ನು ಹೊರತುಪಡಿಸಿದ ವಿವರಗಳು ಇಲ್ಲಿವೆ. ಬೆಂಗಳೂರಿನ ಸಮೀಕ್ಷೆಯ ವಿಶ್ಲೇಷಣೆಯ ಜೊತೆಗೆ ಮೂರನೆಯ ದಿನ ನಾವು ರಾಜ್ಯದ ಎಷ್ಟು ಶೇಕಡಾ ಮತದಾರರು ಯಾವ ಪಕ್ಷಗಳಿಗೆ ಒಲವು ತೋರಿಸಿದ್ದಾರೆ ಎಂಬುದನ್ನು ಮುಂದಿಡಲಿದ್ದೇವೆ. ವಿ.ಸೂ: ಏಪ್ರಿಲ್‌ 26ಕ್ಕೆ ಅದೂ ಸಹಾ ಮುಗಿದಿದೆ.)

WhatsApp Image 2023 04 23 at 2.25.41 PM 1 1 1 1

ಈಗ ಒಂದಾದ ಮೇಲೆ ಒಂದರಂತೆ ಸಮೀಕ್ಷೆಯ ವಿವರಗಳು ನಿಮ್ಮ ಮುಂದೆ ಲಭ್ಯವಾಗುತ್ತಾ ಹೋಗುತ್ತದೆ. ಮೊದಲಿಗೆ ಆಡಳಿತ ವಿರೋಧಿ ಅಲೆ ಇದೆಯೇ ಇಲ್ಲವೇ ಎಂಬುದರ ಕುರಿತು ಸಮೀಕ್ಷೆ ಏನು ಹೇಳುತ್ತದೆ ನೋಡಿ.

ಇಲ್ಲಿ ಓದಿ: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ -2: ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ಉಪರಾಷ್ಟ್ರಪತಿ ಚುನಾವಣೆ: ನಿವೃತ್ತ ನ್ಯಾ. ಸುದರ್ಶನ ರೆಡ್ಡಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ

ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳನ್ನು ಒಳಗೊಂಡ ಇಂಡಿಯಾ...

Download Eedina App Android / iOS

X