ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ತಡರಾತ್ರಿ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.
ಮತದಾನ ಮುಗಿದ ಬಳಿಕ ಬುಧವಾರ ರಾತ್ರಿಯೇ ಅವರು ಸಿಂಗಾಪುರಕ್ಕೆ ತೆರಳಿದ್ದರು. ಶನಿವಾರ ಫಲಿತಾಂಶ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಆಗಮಿಸಿ, ತಮ್ಮ ಜೆಪಿ ನಗರ ನಿವಾಸಕ್ಕೆ ತೆರಳಿದ್ದಾರೆ.
ನನ್ನನ್ನು ಯಾರೂ ಸಂಪರ್ಕಿಸಿಲ್ಲ: ಎಚ್ ಡಿ ಕುಮಾರಸ್ವಾಮಿ
ಬೆಳೆಗ್ಗೆ ಮಾಧ್ಯಮ ಪ್ರತಿನಿಧಿಗಳು ಕುಮಾರಸ್ವಾಮಿ ಅವರನ್ನು ಮೈತ್ರಿ ಸರ್ಕರ ಕುರಿತು ವಿಚಾರಿಸಿದಾಗ, “ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ” ಎಂದು ತಿಳಿಸಿದ್ದಾರೆ.
“12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ಮಧ್ಯಾಹ್ನ 2ಗಂಟೆ ವರೆಗೂ ಕಾದು ನೋಡೋಣ. ಕಾಂಗ್ರೆಸ್‌ನವರು ಬಹಳ ಮೂಂದೆ ಹೋಗಿ ಸೂಟು, ಬೂಟು ಹೊಲಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸುವವರು. ಸಣ್ಣ ಪಕ್ಷದ ಅಗತ್ಯ ಏನಿದೆ ಅವರಿಗೆ ಎಂದು ಮಾರ್ಮಿಕವಾಗಿ” ಹೇಳಿದ್ದಾರೆ.