ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್‌ಗೆ ಬಹುಮತ ನೀಡಿ: ಸಿದ್ದರಾಮಯ್ಯ

Date:

Advertisements
  • ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದುದ್ದು ಸುಭದ್ರ ಸರ್ಕಾರವಲ್ಲ
  • ಪ್ರಧಾನಿಗಳೇ ಅಭಿವೃದ್ದಿಯ ವಿಚಾರದ ಮುಕ್ತ ಚರ್ಚೆಗೆ ಬರುವಿರಾ?

ಸುಭದ್ರ ಸರ್ಕಾರ ಇದ್ದರೆ ಜನರ ಆಶೋತ್ತರ ಈಡೇರಿಸಲು ಸಾಧ್ಯ. ಅತಂತ್ರ ವಿಧಾನಸಭೆ ಆದರೆ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಜನಪರ ಆಡಳಿತದ ಜೊತೆ ಭದ್ರ ಸರ್ಕಾರ ರಚಿಸಲು ನಾಡಿನ ಜನ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಮೈಸೂರು ಪತ್ರಕರ್ತರ ಭವನದಲ್ಲಿನ ಸಂವಾದದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಗಾಳಿ ಬೀಸಲು ಶುರುವಾಗಿದೆ. ಜನರು ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ನಾವೂ ಜನರಿಗೆ ಮನದಟ್ಟು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವಂತೆ ಕೇಳಿಕೊಂಡಿದ್ದೇವೆ. ಏಕೆಂದರೆ 2004, 2008, 2018ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಆದ ಅತಂತ್ರಗಳನ್ನು ಜನ ನೋಡಿದ್ದಾರೆ. ಈ ಕಾರಣದಿಂದ ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಗೆಲುವು ಕೊಡಿ ಎಂದರು.

Advertisements

ಭ್ರಷ್ಟಾಚಾರ ತಡೆಯುವ ಬದ್ಧತೆ ಪ್ರಧಾನಿಗಿಲ್ಲ

ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಆಪರೇಷನ್ ಕಮಲ ಸಂಸ್ಕೃತಿ ತಂದಿದ್ದು ಬಿಜೆಪಿ. ಬೇಕಾದವರನ್ನ ಕೊಂಡುಕೊಂಡು ಸರ್ಕಾರ ರಚನೆ ಮಾಡಿ ರಾಜ್ಯದ ಅಭಿವೃದ್ಧಿ ಕಾಣದಂತೆ ಮಾಡಿದರು. ಈಗ ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ.

ಬಿಜೆಪಿಯ ಭ್ರಷ್ಟಾಚಾರ ಅಷ್ಟರ ಮಟ್ಟಿಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರ 40% ಸರ್ಕಾರ ಅಂತಾ ಪ್ರಧಾನಿಗಳಿಗೆ ಪತ್ರ ಹೋಗಿದೆ. ಆದರೆ ಪ್ರಧಾನಿ ಮೋದಿ ನಾ ಖಾವುಂಗಾ ನಾ ಖಾನೇದೂಂಗ ಅಂತಾರೆ. ಅಧಿಕೃತವಾದ ಪತ್ರವಿದ್ದರೂ ಯಾವುದೇ ಕ್ರಮವಾಗ್ಲಿಲ್ಲ. ಭ್ರಷ್ಟಾಚಾರ ತಡೆಯುವ ಬದ್ಧತೆ ಪ್ರಧಾನಿಗಳಿಗಿಲ್ಲ ಎಂದು ಟೀಕಿಸಿದರು.

ಸಿಎಂ ಭ್ರಷ್ಟಾಚಾರದ ಕುರಿತು ಕಿಡಿಕಾರಿದ ಸಿದ್ದರಾಮಯ್ಯ, ಬೊಮ್ಮಾಯಿ ದಾಖಲಾತಿ ಕೊಡಿ ಎಂದು ಕೇಳುತ್ತಾರೆ. ರೂಪ್ಸಾ, ಕಂಟ್ರಾಕ್ಟರ್ ಅಸೋಸಿಯೇಷನ್ ನವರು ಬರೆದಿರುವ ಪತ್ರಗಳು ಇವರಿಗೆ ದಾಖಲೆಗಳಲ್ಲವೇ? ಪಿಎಸ್ಐ ನೇಮಕಾತಿಯಲ್ಲಾದ ಹಗರಣ ದಾಖಲೆಯಾಗಿಲ್ವಾ..? 40% ಕಮಿಷನ್ ನಿಂದಾಗಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟರು. ನಾವು ವಿಧಾನಸೌಧದಲ್ಲಿ ಧರಣಿ ಮಾಡಿದೆವು ಇವೆಲ್ಲವೂ ಎವಿಡೆನ್ಸ್ ಅಲ್ಲವೇ ಎಂದು ಸಿದ್ದರಾಮಯ್ಯ ಕೇಳಿದರು.

ಮುಂದುವರೆದ ಅವರು ಮಾಡಾಳ್ ವಿರೂಪಾಕ್ಷಪ್ಪ ಮಗನನ್ನ ಲಂಚ ತೆಗೆದುಕೊಳ್ಳುವ ವೇಳೆ ಬಂಧಿಸಲಾಯಿತು ಅವರ ಮನೆಯಲ್ಲಿ ಎಂಟು ಕೋಟಿ ಹಣ ಸಿಕ್ಕಿದೆ. ಇದಕ್ಕಿಂತ ಎವಿಡೆನ್ಸ್ ಏನು ಬೇಕು..? ಎಂದ ಮಾಜಿ ಸಿಎಂ ಬಿಜೆಪಿ ಭ್ರಷ್ಟಾಚಾರಕ್ಕೆ ಇನ್ನೆಷ್ಟು ದಾಖಲೆ ಬೇಕು ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್

ಪ್ರಧಾನಿಗಳೇ ಮುಕ್ತ ಚರ್ಚೆಗೆ ಬರುವಿರಾ?

ನಮ್ಮ ಅವಧಿಯಲ್ಲಿ ನಾವು 165 ಭರವಸೆಗಳನ್ನ ನೀಡಿದ್ದವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ನಿಮ್ಮ ಅವಧಿಯಲ್ಲಿ ನೀವೇನು ಮಾಡಿದ್ದೀರಾ? 2018 ರಲ್ಲಿ 600 ಭರವಸೆ ನೀಡಿದ್ದು, ಎಷ್ಟು ಈಡೇರಿಸಿದ್ದೀರಾ? ಎಂದು ಸಿದ್ದರಾಮಯ್ಯ ಕೇಳಿದರು.

ನಮ್ಮ ಪ್ರಣಾಳಿಕೆ ಬಗ್ಗೆ ಟೀಕೆ ಮಾಡಿರುವ ಪ್ರಧಾನಿ ಮೋದಿ ಅವರೇ ನೀವೆಷ್ಟು ಭರವಸೆ ಈಡೇರಿಸಿದ್ದೀರಿ? ಈ ಕುರಿತ ಬಹಿರಂಗ ಚರ್ಚೆಗೆ ಬನ್ನಿ ಎಂದರೂ ಬಿಜೆಪಿಗರು ಬರುತ್ತಿಲ್ಲ. ನೀವಾದರೂ ಚರ್ಚೆಗೆ ಬನ್ನಿ ಎಂದ ಸಿದ್ದರಾಮಯ್ಯ, ಬಿಜೆಪಿ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ, ಜನವಿರೋಧಿ ಆಡಳಿತ, ನಿಷ್ಕ್ರಿಯತೆ, ದ್ವೇಷದ ರಾಜಕಾರಣ ಎಲ್ಲವೂ ಹೆಚ್ಚಾಗಿದೆ. ಎಂದು ಕಿಡಿಕಾರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X