ಚುನಾವಣೆಯ ಹೊತ್ತಲ್ಲೇ ಮಹತ್ವದ ಸಮೀಕ್ಷೆ; ಟಿವಿ ಚಾನೆಲ್‌ಗಳನ್ನು ಕನ್ನಡಿಗರು ತಿರಸ್ಕರಿಸುತ್ತಿದ್ದಾರೆ : ಇಲ್ಲಿದೆ ನೋಡಿ ಅಂಕಿ-ಅಂಶ, ಭಾಗ 1

Date:

Advertisements

ಹಲವರಿಗೆ ಇದು ಆಶ್ಚರ್ಯಕರ ಸಂಗತಿ. ಹಾಗಾಗಿ ಮೇಲಿನ ಶೀರ್ಷಿಕೆಯನ್ನಷ್ಟೇ ನೋಡಿ ಅಭಿಪ್ರಾಯಕ್ಕೆ ಬರುವ ಮೊದಲು ಕೆಲವು ಅಂಕಿ-ಅಂಶಗಳನ್ನು ಗಮನಿಸಿ. ಪ್ರತೀ ವಾರ ಬಿಎಆರ್‌ಸಿ [ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರಿಸರ್ಚ್‌ ಕೌನ್ಸಿಲ್]ನವರು ಅಧಿಕೃತವಾಗಿ ಟಿಆರ್‍‌ಪಿಯ ವಿವರವನ್ನು ಬಿಡುಗಡೆ ಮಾಡುತ್ತಾರೆ. ವರ್ಷದ ಮೊದಲ ವಾರದಿಂದ ಆರಂಭಿಸಿ ಕಡೆಯ 52ನೇಯ ವಾರದವರೆಗಿನ ವಿವರವನ್ನು ಬಿಡುಗಡೆ ಮಾಡುತ್ತಾರೆ. ಅಂದರೆ ಶುಕ್ರವಾರದಿಂದ ಗುರುವಾರದವರೆಗಿನ ವಿವರವನ್ನು ಅದರ ಮುಂದಿನ ವಾರ ಬಿಡುಗಡೆ ಮಾಡುತ್ತಾರೆ.

ಈಗ ವರ್ಷದ 17ನೇ ವಾರದ ವಿವರಗಳು ಇಂದು ಹೊರಬಂದಿವೆ. ಅದನ್ನು ಆಧರಿಸಿ ನಿಮ್ಮ ಮುಂದಿಡಲಾಗುತ್ತಿರುವ ವಾಸ್ತವ ಇದು. ಯಾವ ಚಾನೆಲ್ ಅನ್ನು ಯಾವ ಜನರು (ಪ್ರದೇಶವಾರು) ಎಷ್ಟು ಸಮಯ ನೋಡಿದ್ದಾರೆ ಎಂಬುದನ್ನು ಬಿಎಆರ್‌ ಸಿ ಅತ್ಯಂತ ವಿವರವಾಗಿ ಮುಂದಿಡುತ್ತದೆ. ಈ ಲೇಖನದಲ್ಲಿ ಮತ್ತು ಈ ಸರಣಿಯ ಮುಂದಿನ ಲೇಖನಗಳಲ್ಲಿ ಅದನ್ನು ಇಲ್ಲಿ ಬಿಚ್ಚಿಡುತ್ತೇವೆ.

ಆ ವಿವರ ಹೇಳುತ್ತಿರುವ ಸಂಗತಿ ಏನೆಂದರೆ, ಕರ್ನಾಟಕದ ಜನರು ಟಿವಿ ಚಾನೆಲ್‌ಗಳನ್ನು ಖಚಿತವಾಗಿ ತಿರಸ್ಕರಿಸುತ್ತಿದ್ದಾರೆ. ಟಿವಿ ಚಾನೆಲ್‌ಗಳು, ಅದರಲ್ಲೂ ನ್ಯೂಸ್‌ ಚಾನೆಲ್‌ಗಳನ್ನು ಜನರು ನೋಡುತ್ತಿರುವುದು ಕಡಿಮೆಯಾಗುತ್ತಿದೆ ಎನ್ನುವುದು ಜಾಗತಿಕ ವಿದ್ಯಮಾನ. ಆದರೆ, ಕರ್ನಾಟಕದಲ್ಲಿ ಚುನಾವಣೆಯ ಬಿಸಿ ಒಂದೇ ಸಮನೆ ಏರುತ್ತಿರುವಾಗ ಟಿಆರ್‌ ಪಿ ಮತ್ತು ಜಿ ಆರ್‌ ಪಿ ಇಳಿದಿರುವುದು ಆಶ್ಚರ್ಯಕರ, ಆದರೆ ನಿಜ.

Advertisements

ಅಂಕಿ-ಅಂಶಗಳನ್ನು ಹಿಂದಿನ ಅವಧಿಗೆ ಹೋಲಿಸಿ ನೋಡಬೇಕು. ಹೋಲಿಕೆಗೆ ಗೊತ್ತಾಗಲಿ ಎಂದು ಜನವರಿ ಕಡೆಯ ವಾರದ್ದನ್ನು (ನಾಲ್ಕನೇ ವಾರ) ಏಪ್ರಿಲ್‌ ಕಡೆಯ ವಾರದ ಜೊತೆಗೆ ಹೋಲಿಸಲಾಗಿದೆ ಮತ್ತುಈ ಕಡೆಯ ವಾರವನ್ನು (17ನೇ ವಾರ) ಅದರ ಹಿಂದಿನ ವಾರ ಅಂದರೆ 16ನೇ ವಾರದ ಜೊತೆಗೆ ಹೋಲಿಸಿ ಇಲ್ಲಿ ಕೊಡಲಾಗಿದೆ.

ಗಮನಿಸಿ, ಇದು ಬಿಜೆಪಿಯ ಅಬ್ಬರದ ಪ್ರಚಾರ ಮತ್ತು ಮೋದಿಯವರ ಪ್ರಚಾರ ಶುರುವಾಗಿ, ಟಿವಿ ಚಾನೆಲ್ಲುಗಳು ಪೂರ್ಣ ಅದರ ಮೇಲೆಯೇ ಕೇಂದ್ರೀಕರಿಸಿದ್ದ ಅವಧಿ. ಹಾಗೆ ನೋಡಿದರೆ ಚುನಾವಣಾ ಸಮಯದಲ್ಲಿ ನ್ಯೂಸ್‌ ಚಾನೆಲ್‌ಗಳ ಟಿಆರ್‌ ಪಿ ಒಂದೂವರೆ ಪಟ್ಟು ಹೆಚ್ಚಾಗಬೇಕು. ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಜನರು ಇಷ್ಟಪಟ್ಟು ನೋಡುವುದಾದರೆ, ಇನ್ನೂ ಹೆಚ್ಚಾಗಬೇಕು. ಆದರೆ ವಾಸ್ತವದಲ್ಲಿ ಕಡಿಮೆಯಾಗಿದೆ. ಎಷ್ಟು ಕಡಿಮೆಯಾಗಿದೆ?

ರಾಜ್ಯದ ಎಲ್ಲ ಟಿವಿಗಳ ಜಿಅರ್‌ಪಿ ಜನವರಿ ಕಡೆಯ ವಾರಕ್ಕೆ ಹೋಲಿಸಿದರೆ ಶೇ.28.55 ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಶೇ.76.15 ಕಡಿಮೆಯಾಗಿದೆ. ಗ್ರಾಮೀಣ ಕರ್ನಾಟಕದಲ್ಲಿ ಶೇ.9ರಷ್ಟು, ಬೆಂಗಳೂರು ಹೊರತುಪಡಿಸಿ ನಗರ ಪ್ರದೇಶದಲ್ಲಿ ಶೇ.52.73ರಷ್ಟು ಕಡಿಮೆಯಾಗಿದೆ.

ಕನ್ನಡ ನ್ಯೂಸ್‌ ಚಾನೆಲ್ಲುಗಳ ಟಿಆರ್‍‌ಪಿ ಕಡಿಮೆಯಾಗುತ್ತಿರುವುದು ಫೀಲ್ಡಿನಲ್ಲಿರುವ ಎಲ್ಲರಿಗೂ ಗೊತ್ತಿರುವ ಹಳೆಯ ಸುದ್ದಿ. ಆದರೆ, ನಿರ್ದಿಷ್ಟವಾಗಿ ಕೆಲವು ರಾಜಕೀಯ ಕಾರ್ಯಕ್ರಮಗಳಿಂದ ಜನರು ದೂರ ಸರಿಯುತ್ತಿದ್ದಾರೆ ಮತ್ತು ಅವು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೇ ಆಗಿವೆ.

ನಮಗೆ ಲಭ್ಯವಾಗಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ ನ್ಯೂಸ್ ಚಾನೆಲ್‌ಗಳ ವೀಕ್ಷಕರ ವರ್ತನೆ ನೋಡಿದರೆ

1. ಮೋದಿ, ಅಮಿತ್ ಶಾ, ಯೋಗಿ ಮುಂತಾದವರ ಕಾರ್ಯಕ್ರಮಗಳನ್ನು ನೋಡಲು ಜನರು ಇಷ್ಟಪಡುತ್ತಿಲ್ಲ.

2. ರಾಜ್ಯದ ಬಿಜೆಪಿ ನಾಯಕರ ಕಾರ್ಯಕ್ರಮಗಳಿಗೂ ಇದು ಅನ್ವಯಿಸುತ್ತದೆ.

3. ಬಹುತೇಕ ಬಿಜೆಪಿಯ ಪರವಾಗಿಯೇ ಕಾರ್ಯಕ್ರಮಗಳನ್ನು ನಡೆಸುವ ನ್ಯೂಸ್ ಚಾನೆಲ್‌ಗಳಿಗೂ ಇದು ಅನ್ವಯಿಸುತ್ತದೆ.

4. ಜನರು ಮೋದಿಯವರ ರ‌್ಯಾಲಿಗಳನ್ನು ನೋಡುತ್ತಿಲ್ಲ. ಅಂದರೆ ಆಡಳಿತ ವಿರೋಧಿ ಅಲೆ ಮತ್ತು ನ್ಯೂಸ್‌ ಚಾನೆಲ್‌ ವಿರೋಧಿ ಅಲೆಗಳೆರಡೂ ಇಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿದಂತಿದೆ.

ಕರ್ನಾಟಕದ ಬಿಜೆಪಿಯವರು ಮೋದಿಯವರ ರ‌್ಯಾಲಿಗಳಿಗೆ ಮಿಕ್ಕೆಲ್ಲಕ್ಕಿಂತ ಅತಿ ಹೆಚ್ಚು ಖರ್ಚು ಮಾಡುತ್ತಿರುವುದು ಎದ್ದು ಕಾಣುತ್ತದೆ. ಒಂದಕ್ಕೆ ನಾಲ್ಕು ಪಟ್ಟು ಹೆಚ್ಚು ಹಣ ನೀಡಿ ಜನರನ್ನು ಸೇರಿಸಲು ಯತ್ನಿಸುತ್ತಿರುವುದು ಈಗಾಗಲೇ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಭೆಗೆ ಬರುವವರಿಗೆ ಒಂದು ಸಾವಿರ ರೂಪಾಯಿ (ಮಿಕ್ಕ ಪಕ್ಷಗಳು ಐನೂರು ರೂಪಾಯಿ ಕೊಡುತ್ತಾರೆ) ಕೊಡುತ್ತೇವೆಂದು ಹೇಳಿ ಕರೆತಂದು ಅಷ್ಟು ಕೊಡದೇ ಇದ್ದುದಕ್ಕೆ ದೊಡ್ಡ ಗಲಾಟೆಯಾಗಿರುವುದು ಈಗಾಗಲೇ ವರದಿಯಾಗಿದೆ. ಮೊದಮೊದಲು ಈ ಕಾರ್ಯಕ್ರಮಗಳಿಗೂ ಅಷ್ಟು ಜನ ಸೇರಲಿಲ್ಲ. ಆದರೆ ಈ ಕಡೆಯ ಹಂತದಲ್ಲಿ ಸೇರಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ, ಮೋದಿಯವರ ಭಾಷಣ ಜನರ ಭಾವನೆಗಳೊಂದಿಗೆ ಕನೆಕ್ಟ್‌ ಆಗುತ್ತಿಲ್ಲ; ಸಪ್ಪೆ ಹೊಡೆಯುತ್ತಿದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಗಮನಿಸಿದ್ದಾರೆ.

ಬಿಜೆಪಿಯೊಳಗೂ ಹಲವರಿಗೆ ಅದು ಅರಿವಿಗೆ ಬಂದಿದೆ. ಆದರೆ, ಟಿವಿಯಲ್ಲಿ ಅಬ್ಬರ ಕಾಣುತ್ತದೆ. ಆದರೆ ಜನರು ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಟಿವಿಯಲ್ಲೂ ನೋಡಲು ಬಯಸುತ್ತಿಲ್ಲ. ಇದು ಹೇಗೆ ಗೊತ್ತಾಗುತ್ತದೆ?

ಬಾರ್ಕ್‌ ಬಿಡುಗಡೆ ಮಾಡಿರುವ, ಪ್ರತಿ ಕಾರ್ಯಕ್ರಮ ಪ್ರಸಾರವಾದಾಗಲೂ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ಮಾಹಿತಿಯನ್ನು ನೋಡಿದರೆ ಅದು ಗೊತ್ತಾಗುತ್ತದೆ. ಜನರು ಮೋದಿ, ಯೋಗಿ ಆದಿತ್ಯನಾಥ್‌ ಮತ್ತು ಬೊಮ್ಮಾಯಿಯವರ ಕಾರ್ಯಕ್ರಮ ಬರುವ ಚಾನೆಲ್‌ ಆನ್‌ ಮಾಡಿದರೆ, ಅಷ್ಟೇ ವೇಗವಾಗಿ ಅದರಿಂದ ಹೊರಹೋಗುತ್ತಿದ್ದಾರೆ.

ಎರಡು ಉದಾಹರಣೆಗಳ ಮೂಲಕ ಇದನ್ನು ವಿವರಿಸಬಹುದು. 23-4-2023ರಂದು ಮುಖ್ಯಮಂತ್ರಿಗಳು ಮಾಡಿದ ರೋಡ್ ಶೋ ಅನ್ನು ಸುವರ್ಣ ಟಿವಿ ಪ್ರಸಾರ ಮಾಡಿದೆ. ಅದನ್ನು ಒಟ್ಟಾರೆ ಟಿವಿ ವೀಕ್ಷಕರಲ್ಲಿ ಶೇ.0.1ರಷ್ಟು ಜನ ಕೆಲವೇ ಸೆಕೆಂಡು ನೋಡಿ ಚಾನೆಲ್ ಬದಲಾಯಿಸಿದ್ದಾರೆ.

BAARC 2

27-4-2023ರಂದು ಮೋದಿಯವರು ನಡೆಸಿದ ಕಾರ್ಯಕರ್ತರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಒಟ್ಟಾರೆ ಟಿ ವಿ ವೀಕ್ಷಕರಲ್ಲಿ ಶೇ.0.1ರಷ್ಟು ಜನ ಮಾತ್ರ ನೋಡಿದ್ದಾರೆ. ಅದನ್ನು ಜನರು ಸುವರ್ಣ ಚಾನೆಲ್‌ನಲ್ಲಿ ನೋಡಿದ ಸರಾಸರಿ ಸಮಯ 2 ಸೆಕೆಂಡ್‌ಗಳು ಮಾತ್ರ. ಟಿವಿ9 ಚಾನೆಲ್‌ನಲ್ಲಿ ಶೇ. 0.3ರಷ್ಟು ಜನ ಸರಾಸರಿ 6 ಸೆಕೆಂಡ್ ನೋಡಿದ್ದಾರೆ.

ಸುವರ್ಣ, ಟಿವಿ 9 ಮತ್ತು ಪಬ್ಲಿಕ್ ಟಿವಿಗಳ ಪ್ರೈಮ್ ಟೈಮ್ ಕಾರ್ಯಕ್ರಮಗಳನ್ನು ಶೇ.0.4ರಿಂದ ಶೇ.0.7ರಷ್ಟು ಜನ ಮಾತ್ರ ನೋಡಿದ್ದಾರೆ. ಈ ಕಾರ್ಯಕ್ರಮಗಳ ಗರಿಷ್ಠ ವೀಕ್ಷಣೆಯ ಅವಧಿ 9 ನಿಮಿಷ ಮಾತ್ರ. ಈ ಚಾನೆಲ್‌ಗಳ ಅನೇಕ ಕಾರ್ಯಕ್ರಮಗಳನ್ನು ಜನ ಕೆಲವೇ ಸೆಕೆಂಡುಗಳಷ್ಟು ನೋಡಿ ಮುಂದಕ್ಕೆ ಹೋಗುತ್ತಿದ್ದಾರೆಂದು ಅಂಕಿ-ಅಂಶಗಳು ಹೇಳುತ್ತಿವೆ.

ಕಾರ್ಯಕ್ರಮವಾರು ವೀಕ್ಷಕರ ಪ್ರತಿಕ್ರಿಯೆಯನ್ನು ನಂತರ ಮುಂದಿಡುತ್ತೇವೆ.

ಇದರೊಂದಿಗೆ, ಬಾರ್ಕ್‌ ಬಿಡುಗಡೆ ಮಾಡಿರುವ ಬೆಂಗಳೂರು, ಕರ್ನಾಟಕ, ಬೆಂಗಳೂರನ್ನು ಹೊರತುಪಡಿಸಿದ ದೊಡ್ಡ ನಗರ, ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಅಂಕಿ-ಅಂಶಗಳು ಇಲ್ಲಿವೆ. ಮುಂದಿನ ಲೇಖನದಲ್ಲಿ ಇನ್ನಷ್ಟು ಕಾರ್ಯಕ್ರಮವಾರು ವಿವರಗಳನ್ನು ನೀಡಲಾಗುವುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. Your programs are very good. Some news channel are favouring BJP.really this is very bad. Journalist should be like judges. They should ask their antaraatma. I decided i will not watch any sold media upto 10th evening. Post poll survey will not affect. Then they should give unbiased report otherwise they will loose their reputation. Please see how R tv is working, can we call such media as real journalist.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X