ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ | ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಬಲಕ್ಕೆ ಹೆಚ್ಚು ಮಣೆ

Date:

Advertisements

ಮಹಾಲಕ್ಷ್ಮಿ ಲೇಔಟ್, ಶ್ರಮಿಕ ಹಾಗೂ ಮಧ್ಯಮ ವರ್ಗದವರೇ ಹೆಚ್ಚಿರುವ ಬೆಂಗಳೂರಿನ ವಿಧಾನಸಭಾ ಕ್ಷೇತ್ರ. ಮಾಗಡಿ, ತುಮಕೂರು, ಕುಣಿಗಲ್‌, ನೆಲಮಂಗಲ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಜೀವನೋಪಾಯಕ್ಕೆ ವಲಸೆ ಬಂದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ.

2008ರ ಕ್ಷೇತ್ರ ಪುನರ್ ವಿಂಗಡಣೆಯ ವೇಳೆ ರಾಜಾಜಿನಗರ, ಯಲಹಂಕ, ಉತ್ತರಹಳ್ಳಿ ಕ್ಷೇತ್ರಗಳ ಕೆಲವು ಪ್ರದೇಶಗಳನ್ನು ಸೇರಿಸಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ರಚಿಸಲಾಯಿತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಂದಿನಿ ಲೇಔಟ್, ಮಾರಪ್ಪನಪಾಳ್ಯ, ನಾಗಪುರ, ಮಹಾಲಕ್ಷ್ಮೀಪುರಂ, ಶಕ್ತಿ ಗಣಪತಿ ನಗರ, ಶಂಕರಮಠ, ವೃಷಭಾವತಿ ನಗರ ವಾರ್ಡ್‌ಗಳು ಸೇರುತ್ತವೆ.

ಮಹಾಲಕ್ಷ್ಮಿ ಲೇಔಟ್ ರಚನೆಯಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ನೆ ಲ ನರೇಂದ್ರ ಬಾಬು ಸ್ಪರ್ಧಿಸಿ ಬಿಜೆಪಿಯ ಆರ್ ವಿ ಹರೀಶ್ ಅವರನ್ನು 3225 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ ಗೋಪಾಲಯ್ಯ ಮೂರನೇ ಸ್ಥಾನ ಗಳಿಸಿದ್ದರು. 80ರ ದಶಕದಲ್ಲಿ ಜನತಾ ಪರಿವಾರದ ನಾಯಕರೊಂದಿಗೆ ಹೆಚ್ಚು ಆಪ್ತವಾಗಿದ್ದ ಗೋಪಾಲಯ್ಯ, ನಂತರದ ದಿನಗಳಲ್ಲಿ ನಗರಸಭಾ ಸದಸ್ಯರಾಗಿ ಹಂತಹಂತವಾಗಿ ಮೇಲೆ ಬಂದು ಸಾರ್ವಜನಿಕರೊಂದಿಗೆ ಹತ್ತಿರವಾಗುತ್ತಾ ಬಂದರು.

Advertisements

ಜನರಿಗೆ ಪ್ರಭಾವಿಸಿದ ಕಾರಣ 2013ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಜನಪ್ರತಿನಿಧಿಯಾದ ನಂತರ ಕ್ಷೇತ್ರದಲ್ಲಿ ಮತ್ತಷ್ಟು ಪ್ರಭಾವಿಯಾದರು. ಈ ಕಾರಣಕ್ಕಾಗಿಯೇ 2018ರ ಚುನಾವಣೆಯಲ್ಲಿಯೂ ಮತ್ತೆ ತೆನೆ ಪಕ್ಷದಿಂದ ಪುನರಾಯ್ಕೆಯಾದರು. ಎರಡೂ ಬಾರಿಯೂ ಗೋಪಾಲಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದು ನರೇಂದ್ರಬಾಬು.

ಈ ಸುದ್ದಿ ಓದಿದ್ದೀರಾ? ದಾಸರಹಳ್ಳಿ ಕ್ಷೇತ್ರ | ಜೆಡಿಎಸ್‌, ಬಿಜೆಪಿಯ ಗಟ್ಟಿನೆಲೆಯಲ್ಲಿ ಕಾಂಗ್ರೆಸಿಗೆ ಭರವಸೆ!      

2019ರಲ್ಲಿ ಆಪರೇಷನ್‌ ಕಮಲದ ಪ್ರಯುಕ್ತ ಬಿಜೆಪಿಗೆ ಜಿಗಿದು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಮೂರನೇ ಬಾರಿ ಆಯ್ಕೆಯಾದರು. ಅಂದಿನ ಚುನಾವಣೆಯಲ್ಲಿ ಗೋಪಾಲಯ್ಯನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಅಂತಹ ಪ್ರಬಲ ಅಭ್ಯರ್ಥಿಗಳೇ ಇರಲಿಲ್ಲ. ಕಮಲ ಸರ್ಕಾರ ರಚನೆಗೆ ಕಾರಣರಾಗಿದ್ದಕ್ಕಾಗಿ ಸಚಿವ ಭಾಗ್ಯವು ದೊರೆಯಿತು.

2023ರ ಚುನಾವಣೆಯಲ್ಲಿ ಬಿಜೆಪಿ ಗೋಪಾಲಯ್ಯನವರಿಗೆ ಮತ್ತೆ ಟಿಕೆಟ್ ನೀಡಿದೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಅಂತಹ ದೊಡ್ಡ ಮಟ್ಟದಲ್ಲಿ ಮೂಲಸೌಲಭ್ಯಗಳ ಪರಿಹಾರ ದೊರಕಿಸದಿದ್ದರೂ ತುರ್ತಾಗಿ ಸಣ್ಣಪುಟ್ಟ ಅನುಕೂಲವಾಗುವುದರಿಂದ ತಮ್ಮ ನಾಯಕ ಯಾವ ಪಕ್ಷದಲ್ಲಿದ್ದರೂ ಕೆಲಸ ಮಾಡುತ್ತಾರೆ ಎಂಬ ಭಾವನೆ ಮತದಾರರಲ್ಲಿದೆ. ಅಲ್ಲದೆ ಮೂರು ಚುನಾವಣೆಗಳಲ್ಲೂ ಪಕ್ಷದ ಬಲಕ್ಕಿಂತ ವೈಯಕ್ತಿಕ ವರ್ಚಸ್ಸೇ ಹೆಚ್ಚು ಕೆಲಸ ಮಾಡುತ್ತಿದೆ.  

ಮಹಾಲಕ್ಷ್ಮಿಪುರ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ಕೇಶವಮೂರ್ತಿ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಆಡಳಿತ ವಿರೋಧಿ ಅಲೆ ಗೋಪಾಲಯ್ಯ ವಿರುದ್ಧದ ತಮಗೆ ಮತ ದೊರಕಬಹುದೆಂಬ ಭಾವನೆ ಅವರಲ್ಲಿದೆ. ತಾವು ಕೂಡ ಗೆಲುವಿನ ಆಕಾಂಕ್ಷಿ ಎನ್ನುತ್ತಾರೆ ಕೇಶವಮೂರ್ತಿ. ಜೆಡಿಎಸ್‌ನಿಂದ ಸ್ಥಳೀಯ ನಾಯಕ ಕೆ ಸಿ ರಾಜಣ್ಣ ಸ್ಪರ್ಧಿಸಿದ್ದಾರೆ.

ಇತ್ತ ನಾಲ್ಕನೇ ಬಾರಿ ಗೆಲ್ಲಲೇಬೇಕೆಂದು ಬಿಜೆಪಿ ಅಭ್ಯರ್ಥಿ ಹಠ ತೊಟ್ಟಿದ್ದರೆ, ಈ ಬಾರಿ ಏನೇ ಆದರೂ ಗೋಪಾಲಯ್ಯನ ಜಯದ ಓಟಕ್ಕೆ ಬ್ರೇಕ್‌ ಹಾಕುವುದಾಗಿ ಜೆಡಿಎಸ್‌ನ ಕೆ ಸಿ ರಾಜಣ್ಣ ಹೇಳುತ್ತಿದ್ದಾರೆ. ಎಎಪಿಯ ರಾಜ್ಯ ನಾಯಕಿ ಶಾಂತಲಾ ದಾಮ್ಲೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿರುವುದು ಚುನಾವಣೆಯಲ್ಲಿ ಒಂದಿಷ್ಟು ಸ್ಪರ್ಧೆ ಕಾಣಬಹುದು. ಅಲ್ಲದೆ ಎರಡೂ ಬಾರಿ ಇವರ ವಿರುದ್ಧ ಸೋತಿದ್ದ ನೆ ಲ ನರೇಂದ್ರಬಾಬು, ಗೋಪಾಲಯ್ಯನ ಪರವೇ ಪ್ರಚಾರ ಮಾಡುತ್ತಿದ್ದಾರೆ.

ಜಾತಿವಾರು ಲೆಕ್ಕಾಚಾರ

ಮಹಾಲಕ್ಷ್ಮಿ ಕ್ಷೇತ್ರದಲ್ಲಿ 2,87,300 ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗ  74,000, ಎಸ್‌ಸಿ- ಎಸ್‌ಟಿ – 51,000, ಬ್ರಾಹ್ಮಣ – 34,000, ಲಿಂಗಾಯತ – 29,000, ದೇವಾಂಗ – 21,000, ಮುಸ್ಲಿಂ – 18,000, ತಮಿಳು – 17,000, ತಿಗಳ – 8,200, ಕುರುಬ – 8,000, ಹಾಗೂ ಇತರೇ ಸಮುದಾಯದ ಮತ 11,000 ಇದೆ.

ಕ್ಷೇತ್ರದ ಸಮಸ್ಯೆಗಳು

ಕ್ಷೇತ್ರವು ವಿಶಾಲವಾದಷ್ಟು ಸಮಸ್ಯೆಗಳು ಕೂಡ ಭರ್ತಿಯಾಗಿವೆ. ಅಭಿವೃದ್ಧಿ ಹೊಂದದ ಹಲವು ಪ್ರದೇಶಗಳು, ಕೊಳಗೇರಿಗಳು ಸಾಕಷ್ಟಿವೆ. ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಪ್ರದೇಶಗಳ ಮಿಶ್ರಣದಂತಿರುವ ಕ್ಷೇತ್ರದಲ್ಲಿ ಚುನಾವಣಾ ಕಾವು ಏರತೊಡಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X