ರೌಡಿಶೀಟರ್‌ ಮಣಿಕಂಠ ಪರ ಮೋದಿ ಪ್ರಚಾರ; ಮೋದಿ-ಅಮಿತ್ ಶಾಗೆ ಹಳೆ ಗುಜರಾತ್ ನೆನಪಾಗಿರಬೇಕು ಎಂದ ಜೆಡಿಎಸ್‌

Date:

Advertisements
  • ರೌಡಿಶೀಟರ್‌ ಮಣಿಕಂಠ ವಿರುದ್ಧ 40 ಪ್ರಕರಣಗಳು
  • ಮೇ 6ರಂದು ರಾವೂರಿನಲ್ಲಿ ಪ್ರಧಾನಿ ಸಮಾವೇಶ

ದೇಶದ ಪ್ರಧಾನಿ ಹುದ್ದೆಗೆ ಇರಬೇಕಿದ್ದ ಎಲ್ಲ ಘನತೆಯನ್ನು ಬೀದಿಗೆ ತಂದ ಕುಖ್ಯಾತಿ ಚುನಾವಣಾ ಜೀವಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಜೆಡಿಎಸ್ ಕಿಡಿಕಾರಿದೆ.

ಗಡಿಪಾರಾಗಿದ್ದ ರೌಡಿಶೀಟರ್‌, ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಪರವಾಗಿ ಪ್ರಧಾನಿ ಮೋದಿ ಮೇ 6ರಂದು ರಾವೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಈ ಕುರಿತು ಟೀಕಿಸಿ, ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಮೋದಿ ವಿರುದ್ಧ ಹರಿಹಾಯ್ದಿದೆ.

“ದೇಶದ ಪ್ರಧಾನಿ ಹುದ್ದೆಗೆ ಇರಬೇಕಿದ್ದ ಎಲ್ಲ ಘನತೆಯನ್ನು ಬೀದಿಗೆ ತಂದ ಕುಖ್ಯಾತಿ ಚುನಾವಣಾ ಜೀವಿ ನರೇಂದ್ರ ಮೋದಿಗೆ ಸಲ್ಲಬೇಕು. ಬಡವರ ಅನ್ನವನ್ನು ಕದ್ದ, 40 ಪ್ರಕರಣಗಳಿರುವ ರೌಡಿಯ ಪರ ಪ್ರಚಾರ ಪ್ರಧಾನಿ ಮಾಡುವುದೆಂದರೆ ರಾಜ್ಯ ರಾಜಕೀಯದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

Advertisements

“ಜೈಲಲ್ಲಿ ಇರಬೇಕಿದ್ದ ಆರೋಪಿಯನ್ನು ವಿಧಾನಸೌಧಕ್ಕೆ ಕಳುಹಿಸಲು ರಾಜ್ಯ ಬಿಜೆಪಿ ಟಿಕೆಟ್ ನೀಡಿದ್ದೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ. ಬಿಜೆಪಿಯಲ್ಲಿ ಇರುವ ಎಲ್ಲ ನಾಯಕರು ಜನ ಕಂಟಕರು, ಇದೀಗ ಅವಕಾಶ ಕೊಟ್ಟ ಹೊಸ ಮುಖಗಳು ‘ನರಭಕ್ಷಕರು’. ಇಲ್ಲಿಗೆ, ‘ಉದಯವಾಯಿತು ಚೆಲುವ ಕನ್ನಡ ನಾಡು!’” ಎಂದು ವ್ಯಂಗ್ಯವಾಡಿದೆ.

“ಬಹುಶಃ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ತಮ್ಮ ಹಳೆಯ ‘ಗುಜರಾತ್’ ದಿನಗಳು ನೆನಪಾಗಿ ಕರ್ನಾಟಕದಲ್ಲೂ ಪ್ರಯೋಗಿಸಲು ಹವಣಿಸುತ್ತಿದ್ದಾರೆ” ಎಂದು ಕಿಡಿಕಾರಿದೆ.

“ರೌಡಿಗಳು ಮತ್ತು ಕ್ರಿಮಿನಲ್‌ಗಳನ್ನು ಕನ್ನಡಿಗರು ಬೆಳೆಸುವುದಿಲ್ಲ ಎಂಬುವುದು ಈ ಚುನಾವಣೆಯಲ್ಲಿ ತಿಳಿಸಿಕೊಡಲಿದ್ದಾರೆ. ಏನು ಮಾಡಿದರೂ ನಡೆಯುತ್ತದೆ ಎಂಬ ನಿಮ್ಮ ಅಹಂಕಾರವನ್ನು ಇಳಿಸಲಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.

ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ರೌಡಿಶೀಟರ್ ಮಣಿಕಂಠ ಪರ ಪ್ರಧಾನಿ ಮೋದಿ ಪ್ರಚಾರ

ಪ್ರಧಾನಿ ಮೋದಿ ಪ್ರಚಾರಕ್ಕೆ ಬರುತ್ತಿರುವ ಬಿಜೆಪಿ ಅಭ್ಯರ್ಥಿಯ ಮೇಲೆ ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ ಮತ್ತು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X