ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಾವು ಬೆಂಗಳೂರಿಗೆ ನೀಡಿರುವ ಕೊಡುಗೆ ಬಗ್ಗೆ ಹೇಳಿಕೊಂಡಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಮಾತನಾಡಿರುವ ದೇವೇಗೌಡ ಅವರು, “ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟಿದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ” ಎಂದು ಹೇಳಿದ್ದಾರೆ.
“ಏಳು ಗ್ರಾಮ ಪಂಚಾಯತಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ಸರಿಯಾದ ರಸ್ತೆ ಇರಲಿಲ್ಲ. ಬಿಬಿಎಂಪಿಗೆ ಮೂಲಭೂತ ಸೌಕರ್ಯ ಒದಗಿಸಿದ್ದೆ” ಎಂದು ಹೇಳಿದ್ದಾರೆ.
ಇಳಿ ವಯಸ್ಸಿನಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ದೇವೇಗೌಡ ಅವರು, “ನಾನು ಮೇ 8ನೇ ತಾರೀಕಿನವರೆಗೆ ಪ್ರಚಾರ ಮಾಡುತ್ತೇನೆ. ವಾರದಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಗದೀಶ್ ಶೆಟ್ಟರ್ ಗೆಲ್ಲುವುದು ಶತಸಿದ್ಧ : ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ಸುಮಲತಾ ಅಂಬರೀಶ್ ಅವರ ಟೀಕೆಗಳ ಕುರಿತು ಮಾತನಾಡಿ, “ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಮಾತನಾಡಲಿ ಬಿಡಿ” ಎಂದು ಹೇಳಿದ್ದಾರೆ.