- ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಿಯಾಂಕಾ ಗಾಂಧಿ ರೋಡ್ ಶೋ
- ಮೈಸೂರು ಭಾಗದಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರಚಾರ ಪೈಪೋಟಿ
ಹಳೆ ಮೈಸೂರು ಭಾಗದ ರಾಜಕೀಯ ಅಖಾಡ ರಂಗೇರಿದ್ದು,ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಲ್ಲಿ ಪ್ರಚಾರ ನಡೆಸಲಿದ್ದಾರೆ.
ಇದರೊಂದಿಗೆ ಮೈಸೂರು ಪ್ರಾಂತ್ಯ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ- ಕಾಂಗ್ರೆಸ್ ನಡುವಿನ ಪ್ರಚಾರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದೆ.
ಏಪ್ರಿಲ್ 24ರಂದು ಬಿಜೆಪಿ ವರಿಷ್ಠ ಅಮಿತ್ ಶಾ ಈ ಭಾಗದಲ್ಲಿ ಪ್ರಚಾರ ನಡೆಸಿ ತೆರಳಿದರೆ, ಏಪ್ರಿಲ್ 25ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ರಾಜಕೀಯ ಲೋಕದ ಸ್ಟಾರ್ ನಾಯಕರುಗಳ ಪ್ರಚಾರಕ್ಕೆ ಸಾಕ್ಷಿಯಾಗಿರುವ ಈ ಭಾಗದಲ್ಲಿ ಕಾರ್ಯಕರ್ತರ ಹುಮ್ಮಸ್ಸು ಮುಗಿಲು ಮುಟ್ಟಿದೆ. ಏಪ್ರಿಲ್ 25ರಂದು ರಾಜ್ಯಕ್ಕೆ ಬರಲಿರುವ ಪ್ರಿಯಾಂಕಾ ಗಾಂಧಿ, ಅಂದು ಭಾಗವಹಿಸುವ ಕಾರ್ಯಕ್ರಮ ಪಟ್ಟಿ ಹೀಗಿದೆ.
25 ಏಪ್ರಿಲ್ 2023
• ಮಧ್ಯಾಹ್ನ 12:00 – ಟಿ ನರಸೀಪುರ – ಯಾಳವಾರ ಹುಂಡಿಯಲ್ಲಿ ಸಾರ್ವಜನಿಕ ಸಭೆ
• 3.00 PM- ಹನೂರಿನಲ್ಲಿ ಮಹಿಳಾ ಸಂವಾದ – ಗೌರಿಶಂಕರ್ ಕನ್ವೆನ್ಷನ್ ಹಾಲ್ ಹತ್ತಿರ, ಹನೂರು ಟೌನ್
• 5:30 PM – ಕೃಷ್ಣರಾಜನಗರದಲ್ಲಿ ರೋಡ್ ಶೋ – ಅಂಬೇಡ್ಕರ್ ಪ್ರತಿಮೆಯ ವೃತ್ತದ ಮೂಲಕ ಪುರಸಭೆ ಕಚೇರಿ ತೋಪಮ್ಮ ದೇವಸ್ಥಾನ.
ಮಂಗಳವಾರ ಮಧ್ಯಾಹ್ನ 12ಕ್ಕೆ ಟಿ ನರಸೀಪುರ – ಯಾಳವಾರ ಹುಂಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹಾಗೆಯೇ ಮಧ್ಯಾಹ್ನ 3 ಗಂಟೆಗೆ ಹನೂರು ಟೌನ್‌ನ ಗೌರಿಶಂಕರ್ ಕನ್ವೆನ್ಷನ್ ಹಾಲ್ ಹತ್ತಿರ ಪ್ರಿಯಾಂಕಾ ಗಾಂಧಿ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಸಂಜೆ 5ಕ್ಕೆ ಕೆ ಆರ್ ನಗರಕ್ಕೆ ಬರಲಿರುವ ಅವರು ಅಲ್ಲಿನ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಿಗಾಗಿನ ಅಗತ್ಯ ಸಿದ್ಧತೆಯನ್ನು ರಾಜ್ಯ ಕಾಂಗ್ರೆಸ್ ಮಾಡಿಕೊಂಡು ನಾಯಕಿಯ ಸ್ವಾಗತಕ್ಕಾಗಿ ಕಾದು ನಿಂತಿದೆ. ಪ್ರಿಯಾಂಕಾ ಪ್ರಚಾರದ ವೇಳೆ ಕಾಂಗ್ರೆಸ್ ರಾಜ್ಯ ಪ್ರಮುಖರು ಅವರೊಂದಿಗಿರಲಿದ್ದಾರೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣವನ್ನು ಹುಟ್ಟುಹಾಕಿದೆ.