ರೋಣ ಕ್ಷೇತ್ರ | ನೂರೆಂಟು ಸಮಸ್ಯೆಗಳು – ಫಲಿಸದ ಯೋಜನೆಗಳು; ಬದಲಾವಣೆಯತ್ತ ಮತದಾರ

Date:

Advertisements

ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದ ಯೋಜನೆಗಳು, ಡಾಂಬರ್ ಕಾಣದ ಹಳ್ಳಿ ರಸ್ತೆಗಳು, ಸ್ಥಳೀಯವಾಗಿ ಮಹಿಳೆಯರ ಸಮಸ್ಯೆಗಳು, ದುಡಿಯುವ ವರ್ಗದ ಸಮಸ್ಯೆ, ನೀರುದ್ಯೋಗದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳ ಕುರಿತು ರೋಣ ಕ್ರೇತ್ರದ ಜನರು ಮತಯಾಚನೆಗೆ ಬರುತ್ತಿರುವ ಅಭ್ಯರ್ಥಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮೂಲ ಭೂತ ಸಮಸ್ಯೆಗಳನ್ನು ಈಡೇರಿಸಿ, ಕ್ಷೇತ್ರದ ಅಭಿವೃದ್ಧಿಯಾಗಬೇಕೆಂಬ ಜನರ ಬೇಡಿಕೆಯಾಗಿವೆ.

ಜಾರಿಯಾಗದ ಯೋಜನೆಗಳು

ರೋಣ ಕ್ಷೇತ್ರಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಆದರೂ, ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ನೆನೆಗುದಿಗೆ ಬಿದ್ದಿವೆ.

Advertisements
  • 1980ರ ಮಹದಾಯಿ ತಿರುವು ಯೋಜನೆ ಜಾರಿಗೆಯಾಗಿಲ್ಲ. ಹೀಗಾಗಿ, 1.19 ಲಕ್ಷ ಎಕರೆ ಭೂಮಿಗೆ ನೀರಾವರಿ ಕಾಣದೆ ಇಲ್ಲಿಯ ರೈತರಿಗೆ ಅನ್ಯಾಯವಾಗಿದೆ.
  • ಕೃಷ್ಣ ಏತ ನೀರಾವರಿ ಯೋಜನೆ – ಗಜೇಂದ್ರಗಡ ತಾಲೂಕಿನ ಸುತ್ತಮುತ್ತ ಇರುವ ಹದಿನಾರು ಹಳ್ಳಿಗಳಿಗೆ ನೀರುಣಿಸಬೇಕಿದ್ದ ಯೋಜನೆ, ಕಡತಗಳಲ್ಲೆ ಉಳಿದಿದೆ.
  • ಸಿಂಗಟಾಲೂರು ಏತ ನೀರಾವರಿ ಯೋಜನೆ – ಮುಂಡರಗಿ ತಾಲೂಕಿನ ಕೆಲವು ಹಳ್ಳಿಗಳು ರೋಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಯೋಜನೆ ಜಾರಿಯಾದಗೆ ಈ ಹಳ್ಳಿಗಳಿಗೆ ನೀರು ಸಿಗದಂತಾಗಿದೆ.
  • ಕಾರವಾರ-ಇಲಕಲ್ಲ ಹೆದ್ದಾರಿ ಅಗಲೀಕರಣ ಯೋಜನೆಯೂ ಜಾರಿಗೆ ಬಂದಿಲ್ಲ.

ತಾಲೂಕು ಘೋಷನೆಯಾಗಿ ಹತ್ತು ವರ್ಷಗಳಾದರು ಮೂಲಭೂತ ಸೌಲಭ್ಯ ಕಾಣದ ಗಜೇಂದ್ರಗಡ

ಗಜೇಂದ್ರಗಡ ತಾಲೂಕು ಘೋಷಣೆ ಆಗಿ ಹತ್ತು ವರ್ಷಗಳಾದರು ಕೂಡ ಮೂಲಭೂತ ಸೌಲಭ್ಯಗಳು ಕಂಡಿಲ್ಲ. ಎಲ್ಲವು ರೋಣ ತಾಲೂಕು ಕೇಂದ್ರದಲ್ಲಿಯೇ ಇವೆ. ಪ್ರತಿಯೊಂದು ಕೆಲಸಕ್ಕೂ ಗಜೇಂದ್ರಗಡ ತಾಲೂಕಿನ ಜನರು ರೋಣಕ್ಕೆ ಅಡ್ಡಾಡುವ ಪರಿಸ್ಥಿತಿ ಉಂಟಾಗಿದೆ. ಇವತ್ತೊ ನಾಳೆಯೋ ಕುಸಿದು ಬೀಳುವಂತಿರುವ ಬಾಡಿಗೆ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ತಾಲುಕು ಪಂಚಾಯತಿ, ಖಾಜಾನೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ – ಇವ್ಯಾವ ಕಛೇರಿಗಳು ಗಜೇಂದ್ರಗಡ ತಾಲೂಕು ಕೇಂದ್ರಕ್ಕೆ ಬಂದಿಲ್ಲ.

ತಹಶಿಲ್ದಾರರ ಕಛೇರಿ ಮತ್ತು ತಾಲೂಕು ಸಮುಚ್ಚಯ ಅಭಿವೃದ್ಧಿ ಪಡಿಸಲು ಬಂದ ಹತ್ತು ಕೋಟಿ ರೂಪಾಯಿಗಳನ್ನು ಸರ್ಕಾರ ಕೋವಿಡ್ ನೆಪದಲ್ಲಿ ವಾಪಸ್ಸು ಪಡೆದಿದೆ. ಇದರಿಂದಾಗಿ, ಗಜೇಂದ್ರಗಡ ತಾಲೂಕಿಗೆ ಅನ್ಯಾಯವಾಗಿದೆ.

ರೋಣ ಕ್ಷೇತ್ರದ ಸಮಸ್ಯೆಗಳು

  • ರೋಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗಜೇಂದ್ರಗಡ ಹಾಗೂ ರೋಣ ತಾಲೂಕಿನ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಉತ್ತಮ ರಸ್ತೆಗಳು ಕಾಣೆಯಾಗಿವೆ. ಲಕ್ಷಾಂತರ ರೂಪಾಯಿಗಳಲ್ಲಿ ನಿರ್ಮಿಸಲಾದ ಅನೇಕ ಸಾರ್ವಜನಿಕ ಶೌಚಾಲಯಗಳೂ ನೀರಿಲ್ಲದೆ, ಬಳಕೆಗೆ ಸಿಗದಂತಾಗಿವೆ.
  • ಕ್ಷೇತ್ರದ ಜನರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಉದ್ಯೋಗ ದೊರೆಯುತ್ತಿಲ್ಲ.
  • ರೋಣ ಹಾಗೂ ಗಜೇಂದ್ರಗಡ ನಡುವಿನ ಮುಖ್ಯ ರಸ್ತೆ ಹದಗೆಟ್ಟಿದೆ. ಒಳರಸ್ತೆಗಳಿಗೆ ಕಳೆದ ಆರು ತಿಂಗಳಿಂದ ಚುನಾವಣೆ ದೃಷ್ಟಿಯಿಂದ ತೇಪೆ ಹಚ್ಚುವ ಕೆಲಸಗಳಾಗುತ್ತಿವೆ.
  • ರೋಣದಲ್ಲಿದ್ದ ಸರ್ಕಾರಿ ಪದವಿ ಕಾಲೇಜನ್ನು ಗುಳ್ಳೇದಗುಡ್ಡಕ್ಕೆ ಸ್ಥಳಾಂತರಿಸಲಾಗಿದೆ. ಹೀಗಾಗಿ, ರೋಣ ಮತ್ತು ಸುತ್ತುಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ.
  • ಶಾಸಕ, ರೋಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಇರುವ ಗಜೇಂದ್ರಗಡ ಪಟ್ಟಣದಲ್ಲಿಯೇ ಜನತಾ ಕಾಲೋನಿಯ ಜನರು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಡೀ ಕಾಲೋನಿಯ ಎಲ್ಲ ಚರಂಡಿಗಳು ಗಬ್ಬುನಾತ ಬೀರುತ್ತಿವೆ. ಇಲ್ಲಿಯ ಮಹಿಳೆಯರಿಗೆ ಶೌಚಾಲಯಗಳಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಈದಿನ.ಕಾಮ್ ನೊಂದಿಗೆ ಮಾತನಾಡಿದ ವಕೀಲ ಪೀರು ರಾಠೋಡ್, “ಕ್ಷೇತ್ರದಲ್ಲಿ ಮಹದಾಯಿ ತಿರುವು ಯೋಜನೆ, ಕೃಷ್ಣ ಏತ ನೀರಾವರಿ ಯೋಜನೆಗಳು ಜಾರಿಯಾದರೆ ಇಲ್ಲಿಯ ರೈತರು ಆರ್ಥಿಕವಾಗಿ ಬಲಗೊಳ್ಳುತ್ತಾರೆ. ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತಿವೆ. ಇವುಗಳು ಜಾರಿ ಆಗದೇ ಇರುವುದರಿಂದ ನಿರುದ್ಯೋಗ ಹೆಚ್ಚಾಗಿ ನಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಜನರು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಅಸಂಗಟಿತ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ಕಾರ್ಮಿಕರಿಗೆ ಆರ್ಥಿಕ ಭದ್ರತೆಗಾಗಿ ನಾವು ಎಷ್ಟೆ ಹೋರಾಟ ಮಾಡಿದರೂ ಕೂಡ ಈಡೇರಿಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಜಮಖಂಡಿ ಕ್ಷೇತ್ರ | ನ್ಯಾಮಗೌಡರ ನಾಮಬಲವೇ ಮುಂದೆ, ಬಿಜೆಪಿ ಅದರ ಹಿಂದೆ

ಎಂ.ಎಸ್. ಹಡಪದ ಮಾತನಾಡಿ, “ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಈ ವಿಚಾರವಾಗಿ ಈ ಕ್ಷೇತ್ರಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಇದಕ್ಕೆ ನೇರವಾಗಿ ಇಲ್ಲಿಯ ಶಾಸಕರು. ಚುಣಾವಣೆ ಬಂದಿದ್ದರಿಂದ ಕೊನೆಗಳಿಗೆಯಲ್ಲಿ ಸಲಕಿ, ಗುದ್ಲಿ ಭೂಮಿ ಪೂಜೆ ಈಗ ಆರು ತಿಂಗಳಿಂದ ತೋರಿಕೆಗೆ ನಡೆಯುತ್ತಿವೆ” ಎಂದು ಹೇಳಿದರು.

ಶಾಸಕ ಕಳಕಪ್ಪ ಬಂಡಿ ಸ್ಥಳೀಯವಾಗಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಜನರು ಬದಲಾವಣೆ ಬಯಸಿದ್ದು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿದಿಯನ್ನು ಬಯಸುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಬಾಲು ರಾಠೋಡ್ ಈದಿನ.ಕಾಮ್‌ಗೆ ತಿಳಿದಿದ್ದಾರೆ.

ರೋಣ ವಿಧಾನಸಭಾ ಕ್ಷೇತ್ರದ ಚುಣಾವಣೆ ಕಣದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಕಳಕಪ್ಪ ಬಂಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್ ಪಾಟೀಲ್ ನಡುವೆ ನೇರ ಹಣಾಹಣಿ ಇದೆ.

ಈ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿರು ಜನತೆ ತಮ್ಮ ಸಮಸ್ಯೆಗಳಿಗೆ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಈ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಮತ ಹಾಕುತ್ತಾರೆ ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X