ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ನಂಜನಗೂಡಿನ ಗೋಳೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದೇ ನನ್ನ ಕೊನೆಯ ಚುನಾವಣೆ” ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಉತ್ತರಾಧಿಕಾರಿಯನ್ನಾಗಿ ಧವನ್ ರಾಕೇಶ್ ಅವರ ಹೆಸರು ಘೋಷಿಸಿದ್ದಾರೆ.
“2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ. ಮುಂಬರುವ ದಿನಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ರಾಜಕೀಯದಲ್ಲಿ ಮುಂದುವರಿಯುತ್ತಾರೆ. ಬಳಿಕ ಧವನ್ ರಾಕೇಶ್ ಕೂಡ ರಾಜಕೀಯಕ್ಕೆ ಬರಲಿದ್ದಾರೆ” ಎಂದು ತಿಳಿಸಿದ್ದಾರೆ.
“ಅವರ ಹಿರಿಯ ಮಗ ರಾಕೇಶ್‌ನನ್ನು ನೆನಪಿಸಿಕೊಂಡ ಅವರು, ರಾಕೇಶ್ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದ. ಅವನ ಮೇಲಿಟ್ಟ ಪ್ರೀತಿಯನ್ನೇ ಧವನ್‌ಗೂ ಜನತೆ ತೋರುತ್ತಿದ್ದಾರೆ. ಧವನ್ ರಾಕೇಶ್‌ಗೆ ಈಗ 17ವರ್ಷ, ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಬರುತ್ತಾನೆ” ಎಂದರು.