ಚುನಾವಣಾ ಕಣದಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ ಮೊಮ್ಮಗ : ಮೈಸೂರಿನ ಜನ ಹೇಳಿದ್ದೇನು ಗೊತ್ತೇ?

Date:

Advertisements
  • ತಾತನೊಂದಿಗೆ ಚುನಾವಣಾ ಕಣದಲ್ಲಿ ಕಾಣಿಸಿಕೊಂಡ ಮೊಮ್ಮಗ
  • ಮೈಸೂರು ಪ್ರಚಾರ ಕ್ಷೇತ್ರದಲ್ಲಿ ರಾಕೇಶ್ ಪುತ್ರ ಧವನ್ ಉಪಸ್ಥಿತಿ

ಮೂರನೇ ತಲೆಮಾರಿನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬ ಸಿದ್ಧವಾಗುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಈಗ ಸಿದ್ದರಾಮಯ್ಯ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಇದಕ್ಕೆ ಪೂರಕವೆನ್ನುವಂತೆ ಅವರ ಮೊಮ್ಮಗ ದಿವಂಗತ ರಾಕೇಶ್ ಸಿದ್ದರಾಮಯ್ಯ ಪುತ್ರ ಧವನ್ ತಾತ ಸಿದ್ದರಾಮಯ್ಯ ಜೊತೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾನೆ.

ಮೈಸೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ ಜೊತೆ ಧವನ್ ಕೂಡ ಓಡಾಟ ಆರಂಭಿಸಿದ್ದಾನೆ. ಈತನಿಗೆ ಚಿಕ್ಕಪ್ಪ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾರ್ಗದರ್ಶಿ.

Advertisements

ತಾತ ಹಾಗೂ ಚಿಕ್ಕಪ್ಪನ ಜೊತೆ ಚುನಾವಣಾ ಕಣದೊಳಗೆ ತಿರುಗುತ್ತಿರುವ ಧವನ್ ಗೆ ಎಲೆಕ್ಷನ್ ವಿಚಾರದ ಬಗ್ಗೆ ಬಹಳ ಕುತೂಹಲವಂತೆ.

ಚುನಾವಣೆ ಎಂದರೇನು? ಅದು ಹೇಗಿರುತ್ತೆ? ಪ್ರಚಾರ ಶೈಲಿ ಮತ್ತು ಕಾರ್ಯ, ಜನರ ಒಡನಾಟ ಇವುಗಳೆಲ್ಲವನ್ನೂ ಹತ್ತಿರದಿಂದ ನೋಡಿ ತಿಳಿದುಕೊಳ್ಳುವ ಕುತೂಹಲ ಆತನದ್ದು.ಹೀಗಾಗಿ ಬಿರು ಬೇಸಿಗೆಯಲ್ಲೂ ಆತ ಪ್ರಚಾರ ಕಾರ್ಯದ ವೇಳೆ ಮನೆಯ ಹಿರಿಯರೊಂದಿಗೆ ಉಪಸ್ಥಿತನಿದ್ದಾನೆ.

ಧವನ್‌ಗೆ ಅವರ ಅಪ್ಪನಂತೆ ರಾಜಕೀಯದಲ್ಲಿ ಕೊಂಚ ಆಸಕ್ತಿ ಜಾಸ್ತಿ ಹಾಗಾಗಿ ನಮ್ಮ ಜೊತೆ ಬಂದಿದ್ದಾನೆ. ಹುಡುಗ ನೋಡಿ ತಿಳ್ಕೋತೀನಿ ಅಂದ ಅದಕ್ಕೆ ನಾವೂ ಕರ್ಕೊಂಡು ಬಂದಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರೂ ಮೊಮ್ಮಗನ ಉಪಸ್ಥಿತಿ ಬಗ್ಗೆ ಹೆಮ್ಮೆಯಿಂದ ಮಾಧ್ಯಮದವರಿಗೆ ಹೇಳಿಕೊಂಡರು.

ಅಂದ ಹಾಗೆ ಧವನ್ ಈಗ ಪದವಿಪೂರ್ವ ವಿಭಾಗದಲ್ಲಿ ಓದುತ್ತಿರುವ ವಿಧ್ಯಾರ್ಥಿ. ರಜೆ ಕಾಲವಾಗಿರುವುದರಿಂದ ಮನೆಯವರೊಂದಿಗೆ ಚುನಾವಣಾ ಕಾರ್ಯಗಳಲ್ಲಿ ಆತ ಭಾಗಿಯಾಗುತ್ತಿದ್ದಾನೆ.ಮೊಮ್ಮಗ

ಮೈಸೂರು ಜನ ಏನಂತಾರೆ?

ಸಿದ್ದರಾಮಯ್ಯನವರ ಮೊಮ್ಮಗನನ್ನು ಪ್ರಚಾರ ಕಣದಲ್ಲಿ ನೋಡಿರುವ ಸಿದ್ದರಾಮಯ್ಯ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಈದಿನ.ಕಾಮ್‌ನೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಿವಪ್ರಸಾದ್, ನಮ್ಮ ಸಾಹೇಬರ ಮೊಮ್ಮಗನನ್ನ ನೋಡಿದರೆ ನಮ್ಮ ರಾಕೇಶ್ ಅಣ್ಣನನ್ನ ನೋಡಿದಂಗೆ ಆಗತ್ತೆ.

ಅಪ್ಪನ ಥರಾನೇ ಹುಡುಗ ಎಲ್ಲರನ್ನೂ ವಿಶ್ವಾಸದಿಂದಲೇ ಮಾತನಾಡಿಸುತ್ತಾನೆ. ಮುಕ್ತವಾಗಿ ಬೆರೆಯುತ್ತಾನೆ. ಹೀಗೆ ಮುಂದುವರೆದರೆ ಅವರಿಗೂ ರಾಜಕೀಯ ಭವಿಷ್ಯ ಸಿಗೋದ್ರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಮೂರನೇ ತಲೆಮಾರಿಗೆ ತಯಾರಿಯೇ?

ಮೊಮ್ಮಗ ಧವನ್ ತನ್ನಿಚ್ಛೆಯಂತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ ಎನ್ನುವುದು ಸಿದ್ದರಾಮಯ್ಯನವರ ಹೇಳಿಕೆ.

ಆದರೆ ರಾಜಕೀಯದ ಒಳಗಣ್ಣಿನ ಲೆಕ್ಕಾಚಾರದ ಮೂಲಕ ನೋಡುವುದಾದರೆ ಸಿದ್ದರಾಮಯ್ಯ ತಮ್ಮ ಕುಟುಂಬದ ಮೂರನೇ ತಲೆಮಾರಿಗೆ ರಾಜಕೀಯದ ಪಾಠ ಹೇಳಿಕೊಡುತ್ತಿದ್ದಾರೆನ್ನುವುದು ಘೋಷಿತ.

ಸಿದ್ದರಾಮಯ್ಯ ಬಲ್ಲವರ ಪ್ರಕಾರ ತಮ್ಮ ಉತ್ತರಾಧಿಕಾರಿಯನ್ನಾಗಿ ರಾಕೇಶ್ ಅವರನ್ನೇ ಮಾಡಬೇಕೆನ್ನುವುದು ಅವರ ಇಂಗಿತವಾಗಿತ್ತು. ಆದರೆ ಅವರ ಅಕಾಲಿಕ ಮೃತ್ಯುವಿನ ಕಾರಣ, ತಮ್ಮಎರಡನೇ ಮಗ ಯತೀಂದ್ರರನ್ನು ಅನಿವಾರ್ಯವಾಗಿ ಅವರು ರಾಜಕಾರಣಕ್ಕೆ ತರಬೇಕಾಯ್ತು.

ಇದ್ದುದರಲ್ಲಿ ಒಳ್ಳೇ ಹೆಸರನ್ನುಳಿಸಿಕೊಂಡಿರುವ ಯತೀಂದ್ರ ರಾಜಕಾರಣಕ್ಕಿಂತ ನೇರ ಸಮಾಜಸೇವೆ ಹಾಗೂ ಡಾಕ್ಟರ್ ಆಗಿರುವುದನ್ನೇ ಹೆಚ್ಚು ಬಯಸುವ ಕಾರಣ ಸಿದ್ದರಾಮಯ್ಯ, ಅವರಿಗೆ ಹೆಚ್ಚಿನ ರಾಜಕೀಯ ಹೊರೆ ಹೊರಿಸದೆ ಮುಂದಿನ ನಿರ್ಧಾರವನ್ನು ಅವರಿಗೇ ಬಿಟ್ಟಿದರು.

ಈ ಸುದ್ದಿ ಓದಿದ್ದೀರಾ? : ತುಮಕೂರಿನಲ್ಲೂ ಬಿಜೆಪಿಗೆ ಬಂಡಾಯದ ಬಿಸಿ : ಸ್ವತಂತ್ರ ಅಭ್ಯರ್ಥಿಯಾದ…

ಈ ಬಾರಿ ತಮ್ಮದು ಕೊನೆಯ ಚುನಾವಣಾ ರಾಜಕಾರಣ ಎಂದು ಘೋಷಣೆ ಮಾಡಿರುವ ಸಿದ್ದರಾಮಯ್ಯ, ಕುಟುಂಬ ರಾಜಕಾರಣ ಬೇಡ ಎನ್ನುವವರು. ಆದರೆ ರಾಜಕಾರಣ ಪ್ರವೇಶ ಅವರವರ ಇಷ್ಟ ಅದಕ್ಕೆ ಯಾರ ಅಡ್ಡಿಯೂ ಇಲ್ಲ. ವೈಯಕ್ತಿಕವಾಗಿ ನನ್ನ ಕುಟಂಬದವರು ರಾಜಕಾರಣದಲ್ಲಿರುವುದು ನನಗೆ ಇಷ್ಟ ಇಲ್ಲ ಎಂದು ಹೇಳಿಕೊಂಡಿದ್ದರು.

ಆದರೆ ಅವರವರ ಬದುಕನ್ನು ಅವರೇ ರೂಪಿಸಿಕೊಳ್ಳಬೇಕು. ಅವರ ಆಸಕ್ತಿಗಳಿಗೆ ನಾನು ಅಡ್ಡಿಯಾಗಲಾರೆ. ಬೇಕು ಎಂದವರಿಗೆ ರಾಜಕೀಯ ಮಾರ್ಗದರ್ಶನ ಮಾಡುವೆ ಎಂದೂ ಹೇಳಿದ್ದರು. ಸಿದ್ದರಾಮಯ್ಯ ಈ ಹಿಂದೆ ನೀಡಿದ್ದ ಈ ಹೇಳೀಕೆಯೀಗ ಧವನ್ ವಿಚಾರದಲ್ಲಿ ನಿಜವೇನೋ ಎನಿಸುವಂತಿದೆ.

ಹುಡುಗ ಇಷ್ಟಪಟ್ಟಿದ್ದಕ್ಕೆ ಕರೆದುಕೊಂಡು ಬಂದೆ ಎನ್ನುವ ಮೂಲಕ ರಾಜಕೀಯ ಅಖಾಡಕ್ಕೆ ಮೊಮ್ಮಗನ ಮೊದಲ ಎಂಟ್ರಿಯನ್ನು ಮಾಜಿ ಮುಖ್ಯಮಂತ್ರಿಗಳು ಮಾಡಿಸಿದ್ದಾರೆ. ಮುಂದಿನದ್ದನ್ನು ಭವಿಷ್ಯದಲ್ಲಿ ಮೊಮ್ಮಗ ಧವನ್ ನಿರ್ಧರಿಸಿಕೊಳ್ಳಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X