- ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿಯಾದ ಚಿತ್ರ ನಿರ್ಮಾಪಕ
- ಬಿಜೆಪಿಯ ಸತೀಶ್ ರೆಡ್ಡಿ ಎದುರು ಸೆಣಸಲಿರುವ ಉಮಾಪತಿ ಗೌಡ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿತ್ರ ನಿರ್ಮಾಪಕ ಉಮಾಪತಿಗೌಡ ಚುನಾವಣಾ ಕಣಕ್ಕಿಳಿದಿದ್ದಾರೆ.
ಚಂದನವನದಲ್ಲಿ ಹೆಸರು ಮಾಡಿದ ಹೆಬ್ಬುಲಿ, ಮದಗಜ, ರಾಬರ್ಟ್‌ನಂತಹ ಚಿತ್ರಗಳನ್ನು ನಿರ್ಮಾಣ ಮಾಡಿ ಕೋಟಿ ನಿರ್ಮಾಪಕನೆಂಬ ಹೆಸರನ್ನು ಉಮಾಪತಿಗೌಡ ಪಡೆದಿದ್ದರು.
ಚಿತ್ರರಂಗದ ಬಳಿಕ ಈಗ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಬಂದ ಉಮಾಪತಿಯವರನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನಾಗಿಸಿ, ಬೊಮ್ಮನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲು ಅನುವು ಮಾಡಿಕೊಟ್ಟಿದೆ.
ಏಪ್ರಿಲ್ 15ರಂದು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಉಮಾಪತಿ ಗೌಡ ಅವರ ಹೆಸರಿದ್ದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.
ಉಮಾಪತಿ ಗೌಡ ನಿವಾಸದಲ್ಲಿ ನೆರೆದ ಬೆಂಬಲಿಗರು ಹಾಗೂ ಕುಟುಂಬಸ್ಥರು ಅಭ್ಯರ್ಥಿ ಉಮಾಪತಿಗೆ ಸಿಹಿ ತಿನ್ನಿಸಿದರು.
ಈ ಸುದ್ದಿ ಓದಿದ್ದೀರಾ? : ನಟ ಚೇತನ್ ವೀಸಾ ರದ್ದುಗೊಳಿಸಿದ ಕೇಂದ್ರ ಸರ್ಕಾರ
ಈ ವೇಳೆ ಮಾತನಾಡಿದ ಉಮಾಪತಿ ಗೌಡ, ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಪರ್ಸೆಂಟ್ ಗೆಲುವು ದಾಖಲಿಸುತ್ತದೆ ಎಂದರು.
ಉಮಾಪತಿ ಗೌಡ ಕ್ಷೇತ್ರದ ಹಾಲಿ ಶಾಸಕ ಹಾಗೂ ಗೆಲುವಿನ ಹ್ಯಾಟ್ರಿಕ್ ಕಂಡಿರುವ ಬಿಜೆಪಿ ಸತೀಶ್ ರೆಡ್ಡಿ ಎದುರು ಸೆಣಸಲಿದ್ದಾರೆ.
ನಟ ದರ್ಶನ್ ಜೊತೆಗಿನ ಜಗಳವೊಂದರ ಕಾರಣದಿಂದ ಉಮಾಪತಿ ಗೌಡ ಇತ್ತೀಚೆಗೆ ಸುದ್ದಿಗೆ ಗ್ರಾಸವಾಗಿದ್ದರು. ಇವರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಕೂಡ.