ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ. ದಕ್ಷೀನ ಕರ್ನಾಟಕದ ರೈತರ ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದ ರೈತರು ಬೆಂಬಲ ನೀಡಿ, ರಾಜ್ಯದ ರೈತರೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದಾರೆ. ಅಲ್ಲದೆ, ತಮ್ಮ ಹೋರಾಟಗಳಿಗೆ ದಕ್ಷಿಣದ ರೈತರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಧಿಕ್ಕಾರ. ಮೊದಲು ನಮ್ಮ ರಾಜ್ಯದ ರೈತರು ಉಳಿಯಲಿ ನಂತರ ಜನ, ಜಾನುವಾರಗಳಿಗೆ ನೀರು ಸಿಕ್ಕು, ಉಳಿದರೆ ನಂತರ ಬೇರೆಯವರೆಗೆ ನೀರು ಬೀಡುವಂತೆ ರೈತರು ಆಗ್ರಹಿಸಿದರು.
ಈ ವೇಳೆ ಸ್ಥಳದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಕೊಲಾರ ಅಧ್ಯಕ್ಷ ಸೋಮು ಬಿರಾದಾರ, ತಾಳಿಕೊಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಆಲಮೆಲ್ ಅಧ್ಯಕ್ಷ ಈರಣ್ಣ ಕಲ್ಲೂರು, ಬಾಷಾ ಮನಗೂಳಿ, ಹಣಮಂತ ಬ್ಯಾಡಗಿ, ನಜೀರ ನಂದರಗಿ, ಶಾನೂರ ನಂದರಗಿ, ರೇಖಾ ಪಾಟೀಲ, ವಿಜಯಲಕ್ಷ್ಮಿ ಗಾಯಕವಾಡ, ವಿರೇಶ ಗೊಬ್ಬುರ, ಪ್ರತಾಪ ನಾಗರಗೋಜಿ, ಅರುಣಗೌಡ ತೇರದಾಳ, ಮಹಾದೇವಪ್ಪ ತೇಲಿ, ರಾಮನಗೌಡ ಪಾಟೀಲ, ಕಲ್ಲಪ್ಪಣ್ಣ ಪಾರಶೆಟ್ಟಿ, ಶಫೀಕ ದಫೇದಾರ ಸೇರಿದಂತೆ ಅನೇಕ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು .