ನಗರದ ಗಾಂಧಿ ಚೌಕ್‌ನಲ್ಲಿ ಪ್ರಾರಂಭವಾಗಿರುವ ಸರ್ಕಾರಿ ಗ್ರಂಥಾಲಯದಲ್ಲಿ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಸದಸ್ಯರು ಜಿಲ್ಲಾಧಿಕಾರಿಗಳಿಗೆ ಅಕ್ಟೋಬರ್ ಎರಡರಂದು ಮನವಿ ಸಲ್ಲಿಸಿದ್ದಾರೆ.
ಗಾಂಧಿ ಚೌಕ್‌ನಲ್ಲಿರುವ ಸರ್ಕಾರಿ ಗ್ರಂಥಾಲಯ ನಿರ್ಮಾಣವಾಗಿ ಕಾರ್ಯಾರಂಭ ಮಾಡಿದೆ. ಆದರೆ, ಅದನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಕಟ್ಟಡ ಈಗಾಗಲೇ ಸೋರುತ್ತಿದೆ. ಗುತ್ತಿಗೆದಾರರಿಗೆ ನೀಡಿದ ನಿಯಮಗಳ ಪ್ರಕಾರ ಅವರು ಕೇಲವು ತಿಂಗಳ ಹಿಂದೆಯೇ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಿ, ನಗರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿತ್ತು. ಇಲ್ಲಿಯವರೆಗೂ ಆ ಕಾರ್ಯ ಸಾಧ್ಯವಾಗಿಲ್ಲ. ಏಷ್ಟೋ ಸಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿದರೂ ಮತ್ತು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಡಿವಿಪಿ ಕಾರ್ಯಕತ್ರರು ಆರೋಪಿಸಿದ್ದಾರೆ.
ಈ ನಗರಕ್ಕೆ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಸರ್ಕಾರಿ ಗ್ರಂಥಾಲಯ ಮತ್ತು ಪುಸ್ತಕಗಳ ಅವಶ್ಯಕತೆ ಅವರಿಗಿದೆ. ಅವರಿಗೆ ಬೇಕಾದ ಪುಸ್ತಕಗಳನ್ನು ಒದಗಿಸಿ ಕೊಡಿ ಎಂದು ಹಲವು ಬಾರಿ ಕೇಳಿದರೂ, ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಸುತ್ತಿಲ್ಲ. ಈಗಿರುವ ಶಾಸ್ತ್ರಿ ಮಾರ್ಕೆಟ್ ಗ್ರಂಥಾಲಯದಲ್ಲಿ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲ. ಕೆಲವು ಸಾರ್ವಜನಿಕರು ಕುಡಿದು ಅಲ್ಲೇ ಮಲಗಿಕೊಳ್ಳುತ್ತಾರೆ. ಸರಿಯಾದ ಸಮಯಕ್ಕೆ ಸಿಬ್ಬಂದಿ ಕೆಲಸಕ್ಕೆ ಬರುವುದಿಲ್ಲ. ತಾವು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಗ್ರಂಥಾಲಯದ ಕಾಮಗಾರಿಯನ್ನ ಸಂಪೂರ್ಣವಾಗಿಸಿ, ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯವನ್ನು ಒದಗಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್, ಆನಂದ ಮುದುರ್, ಮಾದೇಶ್ ಛಲವಾದಿ, ದರ್ಶನ್ ಸಾಲೋಟಗಿ, ಪ್ರಭು ಹೊಸಮನಿ, ಅಸ್ಲಾಂ, ಮಂಜು, ರವಿ, ಶಕೀಲ್ ಇತರರು ಇದ್ದರು.