ವಿಜಯಪುರ | ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

Date:

Advertisements

ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಜಗತ್ತಿಗೆ ಮಾದರಿಯಾದರೇ, ಇಡೀ ಜಗತ್ತಿನ ಶೋಷಿತ ವರ್ಗದ, ಕಾರ್ಮಿಕರ ಹಾಗೂ ಬಡವರ ವಿಮೋಚನೆಗಾಗಿ ನಡೆದ ಸಮಾಜವಾದಿ (ನವೆಂಬರ್) ಕ್ರಾಂತಿ ನಡೆದ ಮೇಲೆ ಕಾರ್ಮಿಕರ ರಾಜ್ಯ ಸಮಾಜವಾದ ವ್ಯವಸ್ಥೆ ಈಡೀ ಇಡೀ ಜಗತ್ತಿಗೆ ಮಾದರಿಯಾಗಿತ್ತು ಎಂದು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಸಮಾಜವಾದದ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

“ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವಣ್ಣ, ಗಾಂಧಿಜಿ, ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್ ಹಾಗೂ ಸಮಾಜವಾದದ ಪಿತಾಮಹ ಲೆನಿನ್ ಇಂತಹ ಹಲವಾರು ವ್ಯಕ್ತಿಗಳು ಸಮಾಜದ ತುಳಿತಕ್ಕೊಳಗಾದವರ ಪರ ದ್ವನಿ. ಸಮಾಜಮುಖಿಯಾಗಿ ಕೆಲಸ ಮಾಡಿದ್ದರಿಂದ ಅವರ ವ್ಯಕ್ತಿತ್ವ ಇಂದು ಮಾದರಿಯಾಗಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕಾದರೆ ವ್ಯಕ್ತಿ ಸಮಾಜ ಮುಖಿವಾಗಿ ಜೀವನ ಮಾಡಿದಾಗ ಮಾತ್ರ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisements

ಕೀಳರಿಮೆ ಮನೋಭಾವದಿಂದ ಹೊರಗೆ ಬರಬೇಕಾಗಿದೆ. ದೇಶದಲ್ಲಿ ಎಲ್ಲ ಧರ್ಮಿಯರು ಚೆನ್ನಾಗಿರಬೇಕೆಂದರೆ, ಭಾರತೀಯರ ಗ್ರಂಥ ಭಾರತದ ಸಂವಿಧಾನವನ್ನ ರಕ್ಷಿಸಬೇಕಾಗಿದೆ. ಎಲ್ಲ ಧರ್ಮೀಯ ಗ್ರಂಥಗಳು ಕೂಡ ಆ ಧರ್ಮಿಯರು ಹೇಗೆ ಜೀವಿಸಬೇಕೆಂಬುದು ಹೇಳುತ್ತವೆ. ಆದರೆ, ಭಾರತ ಸಂವಿಧಾನ ಮಾತ್ರ ಎಲ್ಲ ಧರ್ಮಿಯರು ಹೇಗೆ ಜೀವಿಸಬೇಕೆಂಬುದಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ತುಕಾರಾಂ ಚಂಚಲಿಕರ, ಹಿರಿಯ ಸಮಾಜ ಚಿಂತಕರಾದ ಅಪ್ಪಾಸಾಹೇಬ ಯರನಾಳ, ಪ್ರಗತಿಪರ ಚಿಂತಕರಾದ ಸಿ.ಎ.ಗಂಟೆಪ್ಪಗೋಳ, ಜಿ.ಜಿ.ಗಾಂಧಿ, ಲಕ್ಷ್ಮಣ್ ಹಂದ್ರಾಳ, ಬಾಳು ಜೇವೂರ, ಹನುಮಂತ ಮಮದಾಪುರ್  ಶ್ರೀ.ಮಿಲಿಂದ್ ಚಂಚಲಕರ, ಎಚ್.ಬಿ. ಚಿಂಚೋಳಿ, ರಾಜು ಮಠ, ಶಂಕರ್ ಆಲ್ಯಾಳ, ರವೀಂದ್ರ ಹಳಿಂಗಳಿ, ಎಸ್.ಎಸ್.ಕಟ್ಟಿ ಇನ್ನಿತರರು ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X