ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ (ಮೇ 10) ನಡೆದ ಮತದಾನಕ್ಕೆ ತೆರೆಬಿದ್ದಿದೆ. ರಾಜ್ಯಾದ್ಯಂತ ಒಟ್ಟು 65.69%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತದಾನವಾಗಿರುವ ಬಗ್ಗೆ ಆಯೋಗವು ಅಂದಾಜು ಅಂಕಿಅಂಶ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ 72.67%ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಉಳಿದ 27.33% ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ.