ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಗಳು ಬಂಧಿಸಿದ್ದಾರೆ. ಸಂತೋಷ್‌ಗೆ ನವೆಂಬರ್ 6ರವರೆಗೆ (14 ದಿನ) ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು 2ನೇ ಎಸಿಜೆಎಂ ಕೋರ್ಟ್‌ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಸಂತೋಷ್ ಅವರನ್ನು 14 ದಿನಗಳ ಬಂಧನಕ್ಕೆ ಒಳಪಡಿಸಿದ್ದಾರೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೋರ್ಟ್‌ಗಳಿಗೆ ರಜೆ ಇದೆ. ಹೀಗಾಗಿ, ಸಂತೋಷ್ ಅವರನ್ನು ಬೆಂಗಳೂರಿನ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಲಾಗಿತ್ತು.
ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ವರ್ತೂರು ಸಂತೋಷ್, ಬಿಗ್‌ಬಾಸ್ ಮನೆಗೆ ತೆರಳುವ ಕಾರ್ಯಕ್ರಮಕ್ಕೆ ಹುಲಿ ಉರುಗು ಇರುವ ಚೈನ್ ಧರಿಸಿ ಬಂದಿದ್ದರು ಎಂದು ಆರೋಪಿಸಲಾಗಿದೆ. ಬಿಗ್‌ಬಾಸ್ ಮನೆಯಿಂದಲೇ ಭಾನುವಾರ ರಾತ್ರಿ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.