ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ, ಕೆಜಿಎಫ್ ಖ್ಯಾತಿಯ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ದಿನೇಶ್ ಅವರು ಕುಂದಾಪುರದಲ್ಲಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಮೂಲದವರಾದ ದಿನೇಶ್ ಮಂಗಳೂರು ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು(ಆಗಸ್ಟ್ 25) ಉಡುಪಿಯ ಕುಂದಾಪುರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ತಮಿಳು ನಟ ಮದನ್ ಬಾಬ್ ನಿಧನ
ವೀರ ಮದಕರಿ, ಮೂಕಜ್ಜಿಯ ಕನಸುಗಳು ಸಿನಿಮಾದಲ್ಲಿ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ದಿನೇಶ್ ಅವರು ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2ರಲ್ಲಿ ನಟಿಸಿದ್ದಾರೆ.
ಹಾಗೆಯೇ ಉಳಿದವರು ಕಂಡಂತೆ, ರಣವಿಕ್ರಮ, ಕಿರಿಕ್ ಪಾರ್ಟಿ, 777 ಚಾರ್ಲಿ, ಆ ದಿನಗಳು, ರಿಕ್ಕಿ, ಕಿಚ್ಚ ಮೊದಲಾದ ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಬಹು ಬೇಡಿಕೆಯ ಪೋಷಕ ನಟರುಗಳಲ್ಲಿ ದಿನೇಶ್ ಕೂಡಾ ಒಬ್ಬರು ಎನ್ನಲಾಗಿದೆ.
