2024-25ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಗುವ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾರತೀಯ ಖ್ಯಾತ ಚಲನಚಿತ್ರ ನಟಿ ಶಬಾನಾ ಅಝ್ಮಿ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ ಆದೇಶಿಸಿದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸಮಿತಿ ಸಭೆ ಸೇರಿ ಶಬಾನಾ ಅಝ್ಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಶಿಫಾರಸ್ಸು ಮಾಡಿದೆ.
ಹೆಸರಾಂತ ಚಲನಚಿತ್ರ ನಟಿ ಶಬಾನಾ ಅಝ್ಮಿ ಅವರನ್ನು ಜೀವಮಾನದ ಸಾಧನೆಗಾಗಿ ರಾಜ್ಯ ಸರ್ಕಾರ ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದ ದಿನವಾದ ಇಂದು (ಮಾರ್ಚ್ 8) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಟಿ ಶಬಾನಾ ಅಝ್ಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಸಂಜೆ.6.30ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ.
ಸಂಕ್ಷಿಪ್ತ ಪರಿಚಯ
1950 ಸೆಪ್ಟೆಂಬರ್ 18ರಂದು ಜನಿಸಿರುವ ಶಬಾನಾ ಅಝ್ಮಿ ಭಾರತೀಯ ಚಲನಚಿತ್ರ, ದೂರದರ್ಶನ ಹಾಗೂ ರಂಗಭೂಮಿ ನಟಿ. ಹಿಂದಿ ಚಲನಚಿತ್ರೋದ್ಯಮದಲ್ಲಿ ಅವರು 160ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಭಾರತದ ಅತ್ಯಂತ ಮೆಚ್ಚುಗೆ ಪಡೆದ ನಟಿಯರಲ್ಲಿ ಒಬ್ಬರಾದ ಅಝ್ಮಿ ಹಲವಾರು ಪ್ರಕಾರಗಳಲ್ಲಿ ನಟಿಸಿ ಮಹಿಳಾ ಪಾತ್ರಗಳಿಗೆ ಜೀವತುಂಬಿ ಹೆಸರುವಾಸಿಯಾಗಿದ್ದಾರೆ.
ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಪುರಸ್ಕಾರ ಜೊತೆಗೆ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶಬಾನಾ ಅಝ್ಮಿ ಅವರಿಗೆ ಸಂದಿವೆ. ಭಾರತ ಸರ್ಕಾರವು 1998ರಲ್ಲಿ ಪದ್ಮಶ್ರೀ ಮತ್ತು 2012ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ಆಯೋಜಿಸಿರುವ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶ್ರೀಮತಿ ಶಬಾನಾ ಆಜ್ಮಿ ಅವರಿಗೆ ಅಭಿನಂದನೆಗಳು.
— Siddaramaiah (@siddaramaiah) March 8, 2025
70ರ ದಶಕದಲ್ಲಿ ಕನ್ನೇಶ್ವರ ರಾಮ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ ಕನ್ನಡ… pic.twitter.com/WZGYFB7vKc