ಕಲರ್ಸ್ ಕನ್ನಡದಲ್ಲಿ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’ ಆರಂಭ  

Date:

ಕಲರ್ಸ್ ಕನ್ನಡ, ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿದ್ದು, ಇದೀಗ ಕಲರ್ಸ್ ಕನ್ನಡದಲ್ಲಿ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’ ಆರಂಭವಾಗಿದೆ. 

- Advertisement -

ಇದೀಗ ‘ಕ್ವಾಟ್ಲೆ ಕಿಚನ್” ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ಅನ್ನು  ಪ್ರೇಕ್ಷಕರಿಗೆ ತಲುಪಿಸುತ್ತಿದೆ. ‘ನನ್ನಮ್ಮ ಸೂಪರ್‌ ಸ್ಟಾರ್‌ʼ, ʼರಾಜ ರಾಣಿʼ, ʼಗಿಚ್ಚಿ ಗಿಲಿಗಿಲಿʼಗಳಂಥ ಟಾಪ್ ರೇಟಿಂಗ್ ಶೋಗಳನ್ನು ಕೊಟ್ಟಿರುವ ಕಲರ್ಸ್ ಕನ್ನಡವು, ‘ಕ್ವಾಟ್ಲೆ ಕಿಚನ್’ ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸುತ್ತಿದೆ. ಜೂನ್‌ 14ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’.

ಅಡುಗೆಯ ಜತೆ ನಗುವಿನ ಔತಣವನ್ನೂ ಉಣಬಡಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಜೋಡಿಗಳ ಜೊತೆಯಾಟವಿರುತ್ತದೆ. ಈ ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬರುತ್ತದೆ. ಇನ್ನೊಬ್ಬರಿಗೆ ಪಾಕಶಾಸ್ತ್ರದ ಅ ಆ ಇ ಈ ಕೂಡಾ ತಿಳಿದಿಲ್ಲ. ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕ ಪ್ರವೀಣರು ಇರತ್ತಾರೆ. ʼಕುಕ್ʼ ಮತ್ತು ‘ಕ್ವಾಟ್ಲೆ’ಗಳು ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆ, ತರ್ಲೆಗಳೇ ಈ ಶೋನ ಬ್ಯೂಟಿ. ಚಕಚಕ ಅಡುಗೆ ಮಾಡಿ ಮುಗಿಸಲು ಹೊರಟ ಪಾಕ ಪ್ರವೀಣರಿಗೆ ಅಡ್ಡಗಾಲಾಗಿ ನಿಲ್ಲುವುದೇ ಈ ʼಕ್ವಾಟ್ಲೆʼ ಸಹಾಯಕರು. ಟಾರ್ಚರ್‌ ಕೊಡಲಿಕ್ಕೆಂದೇ ಬಂದಿರುವ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪರಿಹಾಸ್ಯವನ್ನು ನೋಡಿಯೇ ಆನಂದಿಸಬೇಕು.

ಈ ಶೋ ವಿಶೇಷತೆ ಏನೆಂದರೆ, ಇಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಕ್ವಾಟ್ಲೆಗಳು ಮಾತ್ರ ಎಲಿಮಿನೇಟ್ ಆಗೋದಿಲ್ಲ! ಪ್ರತಿ ವಾರವೂ ಕುಕ್‌-ಕ್ವಾಟ್ಲೆಗಳ ಜೋಡಿ ಬದಲಾಗುತ್ತಿರುತ್ತದೆ. ಒಳ್ಳೆ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ, ಬೆಳ್ಳುಳ್ಳಿ ಈರುಳ್ಳಿಯ ನಡುವೆ ವ್ಯತ್ಯಾಸವೇ ಗೊತ್ತಿರದ ʼಕ್ವಾಟ್ಲೆʼ ಸಹಾಯಕರು ಸಿಕ್ಕು, ಉಂಟಾಗುವ ಪಜೀತಿ ನೋಡುಗರಿಗಂತೂ ಭರಫೂರ ಮನರಂಜನೆ ನೀಡುತ್ತದೆ! 

ಕುಕ್‌ಗಳಾಗಿ, ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ರಾಘವೇಂದ್ರ, ಕೆಂಪಮ್ಮ, ಪ್ರೇರಣ ಕಂಬಮ್, ಕಾವ್ಯ ಗೌಡ, ಶಿಲ್ಪ ಕಾಮತ್, ಶರ್ಮಿತ ಗೌಡ, ಸೋನಿಯಾ ಪೊನ್ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ  ಕ್ವಾಟ್ಲೆ ಕೊಡುವುದಕ್ಕೆಂದೇ ಲ್ಯಾಗ್ ಮಂಜು, ಧನರಾಜ್ ಆಚಾರ್, ತುಕಾಲಿ ಸಂತೋಷ್, ನಿವೇದಿತಾ ಗೌಡ, ಪ್ರಶಾಂತ್, ಸೂರಜ್, ಗಿಲ್ಲಿ ನಟ, ಸೋನಿ ಮುಲೆವ, ವಾಣಿ ಗೌಡ, ದೀಶಾ ಉಮೇಶ್ ಕಾರ್ಯಕ್ರಮದಲ್ಲಿ ಇರುತ್ತಾರೆ. 

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶೃತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟೆಲಿವಿಶನ್‌ನ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಚೆಫ್ ಕೌಶಿಕ್ ಇರುವುದು ‘ಕ್ವಾಟ್ಲೆ ಕಿಚನ್’ಗೆ ಹೊಸ ಕಳೆಯನ್ನು ತರಲಿದೆ. ಕಿಚನ್‌ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್‌ ನಡೆಸಿಕೊಡಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ವೇಮಗಲ್‌ನಲ್ಲಿ ಇಂದಿರಾ ಕ್ಯಾಂಟಿನ್ ಆರಂಭ

ಅಡುಗೆಯ ಔತಣ ಮತ್ತು ನಗುವಿನ ರಸದೌತಣಗಳನ್ನು ಒಟ್ಟೊಟ್ಟಿಗೇ ಬಡಿಸುವ ‘ಕ್ವಾಟ್ಲೆ ಕಿಚನ್’, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವುದಂತೂ ಗ್ಯಾರಂಟಿ. 

ಪ್ರತಿ ಶನಿವಾರ, ಭಾನುವಾರ ಕಲರ್ಸ್ ಕನ್ನಡದಲ್ಲಿ ಸಂಜೆ 9 ಗಂಟೆಗೆ ಪ್ರಸಾರ ಆಗಲಿರುವ ಒಂದೂವರೆ ಗಂಟೆಯ ”ಕ್ವಾಟ್ಲೆ ಕಿಚನ್’ ನ ಮೊದಲ ಎಪಿಸೋಡ್‌ಗಳು ಜೂನ್ 14, 15(ಶನಿವಾರ ಮತ್ತು ಭಾನುವಾರ) ರಾತ್ರಿ 9ಕ್ಕೆ ಪ್ರಸಾರ ಆಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾತ್ರಕ್ಕಾಗಿ 14 ಕೆ.ಜಿ. ತೂಕ ಹೆಚ್ಚಿಸಿಕೊಂಡ ನಿಮಿಷಾ ಸಜಯನ್: ಅಭಿನಯವನ್ನೇ ಉಸಿರಾಗಿಸಿಕೊಂಡ ಅಪರೂಪದ ಕಲಾವಿದೆ

ಭಾರತೀಯ ಚಿತ್ರರಂಗದಲ್ಲಿ ನಾಯಕಿಯೊಬ್ಬಳು ಯಶಸ್ವಿಯಾಗಬೇಕಾದರೆ ಹೇಗಿರಬೇಕು ಎಂಬುದಕ್ಕೆ ಬಹುಕಾಲದಿಂದ ಕೆಲವು ಅಲಿಖಿತ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ ಅಪರೂಪದ ಕಲಾವಿದ

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ...