ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜಾಮೀನು ಪಡೆದು ಹೊರಬಂದಿರುವ ದರ್ಶನ್ ಮೌನಕ್ಕೆ ಶರಣಾಗಿದ್ದರು. ಮೈಸೂರಿನ ಅವರ ಫಾರ್ಮ್‌ಹೌಸ್‌ನಲ್ಲಿದ್ದಾರೆ ಎಂಬ ಮಾಹಿತಿ ಇತ್ತು. ಜೈಲಿನಿಂದ ಬಂದ ಬಳಿಕ, ಇದೀಗ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಢಿದ್ದಾರೆ.
ವಿಡಿಯೋದಲ್ಲಿ, “ಈ ಬಾರಿ, ಅನಾರೋಗ್ಯದ ಕಾರಣದಿಂದಾಗಿ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಯಾರಿಗೂ ಸಿಗಲಾವುದಿಲ್ಲ. ಅಭಿಮಾನಿಗಳು ಮನೆಯ ಬಳಿ ಬರೆಬೇಡಿ. ಇದೊಮ್ಮೆ ನನ್ನನ್ನ ಕ್ಷಮಿಸಿ, ನನಗಾಗಿ ಮನೆಯ ಬಳಿ ಬಂದು, ಕಾಯಬೇಡಿ” ಎಂದು ಹೇಳಿದ್ದಾರೆ.
ತಾವು ಜೈಲಿನಲ್ಲಿದ್ದ ಸಮಯದ ಬಗ್ಗೆ ಮಾತನಾಡಿರುವ ದರ್ಶನ್, “ಆ ಸಂದರ್ಭದಲ್ಲಿ ನನ್ನ ಜೊತೆ ನಿಂತಿದ್ದು ಧನ್ವೀರ್, ರಚಿತರಾಮ್, ರಕ್ಷಿತಾ ಅವರಿಗೆ ಧನ್ಯವಾದಗಳು. ರಕ್ಷಿತಾ ಆಸೆಯಂತೆ ಪ್ರೇಮ್ ಜೊತೆಗೆ ಸಿನಿಮಾ ಮಾಡಿಯೇ ಮಾಡುತ್ತೇನೆ. ಕನ್ನಡ ಚಿತ್ರರಂಗ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ” ಎಂದೂ ಹೇಳಿದ್ದಾರೆ.
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ
— Darshan Thoogudeepa (@dasadarshan) February 8, 2025
ಇಂತಿ ನಿಮ್ಮ ದಾಸ ದರ್ಶನ್ pic.twitter.com/ERczhYj6DC
ತಮಗೆ ಧನ್ಯವಾದ ಹೇಳಿದ ದರ್ಶನ್ ಮಾತಿಗೆ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿರುವ ರಚಿತಾ ರಾಮ್, ‘ದರ್ಶನ್ ಬಾಸ್’ ಎಂದು ಕೈಮುಗಿಯುವ ಸಿಂಬಲ್ ಹಂಚಿಕೊಂಡಿದ್ದಾರೆ.
ದರ್ಶನ್ ಜೈಲು ಸೇರಿದ್ದಾಗ, ಆ ಬಗ್ಗೆ ಮಾತನಾಡಿದ್ದ ರಚಿತಾ ರಾಮ್, “ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದವರು. ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ನಂಬಲು ಸ್ವಲ್ಪ ಕಷ್ಟ. ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದ್ದರು.