ನಟ ಧನ್ವೀರ್ ಗೌಡ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರು ದಾಖಲು!

Date:

ಕನ್ನಡ ಚಿತ್ರರಂಗದ ನಟ ಧನ್ವೀರ್ ಗೌಡ ಮತ್ತು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಕಾನೂನು ಸಮರ ಮತ್ತು ವಾಗ್ವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇದೇ ಹೊತ್ತಿನಲ್ಲಿ, ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರುಗಳು ದಾಖಲಾಗುತ್ತಿವೆ.

- Advertisement -

ಧನ್ವೀರ್ ವಿರುದ್ಧ ಬ್ಯಾಟರಾಯನಪುರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ಧನ್ವೀರ್ ವಿರುದ್ಧ ಪ್ರತ್ಯೇಕ ಪ್ರಕರಣಗಳು (ಎನ್‌ಸಿಆರ್) ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಧನ್ವೀರ್ ವಿರುದ್ಧ ಗೌರವ್ ಎಂಬುವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮಿಂದ ಧನ್ವೀರ್ ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಸಿಕೊಂಡಿದ್ದರು. ಆದರೆ, ಬುಕಿಂಗ್ ಆದ ನಂತರ ಆ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಹಣ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಗೌರವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ವೋಕ್ಸ್ ವ್ಯಾಗನ್ ಕಾರನ್ನು ಧನ್ವೀರ್ ಅವರು ಶಶಿ ಎಂಬಾತನಿಗೆ ನೀಡಿದ್ದು, ಅದನ್ನು ಸಹ ವಾಪಸ್ ನೀಡದೆ ಹಣ ಮತ್ತು ಕಾರು ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಗೌರವ್ ನೀಡಿದ ದೂರಿನನ್ವಯ ಬ್ಯಾಟರಾಯನಪುರ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.

ಇನ್ನು, ಮತ್ತೊಂದೆಡೆ ಬೋಜರಾಜ್ ಎಂಬುವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಅಕ್ಟೋಬರ್ 21ರಂದು ದರ್ಶನ್ ಅವರ ಪಿಎ ನಾಗರಾಜ್ ಕರೆ ಮಾಡಿ ಧನ್ವೀರ್ ಮನೆ ಬಳಿ ಬರುವಂತೆ ತಿಳಿಸಿದ್ದರಿಂದ, ತಾವು ನಾಗರಾಜ್ ಅವರನ್ನು ಕರೆದುಕೊಂಡು ತೆರಳಿದ್ದಾಗಿ ಬೋಜರಾಜ್ ಹೇಳಿದ್ದಾರೆ. ಆ ಸಂದರ್ಭದಲ್ಲಿ ಧನ್ವೀರ್ ತಮಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೊಕೇಶನ್ ಕಳುಹಿಸುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ವಾಟ್ಸಾಪ್ ಮೂಲಕವೂ ಪದೇಪದೆ ಬೆದರಿಕೆ ಸಂದೇಶಗಳನ್ನು ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಧನ್ವೀರ್ ಮನೆ ಬಳಿ ತಾವು ತೆರಳಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆ ಸಾಕ್ಷ್ಯಗಳನ್ನು ಧನ್ವೀರ್ ಅಳಿಸಿಹಾಕುವ ಸಾದ್ಯತೆ ಇರುವುದರಿಂದ ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಸೂಕ್ತ ತನಿಖೆ ನಡೆಸುವಂತೆ ಬೋಜರಾಜ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಧನ್ವೀರ್ ತಂದೆ ತಿಮ್ಮೇಗೌಡ ಅವರು ನೀಡಿದ ಪ್ರತಿದೂರಿನಲ್ಲೂ ಬೋಜರಾಜ್ ಹೆಸರು ಉಲ್ಲೇಖವಾಗಿದೆ. ಅಕ್ಟೋಬರ್ 21ರಂದು ವಿಜಯಲಕ್ಷ್ಮಿ ಮತ್ತು ದರ್ಶನ್ ಪಿಎ ನಾಗರಾಜ್ ಅವರು ಧನ್ವೀರ್ ಮನೆಗೆ ತೆರಳಿದ್ದಾಗ, ಲೋಕೇಶ್ ಮತ್ತು ಬೋಜರಾಜ್ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು ಎಂದು ತಿಮ್ಮೇಗೌಡ ಆರೋಪಿಸಿದ್ದಾರೆ.

ಇದಕ್ಕೂ ಮುನ್ನವೇ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಕೂಡ ಧನ್ವೀರ್ ಫೋನ್‌ನಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ಕರೆ ಮತ್ತು ಸಂದೇಶಗಳ ದಾಖಲೆ ನೀಡಿ ದೂರು ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ, ನಾಗರಾಜ್ ಹಾಗೂ ಇತರರ ವಿರುದ್ಧ ತಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.

ಈ ನಡುವೆ ಧನ್ವೀರ್ ಅವರದ್ದು ಎನ್ನಲಾದ ಆಡಿಯೋ ಒಂದೂ ವೈರಲ್ ಆಗಿದ್ದು ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ(ಬಿ) ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್ ಆಯ್ಕೆ

ಭಾರತೀಯ ಜನತಾ ಪಕ್ಷದ ಔರಾದ(ಬಿ) ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್...

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...

ಮಕ್ಕಳಿಗೆ ಇಂಟರ್ನೆಟ್‌ ನಿರ್ಬಂಧ | ಸ್ವಾತಂತ್ರ್ಯಕ್ಕೆ ಕಡಿವಾಣವಲ್ಲ, ಡಿಜಿಟಲ್ ಜಗತ್ತಿಗೆ ಹೊಣೆಗಾರಿಕೆಯ ಚೌಕಟ್ಟು ಅಗತ್ಯ

ಇಂಟರ್ನೆಟ್ ಪ್ರವೇಶವನ್ನು ಕೇವಲ ತಾಂತ್ರಿಕ ಸೌಲಭ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಡಿಜಿಟಲ್...