ಮೈಸೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದ ಮನ್ವಂತ್‌ಕುಮಾರ್, ಈಗ ಭರವಸೆಯ ಆಟಗಾರ

Date:

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ, ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಒಂದಲ್ಲ ಒಂದು ದಿನ ಭಾರತ ತಂಡಕ್ಕೂ ಸೇರ್ಪಡೆಯಾಗಲಿದ್ದಾರೆ.

‘ನಾನು ಎಂದಿಗೂ ಸೇಫ್ ಜೋನ್‌ನಲ್ಲಿರಲು ಬಯಸುವುದಿಲ್ಲ. ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿ, ನೆಲೆ ನಿರ್ಮಿಸಿಕೊಳ್ಳಬೇಕೆಂದಿದ್ದೆ, ಈಗ ಆ ಗೊಂದಲವಿಲ್ಲ, ಕ್ರಿಕೆಟ್ ಈಗ ನನ್ನ ಕನಸು’ ಎಂದಿರುವ ಮೈಸೂರಿನ ಎಲ್. ಮನ್ವಂತ್‌ಕುಮಾರ್, ಇತ್ತೀಚಿಗೆ ಮುಗಿದ ಸೌರಾಷ್ಟ್ರ-ಕರ್ನಾಟಕ ರಣಜಿ ಟ್ರೋಫಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

- Advertisement -

ಸೌರಾಷ್ಟ್ರ-ಕರ್ನಾಟಕ ರಣಜಿ ಪಂದ್ಯ ಡ್ರಾ ಆದರೂ, ಮನ್ವಂತ್‌ಕುಮಾರ್ ಮಿಂಚಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಅತ್ಯಂತ ಆಕರ್ಷಕ ಶತಕ ಸಿಡಿಸಿ ಕರ್ನಾಟಕ ತಂಡಕ್ಕೆ ಆಸರೆಯಾದರು. ವೈವಿಧ್ಯಮಯ ಬೌಲಿಂಗ್ ಶೈಲಿ (ನಕಲ್ ಬಾಲ್, ಯಾರ್ಕರ್) ಹಾಗೂ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಇವರು ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

2004ರ ಜನವರಿ 11ರಂದು ಮೈಸೂರಿನ ಶ್ರೀನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮನ್ವಂತ್‌ಕುಮಾರ್‍‌ಗೆ ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ. ಆದರೆ ಆಡಲು ಮೈದಾನವಿಲ್ಲ, ಬೀದಿಯಲ್ಲೂ ಆಡುವುದನ್ನು ಬಿಡಲಿಲ್ಲ. ಅಣ್ಣ ಹೇಮಂತ್ ಕುಮಾರ್ ಕ್ರಿಕೆಟ್ ಆಟದಿಂದ ಪ್ರೇರಣೆ ಪಡೆದ ಮನ್ವಂತ್, ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕಾಲೇಜುಗಳ ಕ್ರೀಡಾ ಮಂಡಳಿಯಲ್ಲಿ ತರಬೇತುದಾರ ಮನ್ಸೂರ್ ಅಹಮದ್ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು.

ತಂದೆ ಲಕ್ಷ್ಮಿಕುಮಾರ್, ಬಿಎಂಟಿಸಿ ಬಸ್ ಡ್ರೈವರ್. ತಾಯಿ ಶ್ರೀದೇವಿ ಗೃಹಿಣಿ. ಕುಟುಂಬದ ಆರ್ಥಿಕ ಪರಿಸ್ಥಿತಿ ಸವಾಲಿನದಾಗಿದ್ದರೂ, ಇಬ್ಬರು ಮಕ್ಕಳಿಗೂ ಕ್ರಿಕೆಟ್ ತರಬೇತಿ ಕೊಡಿಸುವುದು ಕಷ್ಟವಾಗಿದ್ದರೂ, ಯಾವ ಕೊರತೆಯಾಗದಂತೆ ನೋಡಿಕೊಂಡರು. ಬಡತನ, ಹಸಿವು ಮತ್ತು ಅವಮಾನಗಳನ್ನು ಅರ್ಥ ಮಾಡಿಸಿದರು. ಓದಿನ ಜೊತೆಗೆ ಮೌಲ್ಯಗಳನ್ನು ಕಲಿಸಿದರು. ಇವರ ಪ್ರೋತ್ಸಾಹಕ್ಕೆ ಒತ್ತಾಸೆಯಾಗಿ ನಿಂತಿದ್ದು, ಇಬ್ಬರು ಮಕ್ಕಳಿಗೂ ಉಚಿತ ತರಬೇತಿ ನೀಡಿದ್ದು ಮೈಸೂರಿನ ಒಂದು ಕ್ರಿಕೆಟ್ ಸಂಸ್ಥೆ.

ಬಡವರ ಮಕ್ಕಳ ಕ್ರಿಕೆಟ್ ಪಯಣ ಆರಂಭವಾಗಿದ್ದು ಸೈಕಲ್‌ನಿಂದ. ಬಾಲಚಂದ್ರ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ಮಾಡಲು ಅವರು ಪ್ರತಿದಿನ 15 ಕಿಲೋಮೀಟರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆರಂಭದಲ್ಲಿ ಇಬ್ಬರಿಗೂ ಒಂದೇ ಸೈಕಲ್ ಇತ್ತು. ಮಕ್ಕಳ ಕ್ರಿಕೆಟ್ ಕನಸಿಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ತಂದೆ ಲಕ್ಷ್ಮಿಕುಮಾರ್ ಮತ್ತೊಂದು ಸೈಕಲ್ ಖರೀದಿಸಿದರು. ಅದು ಮನ್ವಂತ್ ಕ್ರಿಕೆಟ್ ಕನಸಿಗೆ ಭದ್ರ ಬುನಾದಿಯಾಯಿತು.

22999278 sdsd 3 2911newsroom 1732845966 906
ಅಣ್ಣ, ಅಪ್ಪ-ಅಮ್ಮನೊಂದಿಗೆ ಮನ್ವಂತಕುಮಾರ್

ಆರಂಭದಲ್ಲಿ ಬ್ಯಾಟಿಂಗ್‌ನತ್ತ ಹೆಚ್ಚು ಒಲವು ಹೊಂದಿದ್ದ ಮನ್ವಂತ್, ನಂತರ ವೇಗದ ಬೌಲಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಎಡಗೈ ಬ್ಯಾಟಿಂಗ್ ಮತ್ತು ಬಲಗೈ ವೇಗದ ಬೌಲಿಂಗ್ ಎಂಬ ಅಪರೂಪದ ಸಂಯೋಜನೆ ಅವರ ಆಟಕ್ಕೆ ವಿಶೇಷ ಮೆರುಗು ನೀಡಿತು.

ಮನ್ವಂತ್ ಅವರ ಪ್ರತಿಭೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡದ್ದು ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ. 2023ರಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಆಡಿದ ಅವರು ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿಗಳ ನೀರಿಳಿಸಿದರು. ಆ ಆವೃತ್ತಿಯಲ್ಲಿ 22 ವಿಕೆಟ್‌ಗಳನ್ನು ಪಡೆದು ಪಂದ್ಯಾವಳಿಯ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು.

ಕುತೂಹಲದ ಸಂಗತಿ ಎಂದರೆ, ಕರ್ನಾಟಕದ ಪ್ರಸ್ತುತ ಮುಖ್ಯ ತರಬೇತುದಾರ ಆರ್. ವಿನಯ್ ಕುಮಾರ್, ಹುಬ್ಬಳ್ಳಿ ಟೈಗರ್ಸ್‌ನಲ್ಲಿ ಮನ್ವಂತ್ ಮಾರ್ಗದರ್ಶಕರಾಗಿದ್ದರು. ಹತ್ತು ದಿನಗಳ ಹಿಂದೆ ಆಂಧ್ರದಲ್ಲಿ ಮನ್ವಂತ್ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ, ‘ದೊಡ್ಡ ಸಾಧನೆ ಮಾಡಬಲ್ಲ ಕೆಲವೇ ಆಟಗಾರರಲ್ಲಿ ಮನ್ವಂತ್ ಒಬ್ಬರು’ ಎಂದಿದ್ದರು. ಅಷ್ಟೇ ಅಲ್ಲ, ‘ಅವರು ತುಂಬಾ ಒಳ್ಳೆಯ ಸ್ಟ್ರೋಕ್ ಬ್ಯಾಟ್ಸ್‌ಮನ್ ಜೊತೆಗೆ ಉತ್ತಮ ಬೌಲರ್ ಕೂಡ. ಭಾರತ ತಂಡದಲ್ಲಿ ಉತ್ತಮ ವೇಗದ ಬೌಲಿಂಗ್ ಆಲ್‌ರೌಂಡರ್‍‌ಗಳು ಇಲ್ಲ. ಈತ ಅಲ್ಲಿಗೆ ಬರಬಹುದು’ ಎಂಬ ಭವಿಷ್ಯವನ್ನೂ ನುಡಿದಿದ್ದರು. ಆಶ್ಚರ್ಯವೆಂದರೆ, ಒಂದು ಕಾಲದ ಅತ್ಯುತ್ತಮ ವೇಗದ ಬೌಲರ್ ವಿನಯಕುಮಾರ್ ಕೂಡ ಬೀದಿಯಲ್ಲಿ ಆಡಿ ಬೆಳೆದ ಪ್ರತಿಭಾನ್ವಿತ ಆಟಗಾರ.

ಇದನ್ನು ಓದಿದ್ದೀರಾ?: ದಾಖಲೆಯ ರನ್ ಬೆನ್ನತ್ತಿದ ಭಾರತಕ್ಕೆ ಜಯ: ನ್ಯೂಜಿಲೆಂಡ್ ವಿರುದ್ಧ ಮಿಂಚಿದ ಸಂಜು ಸ್ಯಾಮ್ಸನ್

ವಿನಯಕುಮಾರ್ ಹೇಳಿದಂತೆ, ಬ್ಯಾಟಿಂಗ್‌ನಲ್ಲಿಯೂ ಸ್ಫೋಟಕ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿರುವ ಮನ್ವಂತ್, ಅಗತ್ಯದ ಸಂದರ್ಭದಲ್ಲಿ ತಂಡಕ್ಕೆ ರನ್‌ಗಳನ್ನು ತಂದುಕೊಡಬಲ್ಲ ಆಪತ್ಬಾಂಧವ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 2024ರ ಆವೃತ್ತಿಯಲ್ಲಿಯೂ ಅವರ ಬೌಲಿಂಗ್ ಪ್ರದರ್ಶನ ಗಮನ ಸೆಳೆಯಿತು. ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ ಮನ್ವಂತ್ ಅವರನ್ನು ಐಪಿಎಲ್‌ನತ್ತ ಕೊಂಡೊಯ್ದಿತು. 2025ರ ಐಪಿಎಲ್‌ಗಾಗಿ ದೆಹಲಿ ಕ್ಯಾಪಿಟಲ್ಸ್ ತಂಡವು ಅವರನ್ನು 30 ಲಕ್ಷ ಕೊಟ್ಟ ಖರೀದಿಸಿತು. 

ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಆಟಗಾರರೊಂದಿಗೆ ಅಭ್ಯಾಸದಲ್ಲಿ ನಿರತರಾಗುವ, ಹೊಸ ತಂತ್ರಗಳನ್ನು ಕಲಿಯುವ, ಕರುಳಿಗಿಳಿಸಿಕೊಳ್ಳುವ, ಉನ್ನತ ಮಟ್ಟದ ಕ್ರಿಕೆಟ್ ವಾತಾವರಣವನ್ನು ಹತ್ತಿರದಿಂದ ಅನುಭವಿಸುವ ಅವಕಾಶ ಗಿಟ್ಟಿಸಿಕೊಂಡರು. ದುರದೃಷ್ಟವಶಾತ್, ಆ ಸೀಸನ್‌ನಲ್ಲಿ ಮೈದಾನಕ್ಕಿಳಿದು ತಮ್ಮ ಕೈಚಳಕ ತೋರುವ ಅವಕಾಶ ಸಿಗಲಿಲ್ಲ. ಜೊತೆಗೆ 2026ರಲ್ಲಿ ಯಾವ ಫ್ರಾಂಚೈಸಿಯೂ ಮನ್ವಂತ್ ಅವರನ್ನು ಖರೀದಿಸಲಿಲ್ಲ. ಐಪಿಎಲ್ ತಂಡಕ್ಕೆ ಆಯ್ಕೆಯಾಗುವುದು ದೊಡ್ಡ ಸಾಧನೆಯಾದರೂ, ಅಲ್ಲಿ ಆಡುವ ಅವಕಾಶ ಪಡೆಯಲು ಇನ್ನಷ್ಟು ಪರಿಶ್ರಮ ಅಗತ್ಯ ಎಂಬುದನ್ನು ಅವರು ಅನುಭವದಿಂದ ಅರಿತುಕೊಂಡರು.

ಮನ್ವಂತ್‌ಕುಮಾರ್ ಕ್ರಿಕೆಟ್ ಬದುಕಿನಲ್ಲಿ 2026ರ ಅಕ್ಟೋಬರ್‍‌ನ ರಣಜಿ ಟ್ರೋಫಿ ಪ್ರದರ್ಶನ ವಿಶೇಷ ಸ್ಥಾನ ಪಡೆದಿದೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್‌ಗೆ ಇಳಿದ ಮನ್ವಂತ್, ಒಂಬತ್ತನೇ ಕ್ರಮಾಂಕದಲ್ಲಿ ಆಡುತ್ತಾ ಅದ್ಭುತ ಶತಕ ದಾಖಲಿಸಿದರು. ಕೇವಲ ತಮ್ಮ ವೈಯಕ್ತಿಕ ರನ್‌ಗಳಿಗಾಗಿ ಆಡದೆ, ತಂಡವನ್ನು ಸಂಕಷ್ಟದಿಂದ ಹೊರತರಲು ಹೋರಾಡಿದ ಅವರ ಆಟ ಎಲ್ಲರ ಗಮನ ಸೆಳೆಯಿತು. ಅವರು 214 ಎಸೆತಗಳಲ್ಲಿ 135 ರನ್ ಗಳಿಸಿ, 11 ಬೌಂಡರಿ ಮತ್ತು 6 ಸಿಕ್ಸರ್‍‌ಗಳನ್ನು ಬಾರಿಸಿದರು. ಎಂಟನೇ ವಿಕೆಟ್ ಕಳೆದುಕೊಂಡ ನಂತರವೂ ಧೈರ್ಯ ಕಳೆದುಕೊಳ್ಳದೆ ಆಡಿದ ಅವರ ಪ್ರದರ್ಶನ, ಕೆಳಕ್ರಮಾಂಕದ ಆಟಗಾರರೂ ಪಂದ್ಯಕ್ಕೆ ದೊಡ್ಡ ಕೊಡುಗೆ ನೀಡಬಲ್ಲರು ಎಂಬುದನ್ನು ಸಾಬೀತುಪಡಿಸಿತು.

ವಿಶೇಷವೆಂದರೆ, ಇದು ಅವರ ವೃತ್ತಿಜೀವನದ ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯವಾಗಿತ್ತು. ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಮನ್ವಂತ್, ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನೂ ಈ ಮೂಲಕ ಜಗತ್ತಿಗೆ ತೋರಿಸಿದರು.

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕದ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.

ಮನ್ವಂತ್ ವಿಶೇಷವೆಂದರೆ, ಆರಡಿ ಎತ್ತರ, ಎಡಗೈ ಬ್ಯಾಟಿಂಗ್ ಮತ್ತು ಬಲಗೈ ವೇಗದ ಬೌಲಿಂಗ್, ಮೈದಾನದಲ್ಲಿ ಚುರುಕಾಗಿ ಓಡಾಡುವುದು. ಮನ್ವಂತ್ ಆರಾಧಿಸುವ ಆಟಗಾರ, ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್. ಅವರ ಆಕ್ರಮಣಕಾರಿ ಆಟ ಮತ್ತು ಕಠಿಣ ಸಂದರ್ಭಗಳಲ್ಲಿ ತೋರಿಸುವ ಛಲ ಮನ್ವಂತ್ ಅವರಿಗೂ ಸ್ಫೂರ್ತಿಯಂತೆ. ಸ್ಫೂರ್ತಿಯಷ್ಟೇ ಸಾಲದು, ನಿರಂತರ ಅಭ್ಯಾಸ, ದೈಹಿಕ ಸಾಮರ್ಥ್ಯ, ಆಟದ ಮೇಲಿನ ಏಕಾಗ್ರತೆ ಮತ್ತು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುಣಗಳು ಅವರ ಮುಂದಿನ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅದಕ್ಕೆ ತಕ್ಕಂತೆ, ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಮೊನಚುಗೊಳಿಸಬಲ್ಲ ಅತ್ಯುತ್ತಮ ತರಬೇತಿ ಸಿಕ್ಕರೆ, ಒಂದಲ್ಲ ಒಂದು ದಿನ ಭಾರತ ತಂಡದ ಬ್ಲೂ ಜೆರ್ಸಿ ಧರಿಸುತ್ತಾರೆ. ಧರಿಸಬೇಕು, ಬಡವರ ಮಕ್ಕಳು ಬೆಳೆಯಬೇಕು.

JAI5795
ರಣಜಿ ಟ್ರೋಫಿಯಲ್ಲಿ… ಶತಕ ಸಂಭ್ರಮ
Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಸೇರಿ ಎಲ್ಲಾ ಉತ್ಸವಗಳಲ್ಲಿ ಆನೆಗಳ ಬಳಕೆ ನಿಷೇಧಿಸಿ, ರೋಬೋಟಿಕ್ ಆನೆ ಬಳಸಿ: ಅರಣ್ಯ ಸಚಿವರಿಗೆ ಮನವಿ

ನಾಡಹಬ್ಬ ಮೈಸೂರು ದಸರಾ ಮತ್ತು ಜಿಲ್ಲಾವಾರು ದಸರಾ ಆಚರಣೆಗಳು ಸೇರಿದಂತೆ ಯಾವುದೇ...

ಔರಾದ(ಬಿ) ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್ ಆಯ್ಕೆ

ಭಾರತೀಯ ಜನತಾ ಪಕ್ಷದ ಔರಾದ(ಬಿ) ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್...

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...